ಗುಜರಾತ್ ಜೈಂಟ್ಸ್ ಬೌಲರ್ಗಳ ಅಬ್ಬರದಿಂದ ಹಾಗೂ ತಮ್ಮ ಕಳಪೆ ಬ್ಯಾಟಿಂಗ್ ನಿರ್ವಹಣೆ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲಿಗೆ ಶರಣಾಗಿದೆ. ವಡೋದರಾ ಹಂತದಲ್ಲಿ ಸತತ ಎರಡು ಗೆಲುವು ದಾಖಲಿಸಿದ್ದ ಆರ್ಸಿಬಿ, ಇದೀಗ ತವರು ಮೈದಾನದಲ್ಲಿ ಸತತ 3 ಪಂದ್ಯಗಳಲ್ಲಿ ಸೋತು ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಇದೇ ತಂಡದ ವಿರುದ್ಧ ಸೋಲುಂಡಿದ್ದ ಗುಜರಾತ್ ಜೈಂಟ್ಸ್, ಇದೀಗ 6 ವಿಕೆಟ್ಗಳಿಂದ ಗೆದ್ದು ಸೇಡು ತೀರಿಸಿಕೊಂಡಿದೆ. ಇದು ಜಿಜಿ ತಂಡದ 2ನೇ ಗೆಲುವಾಗಿದ್ದು, ಸತತ ಸೋಲುಗಳ ಬಳಿಕ ಲಯಕ್ಕೆ ಮರಳಿದೆ. ಇದೇ ಕಳಪೆ ಪ್ರದರ್ಶನ ಮುಂದುವರೆದರೆ ಆರ್ಸಿಬಿ ಪ್ಲೇಆಫ್ ಹಾದಿ ಕಠಿಣವಾಗಲಿದೆ.