ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ಹೊಸ ಪ್ಲಾನ್‌: ಈ ಬಟನ್‌ ಒತ್ತಿದ್ರೆ ಬರ್ತಾರೆ ಪೊಲೀಸ್‌ | Bengaluru Police Installs 50 Safety Island Machines

Bengaluru

oi-Mallika P

|

Google Oneindia Kannada News

ಬೆಣಗಳೂರು, ಜೂನ್‌ 24: ಬೆಂಗಳೂರಿನಂತಹ ಮಹಾನಗರದಲ್ಲಿ ಮಹಿಳೆಯರ ಸುರಕ್ಷತೆ ದೊಡ್ಡ ಸವಾಲಾಗಿದೆ. ರಾಜ್ಯ ಸರ್ಕಾರ, ಪೊಲೀಸ್‌ ಇಲಾಖೆ ಎಷ್ಟೇ ಯೋಜನೆಗಳನ್ನು ತಂದರೂ, ಅಲ್ಲಲ್ಲಿ ಮಹಿಳೆಯರ ಮೇಲೆ ಹಲ್ಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ಹೀಗಾಗಿ ಬೆಂಗಳೂರು ಪೊಲೀಸರು ಮಹಿಳೆಯರ ರಕ್ಷಣೆಗಾಗಿ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಪುಂಡರು, ಕಿಡಿಗೇಡಿಗಳು ಬೆಂಗಳೂರು ನಗರದಲ್ಲಿ ಬಾಲ ಬಿಚ್ಚದಂತೆ ನೋಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ನೂತನ ತಂತ್ರಜ್ಲಾನಗಳನ್ನು ಬಳಸಿಕೊಂಡು ಪೊಲೀಸರು ಮಹಿಳಾ ಸುರಕ್ಷತೆಗೆ ಕ್ಷಣ ಕ್ಷಣವೂ ಮುಖ್ಯ ಎಂದು ಹಾಗೂ ಇತರ ಅಪರಾಧ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲು ಪೊಲೀಸರು ಈ ಹೊಸ ಹೆಜ್ಜೆ ಇಟ್ಟಿದ್ದಾರೆ.

Bengaluru police new plan

ಬೆಂಗಳೂರು ನಗರದಲ್ಲಿ ಸೇಫ್ಟಿ ಐಲ್ಯಾಂಡ್ ತೆರೆಯಲು ಪೊಲೀಸರು ಯೋಜನೆ ರೂಪಿಸಿದ್ದಾರೆ. ಸೇಫ್ ಸಿಟಿ ಯೋಜನೆ ಅಡಿಯಲ್ಲಿ ಬೆಂಗಳೂರಿನಲ್ಲಿ ಸೇಫ್ಟಿ ಐಲ್ಯಾಂಡ್​ಗಳ ಅಳವಡಿಕೆ ಮಾಡಲಾಗುತ್ತಿದೆ. ಮಹಿಳೆಯರು ಯಾವುದೇ ಅಪಾಯದಲ್ಲಿದ್ರೂ ಆ ಮಿಷನ್ ಬಳಿ ಹೋಗಿ ಬಟನ್ ಪ್ರೆಸ್ ಮಾಡುವ ವ್ಯವಸ್ಥೆ ಇದಾಗಿದೆ.

ಮಹಿಳೆಯರು ಅಪಾಯದಲ್ಲಿದ್ದಾಗ ನೀಲಿ ಬಣ್ಣದಲ್ಲಿರುವ ಈ ಎಮರ್ಜೆನ್ಸ್‌ ಐಲ್ಯಾಂಡ್‌ನಲ್ಲಿರುವ ರೆಡ್‌ ಬಟ್‌ ಒತ್ತಿದರೆ ಸಾಕು ತಕ್ಷಣ ಕಂಟ್ರೋಲ್ ರೂಂಗೆ ಕರೆ ಹೋಗಲಿದೆ. ಹಾಗೂ 5 ಸೆಕೆಂಡ್​ಗಳಲ್ಲಿ ಕಂಟ್ರೋಲ್ ರೂಂ ಸಿಬ್ಬಂದಿ ಕರೆ ಸ್ವೀಕರಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಕುಡಿದ ಮತ್ತಿನಲ್ಲಿ ಪುಂಡಾಟ: ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ದೌರ್ಜನ್ಯಕುಡಿದ ಮತ್ತಿನಲ್ಲಿ ಪುಂಡಾಟ: ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಮೇಲೆ ದೌರ್ಜನ್ಯ

ತಕ್ಷಣ ಬಟನ್ ಪ್ರೆಸ್ ಮಾಡಿದವರು ಇದ್ದ ಸ್ಥಳದಲ್ಲಿನ ಸಿಸಿ ಕ್ಯಾಮರಾಗಳು ಆ್ಯಕ್ಟಿವ್ ಆಗಲಿದೆ. ಜೊತೆಗೆ ಇರುವ ಸ್ಥಳದ ಸಂಪೂರ್ಣ ದೃಶ್ಯ ಕಂಟ್ರೋಲ್ ರೂಂನಲ್ಲಿ ರೆಕಾರ್ಡ್ ಆಗಲಿದೆ. ನಂತರ ಕಮಾಂಡ್‌ ಸೆಂಟರ್‌ ಸಿಬ್ಬಂದಿ ಅಪಾಯದಲ್ಲಿರುವವರ ಜೊತೆ ತಕ್ಷಣ ಪ್ರತಿಕ್ರಿಯಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸುತ್ತಾರೆ.

ಕೇವಲ 5 ನಿಮಿಷದ ಒಳಗೆ ಹೊಯ್ಸಳ ಬೀಟ್‌ ವಾಹನಗಳನ್ನು ಕಳಿಸುವ ವ್ಯವಸ್ಥೆ ಈ ಸೇಫ್ಟಿ ಐಲ್ಯಾಂಡ್‌ನಲ್ಲಿದೆ. ಸದ್ಯ ಬೆಂಗಳೂರು ನಗರದ 50 ಕಡೆಗಳಲ್ಲಿ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಸದ್ಯ ಇಂದಿರಾನಗರ , ಚಾಮರಾಜಪೇಟೆ, ಉಪ್ಪಾರ್‌ ಪೇಟೆ, ಎಂಜಿ ರೋಡ್‌ ಸೇರಿದಂತೆ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್‌ಗಳನ್ನು ಅಳವಡಿಕೆ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಉಳಿದ 20 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್‌ ಅಳವಡಿಕೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಈ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಹಲವು ಅಧಿಕಾರಿಗಳು ಮಹಿಳೆಯರಿಗೆ ಖುದ್ದಾಗಿ ಮಾಹಿತಿ ನೀಡುತ್ತಿದ್ದಾರೆ.

English summary

Bengaluru police new plan: installs 50 safety island machines for women safety. Know more

Story first published: Saturday, June 24, 2023, 17:25 [IST]

Source link