ಬೆಂಗಳೂರು ಬುಲ್ಸ್​ಗೆ ಸತತ 4ನೇ ಸೋಲು; ಖಾತೆಯೇ ತೆರೆಯದ ಗೂಳಿಗಳಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

ಪ್ರೊ ಕಬಡ್ಡಿ ಲೀಗ್ ಸೀಸನ್​ 11ರಲ್ಲಿ ತೆಲುಗು ಟೈಟಾನ್ಸ್, ಗುಜರಾತ್ ಜೈಂಟ್ಸ್, ಯುಪಿ ಯೋಧಾಸ್ ವಿರುದ್ಧ ಮುಗ್ಗರಿಸಿದ್ದ ಬೆಂಗಳೂರು ಬುಲ್ಸ್, ಬೆಂಗಳೂರು ಬುಲ್ಸ್ ಇದೀಗ 4ನೇ ಸೋಲು ಕಂಡಿದೆ. ಇಂದು (ಅಕ್ಟೋಬರ್ 25) ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 22-36 ಅಂಕಗಳ ಅಂತರದಲ್ಲಿ ಹೀನಾಯ ಪರಾಭವಗೊಂಡಿದೆ. ಸತತ ನಾಲ್ಕು ಸೋಲುಗಳೊಂದಿಗೆ ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆದುಕೊಂಡಿದೆ. ಪ್ರಮುಖ ಆಟಗಾರರ ದಂಡೇ ಇದ್ದರೂ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ.

Source link