ಟಿ20 ವಿಶ್ವಕಪ್ 2024ರ (T20 World Cup 2024) ಟೂರ್ನಿ ಮುಕ್ತಾಯಗೊಂಡಿದೆ. ಈಗ ಎಲ್ಲರ ಕಣ್ಣು ಪ್ಯಾರಿಸ್ ಒಲಿಂಪಿಕ್ಸ್ (Paris 2024 Olympics) ಕಡೆ ತಿರುಗಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ನಡೆಯುವ ಈ ಕ್ರೀಡಾಕೂಟದಲ್ಲಿ 10,500 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟು 32 ಕ್ರೀಡೆಗಳು ಜರುಗಲಿವೆ. ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್, ಜಾರ್ಡಿನ್ಸ್ ಡು ಟ್ರೋಕಾಡೆರೊ ಮತ್ತು ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ಟೇಡ್ ಡಿ ಫ್ರಾನ್ಸ್ನಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಹಾಗಾದರೆ ಈ ಬಹುನಿರೀಕ್ಷಿತ ಕ್ರೀಡಾಕೂಟ ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ವಿವರ.