ಬಿಜೆಪಿಯ ಹಲವು ಯೋಜನೆಗೆ ಈ ಸರ್ಕಾರ ಮಣ್ಣು ಹಾಕಿದೆ: ಬಿ ವೈ ವಿಜಯೇಂದ್ರ ಎಚ್ಚರಿಕೆ | BY Vijayendra Fierce Attack Against Congress Government

Karnataka

oi-Reshma P

|

Google Oneindia Kannada News

ಬೆಂಗಳೂರು,ಜುಲೈ 14: ಬಿಜೆಪಿ ಸರ್ಕಾರದ ಅವಧಿಯ ಹಾಗೂ ಮಾಜಿ‌‌ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ತಂದ ಅನೇಕ ಯೋಜನೆಗಳಿಗೆ ಈ ಸರ್ಕಾರ ಮಣ್ಣು ಹಾಕಿದೆ. ಮುಂದಿನ ದಿನಗಳಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ಬಿ ವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇಂದ್ರದ ಯೋಜನೆಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಟೀಕೆ ಮಾಡೋದೇ ಇವರ ಉದ್ದೇಶವಾಗಿದೆ. ಈ ಕಾಂಗ್ರೆಸ್ ಸರ್ಕಾರ ಬಡವರ, ರೈತರ ಬಗ್ಗೆ ಕಾಳಜಿ ತೋರಿಸ್ತಿಲ್ಲ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

BY Vijayendra Fierce Attack Against Congress Government

ಇನ್ನೂ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕುಡಿಯುವ ನೀರಿಗೆ ಹಾಹಾಕಾರ ಇದೆ, ಬರದ ಪರಿಸ್ಥಿತಿ ಇದೆ. ಇದರ ಬಗ್ಗೆ ಸದನದಲ್ಲೂ ಚರ್ಚೆ ಆಗಲಿಲ್ಲ ಎಂದು ಬೇಸರ ವ್ಯಕ್ಯಪಡಿಸಿದರು.

ಇತ್ತ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಅವರು, ಗ್ಯಾರಂಟಿ ಕಾರ್ಡ್ ಗಳಿಂದ ಜನಕ್ಕೆ ದೊಡ್ಡ ಸಹಾಯ ಏನೂ ಆಗ್ತಿಲ್ಲ ಎಂದ ಅವರು,‌ ಜನಸೇವಾ ಟ್ರಸ್ಟ್ ಗೆ ಮಂಜೂರಾದ ಭೂಮಿ ವಾಪಸ್ ಪಡೆಯುವ ವಿಚಾರವಾಗಿ,‌ ಇದು ನಿರೀಕ್ಷಿತವೇ ಆಗಿತ್ತು. ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗ್ತಿದೆ ಅಂತ ಅವರೇ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಸಚಿವರು ಆರಂಭದಲ್ಲೇ ಆರ್ ಎಸ್ ಎಸ್ ಗೆ ಮಂಜೂರಾದ ಭೂಮಿ ವಾಪಸ್ ಬಗ್ಗೆ ಮಾತಾಡ್ತಾರೆ. ಜನಸೇವಾ ವಿದ್ಯಾಕೇಂದ್ರ ಲಕ್ಷಾಂತರ ಬಡಮಕ್ಕಳಿಗೆ ವಿದ್ಯೆ ಕೊಡ್ತಿರುವ ಸಂಸ್ಥೆ. ಅಂತಹ ಸಂಸ್ಥೆಯಿಂದ ಭೂಮಿ ವಾಪಸ್ ಸರಿಯಿಲ್ಲ. ನಾನೂ ಕೂಡಾ ಅದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ತಿಳಿಸಿದರು.

English summary

The Congress government is not showing concern for the poor and farmers B Y Vijayendra Said.

Story first published: Friday, July 14, 2023, 15:06 [IST]

Source link