ಬಿಜೆಪಿ ವಿರುದ್ಧ ವಿಪಕ್ಷಗಳ ರಣಕಹಳೆ: ಬಿಹಾರ ರಾಜಧಾನಿ ತಲುಪಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ! | Rahul Gandhi and Mallikarjun Kharge arrives in Bihar for Patna opposition meet

India

oi-Malathesha M

|

Google Oneindia Kannada News

ಪಾಟ್ನಾ: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಸೋಲಿನ ರುಚಿ ತೋರಿಸಬೇಕು ಅನ್ನೋದೆ ವಿಪಕ್ಷಗಳ ಗುರಿ. ಈ ಕಾರಣಕ್ಕೆ ಹಲವು ತಿಂಗಳ ಪರಿಶ್ರಮದ ನಂತರ ಇಂದು ಬಿಹಾರ ರಾಜಧಾನಿಯಲ್ಲಿ ವಿಪಕ್ಷ ನಾಯಕರ ಮಹತ್ವದ ಸಭೆ ನಡೆಯಲಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೇ ಕಾರಣಕ್ಕೆ ಬಿಹಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬಿಹಾರದ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬರಮಾಡಿಕೊಳ್ಳಲು ಖುದ್ದಾಗಿ ಬಿಹಾರ ಸಿಎಂ ಆಗಮಿಸಿದ್ದರು. ಹೀಗೆ 2020ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಪಾಟ್ನಾಗೆ ರಾಹುಲ್ ಗಾಂಧಿ ಎಂಟ್ರಿ ಕೊಟ್ಟಿದ್ದಾರೆ. ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಸಂಘಟನೆ ಉಸ್ತುವಾರಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಾಥ್ ನೀಡಿದ್ದಾರೆ. ಈ ಹಿಂದೆ ತೀರ್ಮಾನವಾಗಿದ್ದ ಸಭೆ ಕೂಡ ರದ್ದಾಗಿತ್ತು, ಹೀಗಾಗಿ ಇಂದು ನಡೆಯಲಿರುವ ಸಭೆ ದೇಶದ ಗಮನ ಸೆಳೆದಿದೆ (Patna Opposition Meet).

Rahul Gandhi and Mallikarjun Kharge arrives in Bihar for Patna opposition meet

ನಿತೀಶ್ ಕುಮಾರ್ ನೇತೃತ್ವದಲ್ಲಿ ರಣತಂತ್ರ?

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧ ಪಕ್ಷಗಳ ಒಗ್ಗಟ್ಟಿಗಾಗಿ ನೇತೃತ್ವವನ್ನು ವಹಿಸಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಅವರ ತವರು ರಾಜ್ಯದಲ್ಲಿ ಸಭೆ ನಡೆಯುತ್ತಿದೆ. ಇದರ ಜೊತೆ ಮಮತಾ ಬ್ಯಾನರ್ಜಿ ಕೂಡ ಬಿಹಾರದಲ್ಲೇ ಸಭೆ ನಡೆಸಿ, ದೆಹಲಿಯಲ್ಲಿ ಬೇಡ ಎಂಬ ಶರತ್ತು ಹಾಕಿದ್ದರು. ಈ ಎಲ್ಲಾ ಕಾರಣಗಳಿಗೆ ಬಿಹಾರ ರಾಜಧಾನಿಯಲ್ಲಿ ವಿರೋಧ ಪಕ್ಷಗಳ ನಾಯಕರನ್ನ ವೆಲ್‌ಕಂ ಮಾಡಲಾಗಿದೆ. ಅಲ್ಲದೆ ಮಹತ್ವದ ಸಭೆಗೆ ವೇದಿಕೆ ಕೂಡ ಸಿದ್ಧಗೊಂಡಿದೆ. ಹಾಗಾದ್ರೆ ಯಾರೆಲ್ಲಾ ವಿರೋಧ ಪಕ್ಷಗಳ ಸಭೆಗೆ ಬರ್ತಿದ್ದಾರೆ? ಸಭೆಯ ತಯಾರಿ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಮತಾ ಬ್ಯಾನರ್ಜಿ ಬರ್ತಾರಾ? ಇಲ್ವಾ?

ಕಾಂಗ್ರೆಸ್ & ಮಮತಾ ಬ್ಯಾನರ್ಜಿ ನಡುವೆ ಭೀಕರ ಸಮರ ಇದೆ. ಈ ಮುಸುಕಿನ ಗುದ್ದಾಟ ವಿರೋಧ ಪಕ್ಷಗಳ ನಡುವೆ ದೊಡ್ಡ ಒಡಕು ತರಿಸುವ ಸಾಧ್ಯತೆ ಕೂಡ ಇದೆ. ಈ ಕಾರಣಕ್ಕೆ ಒಂದು ಸಭೆ ಆಯೋಜನೆ ಮಾಡೋದಕ್ಕೂ ವಿರೋಧ ಪಕ್ಷಗಳ ನಾಯಕರು ಪರದಾಡಿದ್ರು. ಅಲ್ಲದೆ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಸಭೆಗೆ ಬರ್ತಾರಾ? ಇಲ್ವಾ? ಅನ್ನೋದು ಕೂಡ ಬಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಆದರೆ ಈ ಎಲ್ಲಾ ಅನುಮಾನ, ಪ್ರಶ್ನೆಗಳಿಗೆ ಖುದ್ದು ಮಮತಾ ಆಗಮನವೇ ಉತ್ತರ ನೀಡಿದೆ. ಹಾಗಾದ್ರೆ ಮಮತಾ ಬ್ಯಾನರ್ಜಿ ಜೊತೆಗೆ ಇನ್ನೂ ಯಾವೆಲ್ಲಾ ವಿಪಕ್ಷಗ ನಾಯಕರು ಸಭೆಗೆ ಬಂದಿದ್ದಾರೆ? ಮುಂದೆ ಓದಿ.

ವಿರೋಧ ಪಕ್ಷಗಳ ಒಗ್ಗಟ್ಟು ವರ್ಕೌಟ್ ಆಗುತ್ತಾ?

ಜಮ್ಮು & ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಇಂದು ಬೆಳಗ್ಗೆ ಬಿಹಾರ ರಾಜಧಾನಿಗೆ ಆಗಮಿಸಿದ್ದಾರೆ. ಹಾಗೇ ಮೆಹಬೂಬಾ ಮುಫ್ತಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಮತ್ತು ಎಂಕೆ ಸ್ಟಾಲಿನ್ ಸೇರಿದಂತೆ ಹಲವು ನಾಯಕರು ನಿನ್ನೆಯಿಂದಲೇ ಬಿಹಾರ ರಾಜಧಾನಿಯಲ್ಲಿ ಹಾಜರಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಶುರುವಾಗಲಿದ್ದು, ಯಾವೆಲ್ಲಾ ನಿರ್ಧಾರ ಕೈಗೊಳ್ಳಲಿದ್ದಾರೆ? ಇದು 2024ರ ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಪ್ರಭಾವ ಬೀರಬಹುದು? ಅನ್ನೋ ಎಲ್ಲಾ ಕುತೂಹಲಕ್ಕೆ ಸಂಜೆಯೊಳಗೆ ಉತ್ತರ ಸಿಗಲಿದೆ.

ಬಿಜೆಪಿ ನಾಯಕರಿಂದಲೂ ಒಕ್ಕೂಟ ರಚನೆ?

ಅತ್ತ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಒಂದಾಗುತ್ತಿವೆ. ಆದ್ರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ಚುನಾವಣೆ ಭೀಕರ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದಂತೆ ಕಾಣುತ್ತಿದೆ. ಟಿಡಿಪಿ ಹಾಗೂ ಅಕಾಲಿ ದಳದ ಜೊತೆ ಮೈತ್ರಿಗೆ BJP ಮುಂದಾಗಿದೆ ಎಂಬ ಮಾತು ಕೇಳಿಬಂದಿತ್ತು. ಈ ಮೂಲಕ 2024ರ ಚುನಾವಣೆಯಂತು ಹೈವೋಲ್ಟೇಜ್ ಆಗೋದು ಗ್ಯಾರಂಟಿ. ಇಂದು ನಡೆಯುವ ವಿಪಕ್ಷಗಳ ನಾಯಕರ ಸಭೆ ಈ ಎಲ್ಲಾ ಮಾತುಗಳಿಗೆ ಅಂತಿಮ ರೂಪ ನೀಡಲಿದೆ.

English summary

Rahul Gandhi and Mallikarjun Kharge arrives in Bihar for Patna opposition meet.

Source link