ಬೆಂಗಳೂರು ಟ್ರಾಫಿಕ್ ಜಂಕ್ಷನ್‌ಗಳ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮೆರಾ ಬಳಕೆ | drone camera Use to monitor Bengaluru traffic junctions

Bengaluru

oi-Punith BU

|

Google Oneindia Kannada News

ಬೆಂಗಳೂರು, ಜೂನ್‌ 20: ವಾಹನ ದಟ್ಟಣೆ ಇರುವ ಜಂಕ್ಷನ್‌ಗಳನ್ನು ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಸೋಮವಾರ ಹೆಬ್ಬಾಳ ಜಂಕ್ಷನ್‌ನಲ್ಲಿ ಡ್ರೋನ್ ಕಣ್ಗಾವಲು ಪ್ರಯೋಗವನ್ನು ನಡೆಸಲಿದ್ದಾರೆ.

ಮಾರತ್ತಹಳ್ಳಿ ಜಂಕ್ಷನ್‌ನಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಪರೀಕ್ಷಿಸಲು ಅವರು ಯೋಜಿಸಿದ್ದಾರೆ. ಪ್ರಸ್ತುತ ಟ್ರಾಫಿಕ್ ಪೊಲೀಸರು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಾಂದ್ರತೆಯನ್ನು ಮೇಲ್ವಿಚಾರಣೆ ಮಾಡಲು ಎರಡು ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಅಲ್ಲದೆ ಕಾರ್ಯಾಚರಣೆಗಳಿಗೆ ಅವುಗಳನ್ನು ಬಳಸಲು ಮುಂದಾಗಿದ್ದಾರೆ.

drone camera Use to monitor Bengaluru traffic junctions

ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎನ್ ಅನುಚೇತ್ ಮಾತನಾಡಿ, ಟ್ರಾಫಿಕ್ ಆವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತಂತ್ರಜ್ಞಾನಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳಲು ನಾವು ಡ್ರೋನ್ ಕ್ಯಾಮರಾ ಬಳಸುತ್ತಿದ್ದೇವೆ. ನಾವು ಇಂದು ಪ್ರಯೋಗಗಳನ್ನು ನಡೆಸಿದ್ದೇವೆ ಮತ್ತು ವ್ಯವಸ್ಥೆಯೊಂದಿಗೆ ಪರಿಣತಿಯನ್ನು ಪಡೆಯಲು ಮುಂದಿನ ವಾರ ಅದನ್ನು ಮುಂದುವರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಟ್ರಾಫಿಕ್ ಪೊಲೀಸರು ನಗರದಲ್ಲಿ ಹೆಚ್ಚು ಜನದಟ್ಟಣೆ ಇರುವ ಎಂಟು ಜಂಕ್ಷನ್‌ಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಪರೀಕ್ಷಿಸಲು ವಾಹನಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿರುವೆಡೆ ದಟ್ಟಣೆಯನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರು ಮೊದಲ ಬಾರಿಗೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ನಗರದ ಟ್ರಾಫಿಕ್ ಅನ್ನು ನಿಯಂತ್ರಿಸಲಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಇತ್ತೀಚೆಗೆ ಹೇಳಿದ್ದರು. ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಾನು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಮೂರು ತಿಂಗಳ ಗಡುವನ್ನು ನೀಡಿದ್ದೇನೆ. ನಗರವು ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಎಂಬ ಅಪಖ್ಯಾತಿ ಗಳಿಸಿದೆ ಎಂದು ಬೆಂಗಳೂರಿನ ಕಚೇರಿಯಲ್ಲಿ ನಡೆದ ಮೊದಲ ಅಪರಾಧ ಪರಿಶೀಲನಾ ಸಭೆಯಲ್ಲಿ ಅವರು ಹೇಳಿದ್ದರು.

ಜಂಕ್ಷನ್‌ಗಳಲ್ಲಿ ನಿಯೋಜಿಸಲಾದ ಪೊಲೀಸರು ಒಂದು ಹಂತವನ್ನು ಮೀರಿದ ದಟ್ಟಣೆಯನ್ನು ನೋಡಲು ಸಾಧ್ಯವಾಗುವುದಿಲ್ಲ ಮತ್ತು ರೋಡ್‌ ಬ್ಲಾಕ್‌ಗೆ ಕಾರಣವೇನು ಎಂದು ತಿಳಿಯುವುದಿಲ್ಲ. ಇಲ್ಲಿಯೇ ಡ್ರೋನ್‌ಗಳು ಬಂದು ಅಡೆತಡೆಗಳನ್ನು ಗುರುತಿಸಲು ಪೊಲೀಸರಿಗೆ ಸಂಚಾರ ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಸೂಚಿಸಿದ ಡ್ರೋನ್ ಬಳಕೆಯನ್ನು ಅಪರಾಧದ ಮೇಲೆ ನಿಗಾ ಇಡಲು ಜನನಿಬಿಡ ಸ್ಥಳಗಳಲ್ಲಿಯೂ ಬಳಸಲಾಗುವುದು ಎಂದು ಅವರು ಹೇಳಿದ್ದರು.

English summary

The Bengaluru Traffic Police (BTP) on Monday conducted a drone surveillance experiment at the Hebbal Junction in order to manage the congested junctions.

Story first published: Tuesday, June 20, 2023, 13:31 [IST]

Source link