ಬೆಳಗಾವಿ-ಗೋಕಾಕ್ ಫಾಲ್ಸ್‌ಗೆ ವಿಶೇಷ ಬಸ್; ಸಮಯ, ದರ | NWKRTC Special Bus From Belagavi To Gokak Falls Fare And Schedule

Travel

oi-Gururaj S

|

Google Oneindia Kannada News

ಬೆಳಗಾವಿ, ಜುಲೈ 20; ಜುಲೈನಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ವಿವಿಧ ಪ್ರವಾಸಿ ತಾಣಗಳಿಗೆ ಜೀವಕಳೆ ಬಂದಿದೆ. ಬೆಳಗಾವಿಯ ಗೋಕಾಕ್ ಫಾಲ್ಸ್‌ ಧುಮ್ಮಿಕ್ಕುತ್ತಿದ್ದು, ಜಲಪಾತವನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗೋಕಾಕ್ ಫಾಲ್ಸ್‌ ನೋಡಲು ಹೋಗುವ ಪ್ರವಾಸಿಗರ ಅನುಕೂಲಕ್ಕಾಗಿ ಬೆಳಗಾವಿ ನಗರ ಮತ್ತು ಗೋಕಾಕ್ ಫಾಲ್ಸ್‌ ನಡುವೆ ವಿಶೇಷ ಬಸ್‌ ಓಡಿಸುತ್ತಿದೆ. ಜುಲೈ 22ರಿಂದ ಪ್ರತಿ 2ನೇ ಮತ್ತು 4 ಶನಿವಾರ ಹಾಗೂ ಪ್ರತಿ ಭಾನುವಾರ ಈ ವಿಶೇಷ ಬಸ್ ಸಂಚಾರ ನಡೆಸಲಿದೆ.

ದಾವಣಗೆರೆ-ಜೋಗ ವಿಶೇಷ ಟೂರ್ ಪ್ಯಾಕೇಜ್; ಸಮಯ, ದರದ ವಿವರಗಳು ದಾವಣಗೆರೆ-ಜೋಗ ವಿಶೇಷ ಟೂರ್ ಪ್ಯಾಕೇಜ್; ಸಮಯ, ದರದ ವಿವರಗಳು

NWKRTC Special Bus From Belagavi To Gokak Falls Fare And Schedule

ಬಸ್ ವೇಳಾಪಟ್ಟಿ, ದರ; ಬೆಳಗಾವಿ ನಗರ ಮತ್ತು ಗೋಕಾಕ್ ಫಾಲ್ಸ್‌ ನಡುವಿನ ಪ್ರಯಾಣ ದರ 190 ರೂ. ಎಂದು NWKRTC ಹೇಳಿದೆ. ಈ ಬಸ್ ವಿಶೇಷ ಸಾರಿಗೆ ಆಗಿರುವುದರಿಂದ ಈ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ‘ಶಕ್ತಿ’ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರವಾಸಿಗರಿಗೆ ಸಿಹಿಸುದ್ದಿ; ಹುಬ್ಬಳ್ಳಿ-ಜೋಗ ನಡುವೆ ವಿಶೇಷ ಬಸ್, ದರ ಪ್ರವಾಸಿಗರಿಗೆ ಸಿಹಿಸುದ್ದಿ; ಹುಬ್ಬಳ್ಳಿ-ಜೋಗ ನಡುವೆ ವಿಶೇಷ ಬಸ್, ದರ

ಬಸ್ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 9 ಗಂಟೆಗೆ ಹೊರಡಲಿದೆ. ಹಿಡಕಲ್ ಡ್ಯಾಂ ಅನ್ನು 10 ಗಂಟೆಗೆ ತಲುಪಲಿದೆ. ಹಿಡಕಲ್ ಡ್ಯಾಂ ಸೈಟ್‌ನಿಂದ 11 ಗಂಟೆಗೆ ಹೊರಟು, ಗೋಡಚಿನ ಮುಲ್ಕಿಗೆ 11.30ಕ್ಕೆ ತಲುಪಲಿದೆ. ಗೋಡಚಿನ ಮಲ್ಕಿಯಿಂದ 13 ಗಂಟೆಗೆ ಹೊರಟು ಗೋಕಾಕ್ ಫಾಲ್ಸ್‌ಗೆ 13.30ಕ್ಕೆ ತಲುಪಲಿದೆ. ಗೋಕಾಕ್ ಫಾಲ್ಸ್‌ನಿಂದ 16 ಗಂಟೆಗೆ ಹೊರಟು ಬೆಳಗಾವಿಗೆ 18 ಗಂಟೆಗೆ ತಲುಪಲಿದೆ ಎಂದು ವೇಳಾಪಟ್ಟಿ ಹೇಳಿದೆ.

ಸಿನಿಮಾ, ಪ್ರವಾಸ ಎರಡು ಇಷ್ಟವೇ? ಇಲ್ಲಿದೆ ಅವಕಾಶ: ಕೇರಳ ಪ್ರಾರಂಭಿಸಲಿದೆ 'ಸಿನಿಮಾ ಪ್ರವಾಸೋದ್ಯಮ'ಸಿನಿಮಾ, ಪ್ರವಾಸ ಎರಡು ಇಷ್ಟವೇ? ಇಲ್ಲಿದೆ ಅವಕಾಶ: ಕೇರಳ ಪ್ರಾರಂಭಿಸಲಿದೆ ‘ಸಿನಿಮಾ ಪ್ರವಾಸೋದ್ಯಮ’

ಗೋಕಾಕ್ ಫಾಲ್ಸ್‌ಗೆ ಭೇಟಿ ನೀಡುವ ಪ್ರವಾಸಿಗರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮನವಿ ಮಾಡಲಾಗಿದೆ. ಆಸಕ್ತರು ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗಾಗಿ 7760991612, 7760991613 ಮತ್ತು 7760991625 ಸಂಖ್ಯೆಗೆ ಕರೆ ಮಾಡಬಹುದು.

ಗೋಕಾಕ್ ಜಲಪಾತದ ಕುರಿತು; ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್ ಜಲಪಾತ ಉತ್ತರ ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣ. ಗೋಕಾಕ್ ಜಲಪಾತವು ಹೆದ್ದಾರಿಗೆ ಹತ್ತಿರದಲ್ಲಿದೆ. ಘಟಪ್ರಭಾ ನದಿ ಕುದುರೆಯ ಲಾಳದ ಆಕಾರದ ಬಂಡೆಯ ಮೇಲ್ಭಾಗದಿಂದ ಸುಮಾರು 52 ಮೀಟರ್ ಎತ್ತರದಿಂದ ಧುಮುಕಿದಾಗ ಗೋಕಾಕ್ ಜಲಪಾತವು ರೂಪುಗೊಳ್ಳುತ್ತದೆ.

ಇತರ ಜಲಪಾತಗಳಿಗೆ ಹೋಲಿಸಿದರೆ ಗೋಕಾಕ್ ಜಲಪಾತ ಸಾಕಷ್ಟು ಅಗಲವಿದ್ದು (ಒಟ್ಟು 177 ಮೀಟರ್) ದೂರದಿಂದ ನೋಡಿದರೂ ತುಂಬಾ ರಮಣೀಯವಾಗಿ ಕಾಣಿಸುತ್ತದೆ ಮತ್ತು ಜಲಪಾತದ ಭೋರ್ಗೆರೆತ ದೂರದಿಂದಲೇ ಕೇಳಿಸುತ್ತದೆ.

ಜಲಪಾತ ಬೆಂಗಳೂರಿನಿಂದ 622 ಕಿ. ಮೀ. ಮತ್ತು ಬೆಳಗಾವಿಯಿಂದ 62 ಕಿ. ಮೀ. ದೂರದಲ್ಲಿದೆ. ಇಲ್ಲಿಗೆ ತಲುಪಲು ಬೆಳಗಾವಿ ಹತ್ತಿರದ ವಿಮಾನ ನಿಲ್ದಾಣ ಮತ್ತು ಪ್ರಮುಖ ರೈಲು ನಿಲ್ದಾಣವಾಗಿದೆ. ಬೆಳಗಾವಿ ನಗರದಿಂದ ಟ್ಯಾಕ್ಸಿ ಪಡೆದು ಗೋಕಾಕ್ ಜಲಪಾತ ತಲುಪಬಹುದಾಗಿದೆ.

English summary

North Western Karnataka Road Transport Corporation (NWKRTC) will run special bus from Belagavi to Gokak falls. Know fare and bus schedule.

Source link