ಬಿಜೆಪಿ ಮಣಿಸಲು ಬೆಂಗಳೂರಿನಲ್ಲಿ ಒಗ್ಗಟ್ಟಾಗುತ್ತಿವೆ ಬರೋಬ್ಬರಿ 24 ಪಕ್ಷಗಳು: ಯಾರೆಲ್ಲಾ ಬರುತ್ತಾರೆ ನೋಡಿ | Opposition’s Bengaluru Meet: 24 Parties Leaders Participate In Meeting

Bengaluru

oi-Naveen Kumar N

|

Google Oneindia Kannada News

ಬೆಂಗಳೂರು, ಜುಲೈ 17: ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಬಿಜೆಪಿ ವಿರುದ್ಧ ಸೆಣೆಸಲು ಕಾಂಗ್ರೆಸ್, ಆಪ್ ಸೇರಿದಂತೆ ಹಲವು ಪಕ್ಷಗಳು ಒಂದಾಗುತ್ತಿರುವುದು ಭಾರಿ ಕುತೂಹಲ ಮೂಡಿಸಿದೆ. ಸೋಮವಾರ ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದ್ದು ಒಟ್ಟು 23 ಪಕ್ಷಗಳ ನಾಯಕರು ಭಾಗವಹಿಸುತ್ತಿದ್ದಾರೆ.

ಹೌದು, ಕಾಂಗ್ರೆಸ್, ಟಿಎಂಸಿ, ಆಪ್, ಜೆಡಿಯು ಸೇರಿದಂತೆ ಹಲವು ಪ್ರಮುಖ ಪಕ್ಷಗಳು ಭಾಗವಹಿಸಲಿವೆ. ಆಪ್ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಸಭೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದಾರೆ. ಇದರ ಜೊತೆ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕೂಡ ಈ ಸಭೆಯಲ್ಲಿ ಭಾಗವಹಿಸುತ್ತಿದೆ.

Opposition’s Bengaluru Meet

ಕಾಂಗ್ರೆಸ್ ಪಕ್ಷದಿಂದ ಹಿರಿಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಭಾಗವಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳು ನಾಡು ಸಿಎಂ ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಭೆಯಲ್ಲಿ ಭಾಗವಹಿಸುತ್ತಿದ್ದು ಭಾರಿ ಕುತೂಹಲ ಕೆರಳಿಸಿದೆ. ಈ ಸಭೆಯಲ್ಲಿ ಒಗ್ಗಟ್ಟು ಮೂಡಿ, ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಸ್ಪರ್ಧಿಸಿದರೆ ಮಾತ್ರ ಬಿಜೆಪಿಗೆ ಗೆಲುವು ಕಷ್ಟವಾಗಲಿದೆ.

ಸಭೆಗೆ ಹಾಜರಾಗುತ್ತಿರುವ ಪಕ್ಷಗಳು ಮತ್ತು ನಾಯಕರ ಪಟ್ಟಿ

1) ಕಾಂಗ್ರೆಸ್
ಸೋನಿಯಾ ಗಾಂಧಿ
ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿ
ಕೆ.ಸಿ. ವೇಣುಗೋಪಾಲ್

2) ತೃಣಮೂಲ ಕಾಂಗ್ರೆಸ್
ಮಮತಾ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ
ಡೆರೆಕ್ ಒಬ್ರಿಯನ್

3) ಸಿಪಿಐ ಪಕ್ಷ
ಡಿ. ರಾಜಾ

4) ಸಿಪಿಐಂ
ಸೀತಾರಾಮ ಯಚೂರಿ

5)ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)
ಶರದ್ ಪವಾರ್, ಸಂಸದ
ಜಿತೇಂದ್ರ ಅಹ್ವಾದ್, ಶಾಸಕ
ಸುಪ್ರಿಯಾ ಸುಳೆ, ಸಂಸದೆ

6) ಜೆಡಿಯು
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಸಂಸದ ಲಲ್ಲನ್ ಸಿಂಗ್
ಸಂಜಯ್ ಕುಮಾರ್ ಜಾ

7) ಡಿಎಂಕೆ ಪಕ್ಷ
ಎಂಕೆ ಸ್ಟಾಲಿನ್, ತಮಿಳುನಾಡು ಸಿಎಂ
ಎಂ.ಕೆ. ಬಾಲು, ಸಂಸದ

8) ಆಮ್ ಆದ್ಮಿ ಪಕ್ಷ
ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ

9) ಜಾರ್ಖಂಡ್ ಮುಕ್ತಿ ಮೋರ್ಚಾ
ಹೇಮಂತ್ ಸೊರೆನ್, ಜಾರ್ಖಂಡ್ ಸಿಎಂ

10) ಶಿವಸೇನೆ (ಉದ್ದವ್ ಠಾಕ್ರೆ ಬಣ)
ಉದ್ಧವ್ ಠಾಕ್ರೆ, ಮಾಜಿ ಸಿಎಂ
ಆದಿತ್ಯ ಠಾಕ್ರೆ
ಸಂಜಯ್ ರಾವತ್, ಸಂಸದ

11) ರಾಷ್ಟ್ರೀಯ ಜನತಾ ದಳ
ಲಾಲು ಪ್ರಸಾದ್ ಯಾದವ್
ತೇಜಸ್ವಿ ಯಾದವ್, ಡಿಸಿಎಂ
ಮನೋಜ್ ಝಾ, ಸಂಸದ
ಸಂಜಯ್ ಯಾದವ್

12) ಸಮಾಜವಾದಿ ಪಕ್ಷ
ಅಖಿಲೇಶ್ ಯಾದವ್, ಮಾಜಿ ಸಿಎಂ
ಪ್ರೊ. ರಾಮಗೋಪಾಲ್ ಯಾದವ್, ಸಂಸದ
ಜಾವೇದ್ ಅಲಿ ಖಾನ್, ಸಂಸದ
ಲಾಲ್ ಜಿ ವರ್ಮಾ
ರಾಮ್ ಅಚಲ್ ರಾಜಭರ್
ಆಶಿಶ್ ಯಾದವ್

13) ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (J&KNC)
ಒಮರ್ ಅಬ್ದುಲ್ಲಾ, ಮಾಜಿ ಸಿಎಂ

14) ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (J&K PDP)
ಮೆಹಬೂಬಾ ಮುಫ್ತಿ, ಮಾಜಿ ಸಿಎಂ

15) ಸಿಪಿಐ (ಎಂಎಲ್)
ಶ್ರೀ ದೀಪಂಕರ ಭಟ್ಟಾಚಾರ್ಯ

16) ರಾಷ್ಟ್ರೀಯ ಜನತಾ ದಳ
ಜಯಂತ್ ಸಿಂಗ್ ಚೌಧರಿ, ಸಂಸದ

17) ಇಂಡಿಯನ್ ಮುಸ್ಲಿಂ ಲೀಗ್ (IUML)
ಕೆ ಎಂ ಖಾದರ್ ಮೊಹಿದೀನ್
ಪಿ ಕೆ ಕುನಾಲಿಕುಟ್ಟಿ, ಮಾಜಿ ಸಂಸದ

18) ಕೇರಳ ಕಾಂಗ್ರೆಸ್ (ಎಂ)
ಜೋಸ್ ಕೆ ಮಣಿ

19) ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK)
ತಿರು ವೈಕೋ, ಸಂಸದ
ಜಿ ರೇಣುಕಾದೇವಿ

20) ವಿಡುದಲೈ ಚಿರುತೈಗಲ್ ಕಚಿ (VCK)
ತಿರುಮಾವಳವನ್
ರವಿಕುಮಾರ್, ಸಂಸದ

21) ರೆವಲ್ಯೂಷನರಿ ಸೋಷಿಯಲಿಸ್ಟ್ ಪಕ್ಷ (RSP)
ಎನ್.ಕೆ. ಪ್ರೇಮಚಂದ್ರನ್, ಸಂಸದ

22) ಕೇರಳ ಕಾಂಗ್ರೆಸ್
ಪಿ.ಜೆ. ಜೋಸೆಫ್,
ಫ್ರಾನ್ಸಿಸ್ ಜಾರ್ಜ್ ಕೆ

23) ಕೊಂಗುನಾಡು ಮಕ್ಕಳ ದೇಸೀಯ ಕಚಿ (KMDK)
ಇ.ಆರ್.ಈಶ್ವರನ್, ಶಾಸಕ
ಎ ಕೆ ಪಿ ಚಿನರಾಜ್, ಸಂಸದ

24) ಎಐಎಫ್‌ಬಿ (The All India Forward Bloc)
ಜಿ.ದೇವರಾಜನ್

English summary

24 parties leaders participated in the opposition’s meeting held in Bengaluru on July 17th, where Arvind Kejriwal, the leader of AAP, was also in attendance. Shiv Sena (UBT) will be part of the meeting, Know the Parties and Leaders List.

Story first published: Sunday, July 16, 2023, 21:23 [IST]

Source link