ಬೈಯಪ್ಪನಹಳ್ಳಿ- ಕೃಷ್ಣರಾಜಪುರಂ ಮೆಟ್ರೋ ಪ್ರಯೋಗಿಕ ಸಂಚಾರ ಆರಂಭ ದಿನಾಂಕ | Baiyappanahalli-Krishnarajapuram metro trial run starting soon

Bengaluru

oi-Punith BU

|

Google Oneindia Kannada News

ಬೆಂಗಳೂರು, ಜುಲೈ 15: ಬೆಂಗಳೂರಿನ ಬಹುನಿರೀಕ್ಷಿತ ಬೈಯಪ್ಪನಹಳ್ಳಿ-ಕೃಷ್ಣರಾಜಪುರಂ ನೇರಳೆ ಮಾರ್ಗದಲ್ಲಿ ಮೆಟ್ರೋ ಪ್ರಾಯೋಗಿಕ ಚಾಲನೆ ಆಗಸ್ಟ್ 22 ರಂದು ಪ್ರಾರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.

ಟೆಕ್ ಹಬ್‌ ಆದ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಸುಲಭಗೊಳಿಸಲು, ಟ್ರಾಫಿಕ್‌ ನಿಯಂತ್ರಣ, ಸಂಪರ್ಕ ಸಾಧ್ಯತೆ ಹೆಚ್ಚಿಸುವ ನಿರೀಕ್ಷೆಯಿರುವ ನಮ್ಮ ಮೆಟ್ರೋದ ನೇರಳೆ ಮಾರ್ಗವು ಆಗಸ್ಟ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿದು ಬಂದಿದೆ.

Baiyappanahalli-Krishnarajapuram metro trial run starting soon

ವರದಿಯ ಪ್ರಕಾರ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅದೇ ದಿನ ಕೆಂಗೇರಿ-ಚಲ್ಲಘಟ್ಟ ಮಾರ್ಗದ ಟ್ರಯಲ್ ರನ್‌ಗೆ ಸಜ್ಜಾಗಿದೆ. ಬೈಯಪ್ಪನಹಳ್ಳಿ- ಕೃಷ್ಣರಾಜಪುರ ಮತ್ತು ಕೆಂಗೇರಿ-ಚಲ್ಲಘಟ್ಟ ಮಾರ್ಗಗಳನ್ನು ಆಗಸ್ಟ್ ಅಂತ್ಯದೊಳಗೆ ಉದ್ಘಾಟಿಸುವ ಯೋಜನೆ ಇದೆ. ಆಗಸ್ಟ್ 22 ರಂದು ನೇರಳೆ ಮಾರ್ಗದ ಎರಡೂ ಸ್ಟ್ರೆಚ್‌ಗಳಲ್ಲಿ ಟ್ರಯಲ್ ರನ್‌ಗಳು ಪ್ರಾರಂಭವಾಗಲಿವೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಆರು ಕೋಚ್ ಮೆಟ್ರೋ ರೈಲುಗಳೊಂದಿಗೆ ಟ್ರಯಲ್ ರನ್ ನಡೆಸಲಾಗುವುದು, ನಂತರ ಬೆನ್ನಗಾನಹಳ್ಳಿಯ ಭಾರತೀಯ ರೈಲ್ವೇಸ್ ಟ್ರ್ಯಾಕ್‌ನ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಓಪನ್ ವೆಬ್ ಗ್ರೈಂಡರ್ (OWG) ನ ಲೋಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಿಎಂಆರ್‌ಎಸ್ (ಮೆಟ್ರೊ ರೈಲು ಸುರಕ್ಷತೆಯ ಕಮಿಷನರ್) ನಂತರ ಮಾರ್ಗವನ್ನು ಪರಿಶೀಲಿಸಿ ಉದ್ಘಾಟನೆಗೆ ಅನುಮೋದನೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

Baiyappanahalli-Krishnarajapuram metro trial run starting soon

ಕೆಆರ್ ಪುರಂ – ಬೈಯಪ್ಪನಹಳ್ಳಿ, ಸುಮಾರು ಎರಡು ಕಿಲೋಮೀಟರ್‌ಗಳು, ವೈಟ್‌ಫೀಲ್ಡ್ ಪ್ರದೇಶವನ್ನು ಕೆಂಗೇರಿ, ಚಲ್ಲಘಟ್ಟ, ಮೆಜೆಸ್ಟಿಕ್ ಮತ್ತು ಬೆಂಗಳೂರಿನ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗವನ್ನು ಪ್ರಾರಂಭಿಸಲಾಗಿತ್ತು.

ಆದರೆ ಈ ಮೆಟ್ರೋ ಪ್ರಮುಖ ವಿಸ್ತರಣೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಟೀಕೆಗಳನ್ನು ಎದುರಿಸಿತ್ತು. ನಂತರ BMRCL ಅವರು ಬೆಂಗನಹಳ್ಳಿ ರೈಲು ನಿಲ್ದಾಣದ ಮೇಲೆ ತೆರೆದ ವೆಬ್ ಗ್ರೈಂಡರ್ ಅನ್ನು ಸ್ಥಾಪಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಭಾರತೀಯ ರೈಲ್ವೇಯಿಂದ ಅನುಮತಿ ಬೇಕಾಗಿದೆ.

ಇದಲ್ಲದೆ ನಿನ್ನೆಯಷ್ಟೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಲಕ್ಕಸಂದ್ರ ಸುರಂಗ ಮಾರ್ಗ ಹಾಗೂ ಮಹಾತ್ಮ ಗಾಂಧಿ ರಸ್ತೆಯ ಸುರಂಗ ಸ್ಟೇಷನ್ ಬಳಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ತೆರಳಿ ಪರಿಶೀಲನೆ ನಡೆಸಿದರು. ಮೆಟ್ರೋ ಸುರಂಗ ಕಾಮಗಾರಿ ಬಹಳ ಉತ್ತಮವಾಗಿ ಸಾಗುತ್ತಿದೆ. ಅಧಿಕಾರಿಗಳು ಎಷ್ಟೇ ಹೇಳಿದರೂ ಕಾಮಗಾರಿಯ ಪ್ರಗತಿಯನ್ನು ನಾನು ಕಣ್ಣಾರೆ ನೋಡಬೇಕು ಎಂದು ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು.

ಅಧಿಕಾರಿಗಳ ಮಾಹಿತಿ ಪ್ರಕಾರ 20.9 ಕಿಮೀ ಸುರಂಗ ಮಾರ್ಗ ಆಗಿದೆ. ಒಟ್ಟು 18 ನಿಲ್ದಾಣಗಳನ್ನು ಮಾಡಲಾಗುತ್ತಿದೆ. ನಾಲ್ಕು ಪ್ಯಾಕೆಜ್ ನಲ್ಲಿ ಈ ಯೋಜನೆ ತೆಗೆದುಕೊಳ್ಳಲಾಗಿದೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ 70%, 80% ಪೂರ್ಣವಾಗಿದೆ. 2025ರ ಮಾರ್ಚ್ ವೇಳೆಗೆ ಈ ಮೆಟ್ರೋ ಕಾಮಗಾರಿ ಪೂರ್ಣವಾಗಲಿದೆ ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರು, ಸರಕಾರ ಎಲ್ಲರ ಸಹಕಾರ ಬೇಕು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡಲು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಬಹಳ ದೊಡ್ಡ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

English summary

Bengaluru’s long-awaited Baiyappanahalli-Krishnarajapuram Purple Line Metro trial run will begin on August 22, reports said.

Story first published: Saturday, July 15, 2023, 14:26 [IST]

Source link