ಬಿಗಿ ಭದ್ರತೆಯ ನಡುವೆ ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಕೈಗೊಂಡ ಬಾಲಿವುಡ್ ನಟಿ ಸಾರಾ ಅಲಿ ಖಾನ್ | Sara Ali Khan undertakes Amarnath Yatra in Jammu and Kashmir; Watch video

India

oi-Mamatha M

|

Google Oneindia Kannada News

ಶ್ರೀನಗರ, ಜುಲೈ. 20: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದು ಹಲವು ಟ್ರೋಲ್‌ಗಳಿಗೂ ಕಾರಣವಾಗಿತ್ತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ಈಗ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.

ತಮ್ಮ ರಜೆಯ ದಿನಗಳನ್ನು ಕಳೆಯುತ್ತಿರುವ ನಟಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೇಶದ ಅತ್ಯಂತ ಪವಿತ್ರ ಹಿಂದೂ ಯಾತ್ರಾ ಸ್ಥಳಗಳಲ್ಲಿ ಒಂದಾದ ಅಮರನಾಥಕ್ಕೆ ಭಾರಿ ಭದ್ರತೆಯಲ್ಲಿ ಹೋಗುತ್ತಿದ್ದಾರೆ. ಸಾರಾ ಅಲಿ ಖಾನ್ ಅವರ ವೀಡಿಯೊಗಳು ಮತ್ತು ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.

Sara Ali Khan undertakes Amarnath Yatra

ಇತ್ತೀಚೆಗಷ್ಟೇ ಅವರ ಚಿತ್ರ ಜರಾ ಹಟ್ಕೆ ಜರಾ ಬಚ್ಕೆ ಯಶಸ್ಸಿ ಪ್ರದರ್ಶನ ಕಂಡಿದೆ. ಇದಾದ ನಂತರ, ಸಾರಾ ಅಲಿ ಖಾನ್ ಮತ್ತೊಂದು ತೀರ್ಥಯಾತ್ರೆ ನಡೆಸುತ್ತಿದ್ದಾರೆ. ಅಮರನಾಥ ಗುಹೆಯ ಭೂಪ್ರದೇಶಗಳ ಮೂಲಕ ಭದ್ರತೆಯ ಪರಿವಾರದೊಂದಿಗೆ ನಟಿ ನಡೆದುಕೊಂಡೆ ಹೋಗುತ್ತಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇತರ ಯಾತ್ರಾರ್ಥಿಗಳು ಫೋಟೋ, ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ.

ಅಮರನಾಥ ಯಾತ್ರೆಯು ಹಿಂದೂ ಸಮುದಾಯದಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಭಕ್ತರು ಪವಿತ್ರ ಗುಹೆಯ ಭಗವಾನ್ ಶಿವನ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಕಠಿಣ ಮಾರ್ಗವನ್ನು ದಾಟಬೇಕಿರುತ್ತದೆ. ಈ ವಾರ್ಷಿಕ ತೀರ್ಥಯಾತ್ರೆಯಲ್ಲಿ ದೇಶದ ಎಲ್ಲಾ ಮೂಲೆಗಳಿಂದ ಭಕ್ತರು ಬರುತ್ತಾರೆ.

ದೇವಾಲಯಗಳಿಗೆ ಭೇಟಿ ನೀಡಿದ್ದಕ್ಕಾಗಿ ಟ್ರೋಲ್‌

ಸಾರಾ ಅಲಿ ಖಾನ್ ಇತ್ತೀಚೆಗೆ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ನಾನು ಶಾಂತಿಯನ್ನು ಕಂಡುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ನಾನು ದೇವಾಲಯಗಳಿಗೆ ಬೇಟಿ ನೀಡಿದ್ದಕ್ಕಾಘಿ ಟ್ರೋಲ್‌ಗೆ ಒಳಗಾಗಿದ್ದೇನೆ ಎಂದು ನಟಿ ಬೇಸರ ತೋಡಿಕೊಂಡಿದ್ದಾರೆ.

ಸಾರಾ ಅಲಿ ಖಾನ್, ನಟ ವಿಕ್ಕಿ ಕೌಶಲ್ ಅವರೊಂದಿಗೆ ಜರಾ ಹಟ್ಕೆ ಜರಾ ಬಚ್ಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆ ಲಾಭ ತಂದಿದೆ. ಅವರ ಮುಂಬರುವ ಸಿನಿಮಾಗಳಲ್ಲಿ ಅನುರಾಗ್ ಬಸು ಅವರ ಮೆಟ್ರೋ ಇನ್ ಡಿನೋ ಸೇರಿದೆ. ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

Cannes Film Festival 2023: ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್- ಹೊಗಳಿ ಕೊಂಡಾಡಿದ ನೆಟ್ಟಿಗರುCannes Film Festival 2023: ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್- ಹೊಗಳಿ ಕೊಂಡಾಡಿದ ನೆಟ್ಟಿಗರು

ಏ ವತನ್ ಮೇರೆ ವತನ್ ಚಿತ್ರದಲ್ಲಿಯೂ ಸಾರಾ ಕಾಣಿಸಿಕೊಳ್ಳಲಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತವಾದ ಥ್ರಿಲ್ಲರ್ ಕಥೆಯ ಏ ವತನ್ ಮೇರೆ ವತನ್ ಬಾಂಬೆಯ ಕಾಲೇಜು ಹುಡುಗಿಯ ಪಾತ್ರವನ್ನು ಮಾಡಲಿದ್ದಾರೆ.

English summary

Bollywood actor Sara Ali Khan undertakes Amarnath Yatra in Jammu and Kashmir. Videos and photos went viral. know more.

Story first published: Thursday, July 20, 2023, 20:31 [IST]

Source link