ಬಿಜೆಪಿ ಆಂತರಿಕ ಕಚ್ಚಾಟ; ಬಿಜೆಪಿಯವರ ಬಾಯಿಗೆ ನಾವು ಹಿಂದೆಯೂ ಬೀಗ ಹಾಕಿಲ್ಲ: ಡಿ ಕೆ ಶಿವಕುಮಾರ್‌ ಹೀಗೆ ಹೇಳಿದ್ಯಾಕೆ? | DCM DK Shivakumar Fierce Attack Against Karnataka BJP

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 01: ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಜೋರಾಗಿದ್ದು, ಸೋಲಿನ ಪರಾಮರ್ಶೆ ಹಾಗೂ ಲೋಕಸಭಾ ಚುನಾವಣೆಯ ತಯಾರಿಯ ನಡುವೆ ಆಂತರಿಕ ಕಚ್ಚಾಟಕ್ಕೆ ಬ್ರೇಕ್‌ ಹಾಕಲು ಬಿಜೆಪಿ ಮುಂದಾಗಿದೆ.

ಈ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್‌ ಮಾತನಾಡಿ, ಬಿಜೆಪಿಯವರ ಬಾಯಿಗೆ ನಾವು ಹಿಂದೆಯೂ ಬೀಗ ಹಾಕಿಲ್ಲ. ಈಗಲೂ ಹಾಕುವುದಿಲ್ಲ. ಅವರ ಅನುಭವ, ನುಡಿಮುತ್ತುಗಳನ್ನು ಜನರಿಗೆ ತಿಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

 DCM DK Shivakumar Fierce Attack

ಇನ್ನೂ ಗ್ಯಾರಂಟಿ ಯೋಜನೆಗಳ ಜಾರಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಪೂರ್ವದಲ್ಲಿ ನಾವು ರಾಜ್ಯದ ಜನತೆಗೆ ಕೊಟ್ಟ ಭರವಸೆಯನ್ನ ಜಾರಿಗೊಳಿಸುತ್ತೇವೆ. ಅನ್ನ ಭಾಗ್ಯ ಯೋಜನೆಯನ್ನ ಜಾರಿಗೆ ಮಾಡುತ್ತೇವೆ. ಈಗ 5 ಕೆ.ಜಿ ಅಕ್ಕಿ ಹಾಗೂ ಹೆಚ್ಚುವರಿ ಅಕ್ಕಿ ಸಿಗುವವರೆಗೂ ಅದಕ್ಕೆ ಪ್ರತಿಯಾಗಿ ಹಣ ನೀಡುತಿದ್ದೇವೆ ಎಂದು ಹೇಳಿದರು.

ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ. ಬಿಜೆಪಿ ಬಡವರ ಮೇಲೆ ಹೇಗೆ ಗದಾಪ್ರಹಾರ ಮಾಡುತ್ತಿದೆ, ಅಕ್ಕಿ ವಿಚಾರದಲ್ಲೂ ಅವರು ಹೇಗೆ ರಾಜಕೀಯ ಮಾಡುತ್ತಿದ್ದಾರೆ, ನಾವು ಜನರಿಗೆ ಅಕ್ಕಿ ನೀಡಲು ಎಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಗೋದಾಮಿನಲ್ಲಿ ಅಕ್ಕಿ ಹುಳ ಹಿಡಿಯುತ್ತಿದ್ದರು ಬಡವರಿಗೆ ನೀಡದೆ ರಾಜಕಾರಣ ಮಾಡುತ್ತಿದ್ದಾರೆ. ಇದೆಲ್ಲವೂ ಜನರಿಗೆ ಗೊತ್ತಿದೆ. ನಾವು ದೀರ್ಘಾವಧಿ ಪರಿಹಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ನಿಗದಿ ಮಾಡಿರುವ ಮೊತ್ತಕ್ಕೆ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ನಮ್ಮ ರಾಜ್ಯದಲ್ಲಿ ಅಕ್ಕಿ ಬೆಳೆದು ಈ ಮೊತ್ತಕ್ಕೆ ನೀಡಿದರೆ ಅವರಿಗೂ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿದರು.

 'ಬ್ರ್ಯಾಂಡ್ ಬೆಂಗಳೂರು' ಪೋರ್ಟಲ್‌ಗೆ ಬಂದ 20,000 ಕ್ಕೂ ಹೆಚ್ಚು ಸಲಹೆಗಳು- ಡಿಕೆಶಿ ಕರೆಗೆ ಭರ್ಜರಿ ರೆಸ್ಪಾನ್ಸ್‌- ಏನಿದೆ ತಿಳಿಯಿ ‘ಬ್ರ್ಯಾಂಡ್ ಬೆಂಗಳೂರು’ ಪೋರ್ಟಲ್‌ಗೆ ಬಂದ 20,000 ಕ್ಕೂ ಹೆಚ್ಚು ಸಲಹೆಗಳು- ಡಿಕೆಶಿ ಕರೆಗೆ ಭರ್ಜರಿ ರೆಸ್ಪಾನ್ಸ್‌- ಏನಿದೆ ತಿಳಿಯಿ

ನಮಗೆ ಕೆಲ ರಾಜ್ಯದವರು ಒಂದೆರಡು ತಿಂಗಳು ಅಕ್ಕಿ ಪೂರೈಸಲು ಮುಂದಾಗಿದ್ದರು. ನಮಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಬೇಕು. ನಾವು ಆರಂಭದಲ್ಲಿ ಅಕ್ಕಿ ನೀಡಿ ನಂತರ ಅದನ್ನು ನಿಲ್ಲಿಸುವಂತೆ ಆಗಬಾರದು. ಅಕ್ಕಿ ಇಲ್ಲದಿದ್ದರೆ ಹಣ ನೀಡಿ ಎಂದು ಬಿಜೆಪಿ ನಾಯಕರು ಕೊಟ್ಟಿರುವ ಸಲಹೆಯಂತೆ ಈಗ ಹಣ ನೀಡಲು ನಿರ್ಧರಿಸಿದ್ದೇವೆ. ಅಕ್ಕಿ ಖರೀದಿಗೆ ನಮ್ಮ ಸಚಿವರು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಕಿ ಸಿಗುವವರೆಗೂ ಬೇರೆ ಪಕ್ಷಗಳ ಸಲಹೆಯಂತೆ ಹಣ ನೀಡಲು ನಿರ್ಧರಿಸಿದ್ದೇವೆ ಎಂದರು.

ಗ್ಯಾರಂಟಿಗಳ ಅನುಷ್ಟಾನ ಕುರಿತು ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಮಾತನಾಡಿ, ಬಹಳ ಸಂತೋಷ. ಪ್ರತಿಭಟನೆ ಮಾಡಬೇಕು. ನಾವು ಅವರನ್ನು ತಡೆಯುವುದಿಲ್ಲ. ಬಿಜೆಪಿಯವರು ಕೊಟ್ಟ ಮಾತು ಈಡೇರದೇ ಇರುವುದರ ಬಗ್ಗೆ ಹೋರಾಟ ಮಾಡಲು ಹೇಳಿದ್ದೇನೆ. ಅವರು ಹೋರಾಟದ ಮೂಲಕ ನಮ್ಮ ಯೋಜನೆಗೆ ಪ್ರಚಾರ ನೀಡುತ್ತಿದ್ದಾರೆ ಎಂದರು.

ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ವಿಚಾರವಾಗಿ ಮಾತನಾಡಿ, ಯಾರ್ಯಾರ ನೋವು ಇದೆ, ಸಮಸ್ಯೆ ಇದೆ ಅದೆಲ್ಲವೂನ್ನು ನಮ್ಮ ಶಿಸ್ತು ಪಾಲನೆ ಸಮಿತಿ ನೋಡಿಕೊಳ್ಳುತ್ತದೆ ಎಂದ ಅವರು, ಏಕ ರೂಪ ನಾಗರಿಕತೆ ಜಾರಿ ವಿಚಾರವಾಗಿ ನಮ್ಮ ರಾಷ್ಟ್ರೀಯ ಪಕ್ಷ ಅದರ ಬಗ್ಗೆ ಅಭಿಪ್ರಾಯ ತಿಳಿಸುತ್ತದೆ. ನಾವು ಬದುಕುತ್ತಿದ್ದೇವೆ, ನಮ್ಮ ಪಾರ್ಟಿ ಒಂದೊಂದು ಇಂಚು ತಿಳಿಸುತ್ತದೆ. ಅದರ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ, ಇದು ನನ್ನ ಸ್ಟ್ಯಾಂಡ್ ಎಂದು ಹೇಳಿದರು.

English summary

DCM DK Shivakumar Said That BJP leaders are playing politics on the issue of rice

Source link