Karnataka
oi-Malathesha M
ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಗ್ಯಾರಂಟಿ ವಾರ್ ನಿಲ್ಲುವಂತೆ ಕಾಣುತ್ತಿಲ್ಲ. ಅತ್ತ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಾ, ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಸವಾಲು ಹಾಕಿ ತಿರುಗೇಟು ನೀಡ್ತಿದೆ. ಈಗ ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಪ್ರಸಂಗ ಉದಾಹರಣೆಯಾಗಿ ನೀಡಿ, ಕೇಸರಿ ಪಡೆ ನಾಯಕರ ಕಾಲೆಳೆದಿದೆ ಕಾಂಗ್ರೆಸ್.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಇದೀಗ ಸರಿಯಾಗಿ 1 ತಿಂಗಳು ಕಳೆದಿದೆ. ಇನ್ನೊಂದ್ಕಡೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗ್ಯಾರಂಟಿ ವಿಚಾರದಲ್ಲಿ ವಾರ್ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಒಳಗೆ ಸಾಕಷ್ಟು ಸಮಸ್ಯೆ, ಗೊಂದಲ ತಲೆದೂರಿದೆ. ಇದನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ನ ನಾಯಕರೂ ತಿರುಗೇಟು ನೀಡುತ್ತಿದ್ದಾರೆ. ಅದರಲ್ಲೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಬದಲಾವಣೆ ವಿಚಾರ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರ ಕಾಂಗ್ರೆಸ್‌ಗೆ ದೊಡ್ಡ ಅಸ್ತ್ರ ನೀಡಿದಂತಾಗಿದೆ.
ಕಟೀಲ್ ವಿರುದ್ಧ ‘ಕೈ’ ಅಸ್ತ್ರ!
ಅಂದಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದನ್ನ ಕಟೀಲ್ ತಿರಸ್ಕರಿಸಿ, ಹೊಸ ವಾದ ಮುಂದಿಟ್ಟಿದ್ದಾರೆ. ಇದನ್ನೇ ಕಾಂಗ್ರೆಸ್ ಲೇವಡಿ ಮಾಡಿದ್ದು, ‘ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಉಲ್ಟಾ ಹೊಡೆದಿದ್ದಾರಂತೆ! ನಾವು ಸರ್ಕಾರ ರಚಿಸಿದ್ದೂ ಆಯ್ತು, ನಮ್ಮ 5 ಗ್ಯಾರಂಟಿಗಳಲ್ಲಿ 2 ಗ್ಯಾರಂಟಿ ಜಾರಿಯಾಗಿದ್ದೂ ಆಯ್ತು. ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಅಧ್ಯಕ್ಷ ಹುದ್ದೆಯ ಗ್ಯಾರಂಟಿ ಇಲ್ಲ! ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕ ಸಿಗುವ ಗ್ಯಾರಂಟಿಯೂ ಇಲ್ಲ! ಹೀಗಿರುವಾಗ ನಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಅಲ್ಲವೇ @BJP4Karnataka?’ ಎಂದಿದೆ.
ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಉಲ್ಟಾ ಹೊಡೆದಿದ್ದಾರಂತೆ!
ನಾವು ಸರ್ಕಾರ ರಚಿಸಿದ್ದೂ ಆಯ್ತು, ನಮ್ಮ 5 ಗ್ಯಾರಂಟಿಗಳಲ್ಲಿ 2 ಗ್ಯಾರಂಟಿ ಜಾರಿಯಾಗಿದ್ದೂ ಆಯ್ತು.
ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಅಧ್ಯಕ್ಷ ಹುದ್ದೆಯ ಗ್ಯಾರಂಟಿ ಇಲ್ಲ!
ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕ ಸಿಗುವ… pic.twitter.com/ByhXdIxqVe
— Karnataka Congress (@INCKarnataka) June 24, 2023
ಹಾಲಿ ಡಿಸಿಎಂ VS ಮಾಜಿ ಡಿಸಿಎಂ ಫೈಟ್!
ಹಾಗೇ ಡಿಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಡಾ. ಅಶ್ವತ್ಥನಾರಾಯಣ ನೀಡಿದ್ದ ಹೇಳಿಕೆಗೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ, ‘”ಡಿ.ಕೆ.ಶಿವಕುಮಾರ್ ಅವರಿಗೂ ಬೆಂಗಳೂರಿಗೂ ಏನು ಸಂಬಂಧ” ಎಂದಿರುವ @drashwathcn ಅವರೇ, ಇಂತಹ ದುರಹಂಕಾರಕಾಗಿಯೇ ರಾಜ್ಯದ ಜನ ನಿಮಗೆ ಮನೆಯ ದಾರಿ ತೋರಿಸಿದ್ದಾರೆ. @DKShivakumar ಅವರು ಈ ರಾಜ್ಯದ ಸಚಿವರು ಹಾಗೂ ಉಪಮುಖ್ಯಮಂತ್ರಿ. ಬೆಂಗಳೂರು ಅವರ ಕರ್ಮಭೂಮಿ. ಅಶ್ವಥ್ ನಾರಾಯಣ್ ಅವರೇ, ನಿಮಗೂ ನಮಗೂ ಸಂಬಂಧವಿಲ್ಲ ಎಂದು ರಾಜ್ಯದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ, ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ!’ ಎಂದಿದೆ ಕಾಂಗ್ರೆಸ್.
“ಡಿ ಕೆ ಶಿವಕುಮಾರ್ ಅವರಿಗೂ ಬೆಂಗಳೂರಿಗೂ ಏನು ಸಂಬಂಧ” ಎಂದಿರುವ @drashwathcn ಅವರೇ,
ಇಂತಹ ದುರಹಂಕಾರಕಾಗಿಯೇ ರಾಜ್ಯದ ಜನ ನಿಮಗೆ ಮನೆಯ ದಾರಿ ತೋರಿಸಿದ್ದಾರೆ.@DKShivakumar ಅವರು ಈ ರಾಜ್ಯದ ಸಚಿವರು ಹಾಗೂ ಉಪಮುಖ್ಯಮಂತ್ರಿ.
ಬೆಂಗಳೂರು ಅವರ ಕರ್ಮಭೂಮಿ.ಅಶ್ವಥ್ ನಾರಾಯಣ್ ಅವರೇ,
ನಿಮಗೂ ನಮಗೂ ಸಂಬಂಧವಿಲ್ಲ ಎಂದು ರಾಜ್ಯದ ಜನ…— Karnataka Congress (@INCKarnataka) June 24, 2023
‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಸಲು ಮುಹೂರ್ತ
ಇಂದು ಮೈಸೂರಿಗೆ ಭೇಟಿ ನೀಡಿ ಚಾಮುಂಡಿ ದೇವಿ ದರ್ಶನ ಪಡೆದ ನಂತರ ಈ ವಿಚಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಜೂನ್ 27 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು. ಈ ಮಾಹಿತಿ ಜೊತೆಗೆ, ಆಗಸ್ಟ್ 17 ಅಥವಾ 18 ರಂದು ಮನೆ ಒಡತಿಯರ ಖಾತೆಗೆ 2 ಸಾವಿರ ರೂ. ಹಣ ಡೆಪಾಸಿಟ್ ಮಾಡಲಾಗುತ್ತೆ ಎಂದು ಕೂಡ ಸ್ಪಷ್ಟಪಡಿಸಿದರು. ಹಾಗಾದರೆ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಏನೆಲ್ಲ ದಾಖಲೆಗಳನ್ನ ಸಲ್ಲಿಸಬೇಕು? ಯಾರಿಗೆಲ್ಲಾ ಅರ್ಜಿ ಸಲ್ಲಿಸಲು ಅವಕಾಶ ಇರುತ್ತೆ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಕಾಂಗ್ರೆಸ್ ಶಾಸಕನನ್ನು ಬಿಗಿದಪ್ಪಿದ ಬಿಜೆಪಿ ಫೈರ್‌ಬ್ರಾಂಡ್: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳು 5 ಗ್ಯಾರಂಟಿ ವಿಚಾರ ಹಿಡಿದು ವಾಗ್ದಾಳಿ ನಡೆಸುತ್ತಿವೆ. ಅದರಲ್ಲೂ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಸೇರಿ ಶಕ್ತಿ ಯೋಜನೆ ವಿಚಾರದಲ್ಲೂ ಸಾಕಷ್ಟು ಜಟಾಪಟಿ ನಡೆದಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆ ವಿಚಾರಕ್ಕೂ ವಿರೋಧ ಪಕ್ಷಗಳು ಫೈಟ್ ಮಾಡುತ್ತಿವೆ. ಈ ಹೊತ್ತಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
English summary
Karnataka Congress and BJP fight continuing about guarantee scheme.
Story first published: Saturday, June 24, 2023, 22:10 [IST]