ಬಿಜೆಪಿಯ ಅವನತಿ ಕರ್ನಾಟಕದಿಂದ ಶುರು; ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ: ಸಿದ್ದರಾಮಯ್ಯ | Congress Has Win Wherever Narendra Modi Has Visited Says Siddaramaiah

Karnataka

oi-Reshma P

|

Google Oneindia Kannada News

ಬೆಂಗಳೂರು , ಜುಲೈ 14: ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ. ಇನ್ನೂ ಮುಂದೆ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಕಿವಿ ಮಾತು ಹೇಳಿದರು.

ಶುಕ್ರವಾರ ವಿಧಾನ ಪರಿಷತ್‌ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ 28 ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ‌. ಯಾವ ಪ್ರಧಾನಿ ಕೂಡಾ ರಾಜ್ಯದ ಚುನಾವಣೆಗೆ ಇಷ್ಟು ಬಾರಿ ಬಂದ ನಿದರ್ಶನ ಇಲ್ಲ. ಆದರೆ ಮೋದಿ ಪ್ರವಾಸ ಮಾಡಿದ ಕಡೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರು. ಈ ಹಿನ್ನಲೆಯಲ್ಲಿ ನರೇಂದ್ರ ಮೋದಿ ಅವರನ್ನು ಜಾಸ್ತಿ ಅವಲಂಬಿತರಾಗಬೇಡಿ ಆಗಬೇಡಿ ಎಂದು ಬಿಜೆಪಿಗೆ ಸಲಹೆ ನೀಡಿದರು.

Congress Has Win Wherever Narendra Modi Has Visited Says Siddaramaiah

ನರೇಂದ್ರ ಮೋದಿ ಪಾಪ್ಯುಲಾರಿಟಿ ಇದೆ. ಅದರಲ್ಲಿ ಡೌಟ್ ಇಲ್ಲ. ಆದರೆ ಅದು ಇವಾಗ ಮಂಕಾಗಿದೆ. ಕರ್ನಾಟಕದಿಂದ ಶುರುವಾಗಿದೆ ನಿಮ್ಮ ಅವನತಿ. ನರೇಂದ್ರ ಮೋದಿ ಹೊಗಳುವುದು ಬಿಟ್ಟರೆ ಬಿಜೆಪಿಗೆ ಏನಿದೆ? ಎಂದು ತರಾಟೆಗೆ ತೆಗೆದುಕೊಂಡ ಅವರು,‌ ಕಾಂಗ್ರೆಸ್ ನಲ್ಲಿ ಎರಡು ಬಾರಿ ಸಿಎಂ ಆಗಲು ಅವಕಾಶ ಸಿಕ್ತು, ಅದಕ್ಕೆ ಪಕ್ಷಕ್ಕೆ ಋಣಿ ಆಗಿದ್ದೇನೆ ಎಂದರು.

ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ಮು ಘೋಷಿಸಿ ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ನ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದರು.

ಪಂಪ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನುವ ಮೌಲ್ಯದಿಂದ ಕನ್ನಡ ಸಂಸ್ಕೃತಿಯನ್ನು ಅರಳಿಸಿದರು. ಹೀಗೆ ಪಂಪನಿಂದ ಹಿಡಿದು ಬಸವಣ್ಣನವರನ್ನು ಪ್ರಸ್ತಾಪಿಸಿ ಇವರೆಲ್ಲರ ಆಶಯಗಳೇ ನಮ್ಮ ಸಂವಿಧಾನದಲ್ಲಿದೆ. ಆದರೆ ತಾನು ಮಾತ್ರ ಶ್ರೇಷ್ಠ ಎನ್ನುವ ಹಿಟ್ಲರ್ ಒಬ್ಬ ಮತಾಂಧ. ಆತ ಮನುಷ್ಯ ವಿರೋಧಿ ಎಂದರು.

ಹಿಟ್ಲರ್ ತನ್ನ ತಿಕ್ಕಲುತನದಿಂದ ಹೇಗೆ ಮನುಷ್ಯರ ಮಾರಣ ಹೋಮಕ್ಕೆ ಕಾರಣನಾದ ಎಂದು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಮುಖ್ಯಮಂತ್ರಿಗಳು, ‘ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು ?” ಎಂದು ಪ್ರಶ್ನಿಸಿದರು.

ನಾನು ಮಾತಾಡುವಾಗ ಯಾರೂ ದಾರಿ ತಪ್ಪಿಸಲು ಸಾದ್ಯವಿಲ್ಲ. ಈ ಚುನಾವಣೆಯಲ್ಲಿ ಜನ ಕೋಮುವಾದದ ವಿರುದ್ದ, ಭ್ರಷ್ಟಾಚಾರ ದ ವಿರುದ್ದ, ಬೆಲೆ ಏರಿಕೆ ವಿರುದ್ದ ಮತ ಕೊಟ್ಟಿದ್ದಾರೆ. ನಮ್ಮ ಐದು ಗ್ಯಾರಂಟಿ ಗಳ ಪರ ಮತ ನೀಡಿದ್ದಾರೆ. ನೀವು ಪ್ರಣಾಳಿಕೆ ಕೊಟ್ಟಿದ್ದೀರಿ, ಜೆಡಿಎಸ್ ಕೂಡಾ ಪಂಚ ರತ್ನ ಗಳು ಅಂತಾ ಹೋದ್ರು ಕುಮಾರಸ್ವಾಮಿ123 ಬರಲಿಲ್ಲ ಅಂದ್ರೆ ಪಾರ್ಟಿ ವಿಸರ್ಜನೆ ಮಾಡ್ತೀನಿ ಅಂತಾ. ಪಾಪ ಅವರು 19 ಸ್ಥಾನಕ್ಕೆ ಬಂದು ಬಿಟ್ಟಿದಾರೆ ಎಂದು ವ್ಯಂಗ್ಯವಾಡಿದರು.

2005 ರ ವರೆಗೆ ನಾನು ಜೆಡಿಎಸ್ ನಲ್ಲಿ ಇದ್ದೆ. ಅಮೇಲೆ ನನ್ನ ಪಕ್ಷ ವಿರೋಧಿ ಚಟುವಟಿಕೆ ಅಂತ ಹೇಳಿ ತೆಗೆದು ಹಾಕಿದ್ರು. ಈ ಬಾರಿ ನಾವುಕೇವಲ ಭರವಸೆ ಅಂತಾ ಕೊಡಲಿಲ್ಲ. ಗ್ಯಾರಂಟಿ ಅಂತಾ ಹೇಳಿದ್ದೇವೆ, ಜನ ನಂಬಿದ್ದಾರೆ. ಇನ್ನು ಮೇಲೆ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ. ಒಂದು ಕಾಲದಲ್ಲಿ ಇಂದಿರಾಗಾಂಧಿ ಅವರಿಗೂ ಜನಪ್ರಿಯತೆ ಇತ್ತು. ಇವತ್ತು ನರೇಂದ್ರ ಮೋದಿ ಜನಪ್ರಿಯ ತೆ ಕಡಿಮೆ ಆಗ್ತಾ ಇದೆ, ಮೇಲಿದ್ದವರು ಕೆಳಗೆ ಬರಬೇಕು. ಇದು ಪ್ರಜಾಪ್ರಭುತ್ವ ಎಂದು ಹೇಳಿದರು.

English summary

assembly session: CM Siddaramaiah Said That Congress has win wherever Modi has visited

Source link