ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ ಆದಿಪುರುಷ್ ಅಬ್ಬರ; 3 ದಿನಗಳಲ್ಲಿ ಚಿತ್ರ ಗಳಿಸಿದ್ದೆಷ್ಟು? ಇಂದಿನಿಂದ ಶುರು ಅಗ್ನಿಪರೀಕ್ಷೆ! | Adipurush collects 340 crores from 3 days in worldwide box office

bredcrumb

Bollywood

oi-Srinivasa A

|

ಕಳೆದ
ಶುಕ್ರವಾರ
(
ಜೂನ್
16
)
ಭಾರತದ
ಬಹು
ನಿರೀಕ್ಷಿತ
ಚಿತ್ರಗಳಲ್ಲಿ
ಒಂದಾಗಿದ್ದ
ಆದಿಪುರುಷ್
ಚಿತ್ರ
ಬಿಡುಗಡೆಗೊಂಡಿತು.
ರೆಬೆಲ್
ಸ್ಟಾರ್
ಪ್ರಭಾಸ್
ನಾಯಕನಾಗಿ
ಹಾಗೂ
ಕೃತಿ
ಸೆನನ್
ನಾಯಕಿಯಾಗಿ
ನಟಿಸಿರುವ

ಚಿತ್ರಕ್ಕೆ
ಓಂ
ರಾವತ್
ಆಕ್ಷನ್
ಕಟ್
ಹೇಳಿದ್ದಾರೆ.

ಮೂಲ
ಹಿಂದಿ
ಚಿತ್ರವಾಗಿರುವ

ಚಿತ್ರ
ಪ್ರಭಾಸ್
ನಟನೆಯ
ಮೊದಲ
ಬಾಲಿವುಡ್
ಸಿನಿಮಾವಾಗಿದ್ದು,
ಕನ್ನಡ,
ತೆಲುಗು,
ತಮಿಳು
ಹಾಗೂ
ಮಲಯಾಳಂ
ಭಾಷೆಗಳಿಗೂ
ಸಹ

ಚಿತ್ರ
ಡಬ್
ಆಗಿದ್ದು
ಪ್ಯಾನ್
ಇಂಡಿಯಾ
ಬಿಡುಗಡೆಯಾಗಿದೆ.
ಇನ್ನು
ಚಿತ್ರ
ಬಿಡುಗಡೆಗೊಂಡು
ಮೊದಲ
ಪ್ರದರ್ಶನ
ಮುಗಿದ
ಬೆನ್ನಲ್ಲೇ
ಸಿಕ್ಕಾಪಟ್ಟೆ
ದೊಡ್ಡ
ಮಟ್ಟದಲ್ಲಿ
ನೆಗೆಟಿವ್
ವಿಮರ್ಶೆಗಳನ್ನು
ಪಡೆದುಕೊಂಡಿತು.

Adipurush collects 340 crores from 3 days in worldwide box office

ಚಿತ್ರ
ವೀಕ್ಷಿಸಿ
ಹೊರಬಂದ
ಸಿನಿ
ರಸಿಕರು
ಪಾತ್ರಗಳ
ವಸ್ತ್ರ,
ವೇಷದ
ಕುರಿತು
ವ್ಯಂಗ್ಯವಾಡಿದರು
ಹಾಗೂ
ಹೀನಾಯವಾಗಿ
ಟ್ರೋಲ್
ಮಾಡಿದರು.
ಅಲ್ಲದೇ
ಚಿತ್ರದಲ್ಲಿ
ಆಕ್ಷೇಪಾರ್ಹ
ಸಂಭಾಷಣೆಗಳಿವೆ
ಎಂಬ
ಕಾರಣಕ್ಕೂ
ಸಹ
ಚಿತ್ರತಂಡ
ಹೀನಾಯವಾಗಿ
ಟೀಕೆಗೆ
ಒಳಗಾಯಿತು.

ಹೀಗೆ
ದೊಡ್ಡ
ಮಟ್ಟದಲ್ಲಿ
ಟ್ರೋಲ್
ಆದ
ಆದಿಪುರುಷ್
ಚಿತ್ರದ
ಕಲೆಕ್ಷನ್
ಸಹ
ತುಸು
ಡಲ್
ಹೊಡೆದಿತ್ತು
ಎಂದೇ
ಹೇಳಬಹುದಾಗಿದೆ.
ಚಿತ್ರಕ್ಕೆ
ಹಾಕಿದ್ದ
ಬಜೆಟ್‌ಗೆ
ತಕ್ಕಂತಹ
ಕಲೆಕ್ಷನ್
ಬಾರದೇ
ಹಿನ್ನಡೆ
ಅನುಭವಿಸಿದೆ.
ಆದರೆ
ಚಿತ್ರದ
ಕಲೆಕ್ಷನ್
ತೀರ
ಕಳಪೆ
ಮಟ್ಟದಲ್ಲಿದೆ
ಎಂದೇನಲ್ಲ.
ಮೊದಲ
ಮೂರೂ
ದಿನಗಳೂ
ಸಹ
ನೂರು
ಕೋಟಿಗಿಂತ
ಅಧಿಕ
ಗಳಿಕೆಯನ್ನು
ಚಿತ್ರ
ಮಾಡಿದ್ದು,
ಸಮಾಧಾನಕರ
ಕಲೆಕ್ಷನ್
ಇದಾಗಿದೆ.

ಹೌದು,
ಮೊದಲ
ದಿನ
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
140
ಕೋಟಿ
ಗಳಿಕೆ
ಮಾಡಿದ್ದ
ಆದಿಪುರುಷ್
ಎರಡನೇ
ದಿನ
100
ಕೋಟಿ
ಗಳಿಸಿದೆ
ಹಾಗೂ
ಮೂರನೇ
ದಿನವೂ
100
ಕೋಟಿ
ಗಳಿಕೆ
ಮಾಡಿದೆ.

ಮೂಲಕ
ಚಿತ್ರ
ಮೊದಲ
ಮೂರು
ದಿನಗಳಲ್ಲಿ
ವಿಶ್ವದಾದ್ಯಂತ
340
ಕೋಟಿ
ಗಳಿಕೆ
ಮಾಡಿದೆ.
ಬಾಹುಬಲಿ

ಬೆಗಿನಿಂಗ್,
ಬಾಹುಬಲಿ

ಕನ್ಕ್ಲೂಷನ್
ಹಾಗೂ
ಸಾಹೋ
ಬಳಿಕ
300
ಕೋಟಿ
ದಾಟಿದ
ಪ್ರಭಾಸ್
ನಟನೆಯ
ನಾಲ್ಕನೇ
ಚಿತ್ರ
ಇದಾಗಿದೆ.

ಇನ್ನು
ಮೊದಲ
ಮೂರು
ದಿನಗಳಲ್ಲಿ
ಸತತವಾಗಿ
ನೂರು
ಕೋಟಿ
ಗಳಿಕೆ
ಮಾಡುವಲ್ಲಿ
ಯಶಸ್ವಿಯಾಗಿರುವ
ಆದಿಪುರುಷ್
ಇಂದಿನಿಂದ
(
ಜೂನ್
19
)
ಅಸಲಿ
ಅಗ್ನಿಪರೀಕ್ಷೆಯನ್ನು
ಎದುರಿಸಲಿದೆ.
ವಾರಾಂತ್ಯದ
ರಜಾ
ದಿನ
ಮುಗಿದಿದ್ದು,
ಪ್ರೇಕ್ಷಕರ
ಸಂಖ್ಯೆ
ಇಳಿಮುಖವಾಗಲಿದ್ದು,
ಕಲೆಕ್ಷನ್
ಸಹ
ಇಳಿಕೆಯಾಗಲಿದೆ.
ಒಟ್ಟಿನಲ್ಲಿ
ಇಂದಿನಿಂದ
ಆದಿಪುರುಷ್
ಕಡಿಮೆ
ಬುಕಿಂಗ್
ಪಡೆದುಕೊಂಡು
ಒಳ್ಳೆಯ
ರೆಸ್ಪಾನ್ಸ್
ಪಡೆದುಕೊಳ್ಳುವಲ್ಲಿ
ವಿಫಲವಾದರೆ
ಲಾಭ
ಪಡೆದುಕೊಳ್ಳುವಲ್ಲಿ
ಎಡವಿ
ನಷ್ಟ
ಅನುಭವಿಸಿದರೂ
ಆಶ್ಚರ್ಯವಿಲ್ಲ.

ಸದ್ಯ
ಆದಿಪುರುಷ್
ಚಿತ್ರ
151
ಕೋಟಿ
ಶೇರ್
ಕಲೆಕ್ಷನ್
ಮಾಡಿದೆ
ಎಂದು
ಬಾಕ್ಸ್
ಆಫೀಸ್
ಟ್ರ್ಯಾಕರ್ಸ್
ಹೇಳುತ್ತಿದ್ದು,
ಚಿತ್ರ
ಲಾಭದ
ಗಡಿ
ಮುಟ್ಟಲು
242
ಕೋಟಿ
ಶೇರ್
ಕಲೆಕ್ಷನ್
ಮಾಡಬೇಕಿದೆ.

ಮೂಲಕ
ಚಿತ್ರ
ಇನ್ನೂ
ಸಹ
91
ಕೋಟಿ
ಶೇರ್
ಕಲೆಕ್ಷನ್
ಮಾಡಲೇಬೇಕಿದೆ.

ಇನ್ನು
ಚಿತ್ರದ
ಇಂದಿನ
ಬುಕಿಂಗ್
ಸಾಮಾನ್ಯವಾಗಿದ್ದು,
ಹೆಚ್ಚೇನೂ
ಹೌಸ್‌ಫುಲ್
ಕಂಡುಬರುತ್ತಿಲ್ಲ.
ಹೈದರಾಬಾದ್
ಹಾಗೂ
ಮುಂಬೈ
ನಗರಗಳಲ್ಲಿ
ಬುಕಿಂಗ್
ತುಸು
ಚೆನ್ನಾಗಿದ್ದು,
ಬೆಂಗಳೂರಿನಲ್ಲಿ
ಸಾಮಾನ್ಯವಾಗಿದೆ.
ಸಂಜೆ
ಪ್ರದರ್ಶನಗಳ
ಬುಕಿಂಗ್
ಸುಧಾರಿಸಿಕೊಳ್ಳುವ
ಸಾಧ್ಯತೆ
ಇದ್ದು,
ಚಿತ್ರ
ನಾಲ್ಕನೇ
ದಿನ
60
ಕೋಟಿ
ಗ್ರಾಸ್
ಕಲೆಕ್ಷನ್
ಮಾಡಬಹುದು
ಎಂಬ
ನಿರೀಕ್ಷೆ
ಇದೆ.

English summary

Adipurush collects 340 crores from 3 days in world wide box office. Read on

Monday, June 19, 2023, 13:28

Story first published: Monday, June 19, 2023, 13:28 [IST]

Source link