India
oi-Shankrappa Parangi
ಪಾಟ್ನಾ, ಜುಲೈ 30: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಮರಳುತ್ತಾರೆ ಎಂಬುದರ ಕುರಿತು ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರ ಹೇಳಿದ್ದಾರೆ. ಇದು ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೆ ಆಗಿದೆ. ಒಂದು ವೇಳೆ ಬಿಹಾರ ಮುಖ್ಯಮಂತ್ರಿಗಳು ಮರಳಿ ಬರುವವರಿದ್ದರೂ ಸಹ ಅವರಿಗೆ ಬಿಜೆಪಿಯ ಬಾಗಿಲು ಎಂದಿಗೂ ಮುಚ್ಚಿರುತ್ತದೆ ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿಗಳು ಎನ್‌ಡಿಎ ಮೈತ್ರಿಕೂಟಕ್ಕೆ ಮರಳುತ್ತಾರೆ ಎಂದು ಹೇಳಲು ರಾಮದಾಸ್ ಅಠವಳೆ ಬಿಜೆಪಿ ವಕ್ತಾರರೂ ಅಲ್ಲ, ಎನ್ ಡಿಎ ವಕ್ತಾರರೂ ಅಲ್ಲ. ಬಿಹಾರ ಸಿಎಂ ವಾಪಸ್ ಪಕ್ಷ ಬರಲು ಬಯಸಿದರೂ ಅವರನ್ನು ಸ್ವಾಗತಿಸಲು ಬಿಜೆಪಿ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಠವಳೆ ಅವರು ಕೇಂದ್ರ ಸಚಿವ ಆದ್ದರಿಂದ ಅವರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಆದರೆ ಬಿಜೆಪಿಯು ಬಿಟ್ಟು ಹೋದವರನ್ನು ಕರೆದುಕೊಳ್ಳಲು ತನ್ನೆಲ್ಲ ಬಾಗಿಲುಗಳನ್ನು ತೆರೆದುಕೊಂಡು ಕೂತಿಲ್ಲ ಎಂದು ಸುಶೀಲ್ ಮೋದಿ ಹೇಳಿದರು ಎಎನ್‌ಐ ವರದಿ ಮಾಡಿದೆ.
ನಿತೀಶ್ ಕುಮಾರ್ ಅವರು ‘ಹೊರೆ’
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ‘ಹೊರೆ’ ಎಂದು ಕರೆದಿರುವ ಸುಶೀಲ್ ಮೋದಿಯವರು, ಅವರು ಬಿಹಾರ ರಾಜ್ಯದಲ್ಲಿ ಮತಗಳನ್ನು ವರ್ಗಾಯಿಸುವ ಮತ್ತು ಸೆಳೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಆ ಸಾಮರ್ಥ್ಯವಿಲ್ಲ ಎಂದು ಲೇವಡಿ ಮಾಡಿದರು.
ಹೊರೆಯಾದವರನ್ನು ಆರ್‌ಜೆಡಿ ಪಕ್ಷ ಸಹ ದೀರ್ಘಕಾಲ ಸಹಿಸಿಕೊಳ್ಳುವುದು ಅನುಮಾನ ಎಂಬಂತಹ ಸ್ಥಿತಿ ಅಲ್ಲಿದೆ. ಮತಗಳನ್ನು ವರ್ಗಾವಣೆ ಮಾಡುವ ಅವರ ಸಾಮರ್ಥ್ಯ ಕೊನೆಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಬಿಹಾರಕ್ಕೆ ಬರದಿದ್ದರೆ ನಿತೀಶ್ ಕುಮಾರ್ ಅವರು 44 ಸ್ಥಾನ ಗೆಲ್ಲುತ್ತಿರಲಿಲ್ಲ. ರಾಜಕೀಯದಲ್ಲಿ ಮತಗಳ ಬಲವಿದ್ದರೆ ನೀವು ಮುಖ್ಯ. ಇಲ್ಲದಿದ್ದರೆ, ನಿಮಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ನಿತೀಶ್ ಕುಮಾರ್ ಅವರು ಯಾವಾಗ ಬೇಕಾದರೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಮರಳಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಶನಿವಾರ ಹೇಳಿದ್ದರು. ಈ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಬಿಹಾರ ಸಿಎಂ ಅವರ “ರಾಜ್ಯದಲ್ಲಿ ಉತ್ತಮ ಕೆಲಸ” ವನ್ನು ಶ್ಲಾಘಿಸಿದ ಅಠವಳೆ ಅವರು, ಮುಂಬೈನಲ್ಲಿ ಮುಂದಿನ ಪ್ರತಿಪಕ್ಷಗಳ ಸಭೆಯನ್ನು ವಿಫಲವಾಗಲಿದೆ ಎಂದು ಭವಿಷ್ಯ ನುಡಿದರು. ಆ ಸಭೆಗೆ ತಾವು ಹಾಜರಾಗಬಾರದು ಎಂದು ನಿತೀಶ್ ಕುಮಾರ್ ಅವರನ್ನು ಉದ್ದೇಶಿಸಿ ಹೇಳಿದರು.
ನಿತೀಶ್ ಕುಮಾರ್ ಅವರು ನಮ್ಮೊಂದಿಗಿದ್ದಾರೆ, ಅವರು ಯಾವಾಗ ಬೇಕಾದರೂ ಎನ್‌ಡಿಎಗೆ ಮರಳಬಹುದು. ಈ ಹಿಂದೆ ಆರ್‌ಜೆಡಿಯಲ್ಲಿದ್ದು ಎನ್‌ಡಿಎಗೆ ಮರಳಿದ ಅವರು ಮತ್ತೆ ಆರ್‌ಜೆಡಿಗೆ ಹೋಗಿದ್ದಾರೆ. ನಿತೀಶ್ ಅವರು ಮತ್ತೆ ನಮ್ಮನ್ನು ಅಗಲಿದ್ದಾರೆ ಎಂದು ನನಗೆ ಸಂತೋಷವಿಲ್ಲ ಎಂದು ಕೇಂದ್ರ ಸಚಿವರು ಪಾಟ್ನಾದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುವಾಗ ತಿಳಿಸಿದ್ದರು.
ಈಗಿನ ಬಿಹಾರ್ ನಿತೀಶ್ ಕುಮಾರ್ ಅವರು ‘ಮಹಾಘಟಬಂಧನ್’ (ಮಹಾಮೈತ್ರಿಕೂಟ)ವನ್ನು ಬೆಂಬಲಿಸುವ ಮೂಲಕ ಕಳೆದ ವರ್ಷ 2022 ರ ಆಗಸ್ಟ್ ನಲ್ಲಿ ಕೇಂದ್ರ ಆಡಳಿತಾರೂಢ ಬಿಜೆಪಿ ಪಕ್ಷವನ್ನು ತೊರೆದಿದ್ದರು. ಅಲ್ಲದೇ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯುವಲ್ಲಿ ನಿರತರಾಗಿದ್ದರು.
English summary
BJP door will be closed for Bihar CM Nitish Kumar if he wants to return to party: MP Sushil Modi.
Story first published: Sunday, July 30, 2023, 19:31 [IST]