Bengaluru
oi-Naveen Kumar N
ಬೆಂಗಳೂರು, ಜೂನ್ 23: ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡುವ ಸಹಾಯಕರು ಎಲ್ಲೆಂದರಲ್ಲಿ ಓಡಾಡುವಂತಿಲ್ಲ, ಸಾಮಾನ್ಯ ಪ್ರದೇಶಗಳನ್ನು ಬಳಸುವಂತಿಲ್ಲ ಎಂದು ಬೆಂಗಳೂರಿನ ಅಪಾರ್ಟ್‌ಮೆಂಟ್ ಸಮುಚ್ಚಯದ ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್ (ಆರ್‌ಡಬ್ಲ್ಯೂಎ) ನಿಯಮ ವಿಧಿಸಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್ ಹೊರಡಿಸಿರುವ ನಿಯಮಗಳ ಪ್ರಕಾರ, ಅಪಾರ್ಟ್‌ಮೆಂಟ್‌ನ ಸಾಮಾನ್ಯ ಪ್ರದೇಶಗಳಲ್ಲಿ ಅವರು ಓಡಾಡುವುದರಿಂದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಅಸೌಕರ್ಯ ಉಂಟುಮಾಡುತ್ತದೆ ಎಂದು ಹೇಳಿದೆ.
“ಅಪಾರ್ಟ್‌ಮೆಂಟ್ ನಿವಾಸಿಗಳು ಓಡಾಡುವ ಎಲ್ಲಾ ಕಡೆ ಮನೆಕೆಲಸದವರು ಇದ್ದಾಗ, ನಿವಾಸಿಗಳಿಗೆ ಮುಜುಗರ ಉಂಟಾಗುತ್ತದೆ. ಅಡುಗೆಯವರು, ಬಡಗಿಗಳು ಮತ್ತು ಕೊಳಾಯಿಗಾರರು ಕಟ್ಟಡದ ಸ್ವಾಗತದಲ್ಲಿ ಸೋಫಾದಲ್ಲಿ ಕುಳಿತುಕೊಳ್ಳುತ್ತಾರೆ. ನಮ್ಮಲ್ಲಿ ಹೆಚ್ಚಿನವರು ಈಗ ಸೋಫಾಗಳಲ್ಲಿ ಕುಳಿತುಕೊಳ್ಳುವುದನ್ನು ನಿಲ್ಲಿಸಿದ್ದೇವೆ,” ಎಂದು ಆರ್‌ಡಬ್ಲ್ಯೂಎ ಹೊರಡಿಸಿದ ನೋಟಿಸ್ ಓದಿದೆ.
ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು
ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್ ಹೊರಡಿಸಿರುವ ಈ ಆದೇಶವನ್ನು ವಿಬಿನ್ ಬಾಬುರಂಜನ್ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಕ್ಲಾಸ್ ಮತ್ತು ವರ್ಗವಾದಿ ನಡುವೆ ಗೊಂದಲದಲ್ಲಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಬಳಕೆದಾರರೊಬ್ಬರು, “ಸೇವಕಿಯರಿಂದ ಸುತ್ತುವರೆದಿರುವಾಗ ನಿವಾಸಿಗಳು ಅನಾನುಕೂಲತೆಯನ್ನು ಅನುಭವಿಸಬಹುದು. ಆತ್ಮೀಯ ನಿವಾಸಿಗಳೇ, ನಾವು ಪೂರ್ಣ ಕಾರ್ಪೊರೇಟ್ ಸಂಸ್ಕೃತಿಗೆ ಪರಿವರ್ತನೆಯಾದರೆ, ನೀವು ಮನೆ ಕೆಲಸದವರನ್ನು ಹೊಂದಲು ಸಾಧ್ಯವಾಗುವುದಿಲ್ಲ ಎಂದು ನನಗೆ ವಿಶ್ವಾಸವಿದೆ. ನಾವು ಅಭಿವೃದ್ಧಿ ಹೊಂದಿದ ದೇಶವಾಗುವವರೆಗೆ ಈ ಸವಲತ್ತುಗಳನ್ನು ಆನಂದಿಸಿ,” ಎಂದು ಅಸಮಧಾನ ವ್ಯಕ್ತಪಡಿಸಿದೆ.
ಇದಕ್ಕೆ ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದು, “ನಾನು ಮೊದಲ ಮೂರು ವಾಕ್ಯಗಳನ್ನು ಓದುತ್ತಿದ್ದೇನೆ, ಅದೇನು ಕೆಟ್ಟದಲ್ಲ ಅನಿಸುತ್ತಿದೆ. ಆದರೆ ನಾಲ್ಕನೇ ವಾಕ್ಯ ಓದಿದ್ದೇನೆ, ಓಹ್, ಇಂತಹ ಜನಗಳೂ ಇರುತ್ತಾರ” ಎಂದು ಕಾಮೆಂಟ್ ಮಾಡಿದ್ದಾರೆ.
“ಜನರು ಮನುಷ್ಯರು ಮಾತ್ರ ಎಂದು ಅರ್ಥಮಾಡಿಕೊಳ್ಳುವುದು ಏಕೆ ಕಷ್ಟ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
“ಅದೇ ಸೇವಕಿ ನಿಮ್ಮ ಮನೆಯಲ್ಲಿ ತಿರುಗುವುದು, ನಿಮಗಾಗಿ ಅಡುಗೆ ಮಾಡುವುದು, ಶುಚಿಗೊಳಿಸುವುದು ಪರವಾಗಿಲ್ಲ, ಆದರೆ ಉದ್ಯಾನವನದಲ್ಲಿ ನಿಮ್ಮ ಸುತ್ತಲೂ ಅವರನ್ನು ನೋಡುವುದು ತ್ರಾಸದಾಯಕವೇ? ಕರುಣಾಜನಕ,” ಎಂದು ಇನ್ನೊಬ್ಬರು ಅಪಾರ್ಟ್‌ಮೆಂಟ್ ನಿಯಮಗಳ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
“ದಯವಿಟ್ಟು ಈ ಅಪಾರ್ಟ್‌ಮೆಂಟ್‌ನ ಹೆಸರು ಏನೆಂದು ಹೇಳಿ, ಇಂತಹ ನಿಯಮಗಳನ್ನು ಹೇಗೆ ತಪ್ಪಿಸಬೇಕು ಎಂದು ನಮಗೆ ತಿಳಿದಿದೆ. ಈ ಅನ್ನು ಆರ್‌ಡಬ್ಲ್ಯೂಎ ತಾರತಮ್ಯದ ಮೇಲೆ ಪಾಠ ಮಾಡಬೇಕಾಗಿದೆ” ಎಂದು ಬರೆದಿದ್ದಾರೆ.
English summary
A notice from the Resident Welfare Association (RWA) of a Bengaluru apartment complex, instructing domestic helpers not to use common areas, has triggered social media outrage. The notice cited resident discomfort as the reason for the directive, leading to criticism online.
Story first published: Friday, June 23, 2023, 12:59 [IST]