ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಲಕ್ಷ್ಯ ಕಣಕ್ಕೆ; ಭಾರತದ ಜುಲೈ 31ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ-paris olympics 2024 india full schedule of al events on july 31 wednesday pv sindhu lakshya sen badminton archery jra ,ಕ್ರೀಡೆ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಈವರೆಗೆ 2 ಪದಕಗಳನ್ನು ಮಾತ್ರ ಗೆದ್ದಿದೆ. ದೇಶಕ್ಕೆ ಮೊದಲ ಪದಕ ಗೆದ್ದಿದ್ದ ಮನು ಭಾಕರ್‌, ಮತ್ತೊಮ್ಮೆ ಮಂಗಳವಾರ ಎರಡನೇ ಪದಕವನ್ನು ಗೆದ್ದು ಬೀಗಿದರು. 10 ಮೀಟರ್ ಮಿಶ್ರ ತಂಡ ಪಿಸ್ತೂಲ್ ಈವೆಂಟ್‌ನಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ದಕ್ಷಿಣ ಕೊರಿಯಾವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದರು. ಇದರೊಂದಿಗೆ ಭಾರತ ಶೂಟಿಂಗ್‌ನಲ್ಲೇ ಎರಡು ಪದಕಗಳನ್ನು ಗೆದ್ದಂತಾಗಿದೆ. ಇದೀಗ ಜುಲೈ 31ರ ಬುಧವಾರವು ಐದನೇ ದಿನದ ಕ್ರೀಡೆಗಳು ನಡೆಯುತ್ತಿವೆ. ಈ ದಿನ ಭಾರತದ ಆಟಗಾರರು ಯಾವೆಲ್ಲಾ ಕ್ರೀಡೆಗಳಲ್ಲಿ ಪಾಲ್ಕೊಗಳ್ಳಲಿದ್ದಾರೆ ಎಂಬುದನ್ನು ನೋಡೋಣ.

Source link