ಬೆಂಗಳೂರಿಗೆ ಪಾಕಿಸ್ತಾನ ಫುಟ್ಬಾಲ್ ತಂಡ: ಅಹಿತಕರ ಘಟನೆ ತಪ್ಪಿಸಲು ಭಾರೀ ಭದ್ರತೆ- ಶಸ್ತ್ರಸಜ್ಜಿತ ಪೊಲೀಸರ ನಿಯೋಜನೆ | Pakistan Football Team in Bengaluru: Heavy Security with Armed Police Deployed

Bengaluru

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 21: ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್ (ಎಸ್‌ಎಎಫ್‌ಎಫ್) ಚಾಂಪಿಯನ್‌ಶಿಪ್‌ ಪಂದ್ಯಕ್ಕಾಗಿ ಬುಧವಾರ ಬೆಂಗಳೂರಿಗೆ ಪಾಕಿಸ್ತಾನ ಫುಟ್‌ಬಾಲ್ ತಂಡ ಆಗಮಿಸುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಹೆಚ್ಚುವರಿ ಭದ್ರತೆಯನ್ನು ಬೆಂಗಳೂರು ಪೊಲೀಸರು ಒದಗಿಸಿದ್ದಾರೆ ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ.

‘ನಾವು ಈಗಾಗಲೇ ನಗರದ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎಂ ಸತ್ಯನಾರಾಯಣ್ ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಗೆ ತಿಳಿಸಿದ್ದಾರೆ.

Pakistan Football Team in Bengaluru: Heavy Security with Armed Police Deployed

‘ತಂಡವು ಆಟದ ಜಾಗಕ್ಕೆ ಪ್ರಯಾಣಿಸುವಾಗ ಮತ್ತು ಹೋಟೆಲ್‌ನಲ್ಲಿ ತಂಗುವ ಸಮಯದಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತದೆ. ಸ್ಪರ್ಧೆಯಲ್ಲಿರುವ ಇತರ ತಂಡಗಳಿಗಳಿಗಿಂತ ಹೆಚ್ಚುವರಿ ಭದ್ರತೆಯನ್ನು ಪಾಕ್‌ ತಂಡಕ್ಕೆ ಒದಗಿಸಲಾಗುವುದು. ತಂಡವು ಬೆಂಗಳೂರಿಗೆ ಬಂದಿಳಿದ ಸಮಯದಿಂದ ಪಾಕಿಸ್ತಾನಕ್ಕೆ ಅಗತ್ಯ ಭದ್ರತೆಯನ್ನು ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಫುಟ್ಬಾಲ್ ತಂಡವು ಕೊನೆಯದಾಗಿ ಭಾರತದಲ್ಲಿ ಆಗಸ್ಟ್ 2014 ರಲ್ಲಿ ಆಟವಾಡಿತ್ತು. ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಭಾರತವನ್ನು 2-0 ಗೋಲುಗಳಿಂದ ಸೋಲಿಸಿತ್ತು. ಎರಡು ಪಂದ್ಯಗಳ ಫುಟ್ಬಾಲ್ ಸರಣಿಯನ್ನು ಸಮಬಲಗೊಳಿಸಿತ್ತು. ಮೊದಲ ಪಂದ್ಯವನ್ನು ಭಾರತ 1-0 ಅಂತರದಿಂದ ಗೆದ್ದಿತ್ತು.

Pakistan Football Team in Bengaluru: Heavy Security with Armed Police Deployed

ಪಾಕಿಸ್ತಾನದ ಆಟಗಾರರಿಗೆ ಬೆಂಗಾವಲು ಪಡೆಯನ್ನು ಒದಗಿಸುವಂತೆ ಸಂಘಟಕರಿಂದ ವಿನಂತಿಯನ್ನು ಸ್ವೀಕರಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸದ್ಯದ ಪ್ರಕಾರ, ನಾವು ಶಸ್ತ್ರಸಜ್ಜಿತ ಪೊಲೀಸರನ್ನು ಹೊಂದಿರುವ ಜೀಪ್ ಅನ್ನು ಒದಗಿಸಿದ್ದೇವೆ. ಬೆಂಗಾವಲು ವಾಹನವು ಅವರ ಬಸ್ ಹೋದಲ್ಲೆಲ್ಲಾ ಹಿಂಬಾಲಿಸುತ್ತದೆ. ಇದಲ್ಲದೆ, ಅವರು ವಿನಂತಿಸಿದರೆ ನಾವು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಒದಗಿಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಟಗಾರರ ತಂಗಲಿರುವ ಹೋಟೆಲ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸುಮಾರು 10 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದೂ ಮಾಹಿತಿಯನ್ನು ನೀಡಿದ್ದಾರೆ.

English summary

Pakistan Football Team in Bengaluru: Heavy security is being provided to the Pakistan football team which is coming to Bangalore,

Story first published: Wednesday, June 21, 2023, 12:09 [IST]

Source link