ಬಸ್‌ ಹತ್ತಲು ವಿದ್ಯಾರ್ಥಿಗಳ ಪರದಾಟ: ಶಕ್ತಿ ಯೋಜನೆ ವಿರುದ್ಧ ಎಬಿವಿಪಿ ಪ್ರತಿಭಟನೆ | ABVP Protest Against Shakti Scheme At Chikkamagaluru

Chikkamagaluru

lekhaka-Veeresha H G

By ಚಿಕ್ಕಮಗಳೂರು ಪ್ರತಿನಿಧಿ

|

Google Oneindia Kannada News

ಚಿಕ್ಕಮಗಳೂರು, ಜೂನ್‌ 28: ರಾಜ್ಯ ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಿದೆ. ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಎಷ್ಟೋ ಲಾಭವಾಗಿದೆಯೋ ಅದೇ ರೀತಿ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಪ್ರಮುಖವಾಗಿ ಬಸ್‌ ರಶ್‌ನಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಶಕ್ತಿ ಯೋಜನೆಯಿಂದ ಬಸ್ ಸಮಸ್ಯೆ ಉಂಟಾಗಿದೆ ಎಂದು ಚಿಕ್ಕಮಗಳೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವಿದ್ಯಾರ್ಥಿಗಳು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಎಬಿವಿಪಿ ಸಂಘಟನೆ ಸರ್ಕಾರದ ಶಕ್ತಿ ಯೋಜನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ABVP Protest Against Shakti Scheme

ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಬಸ್‌ಗಳು ತುಂಬಿ ತುಳುಕುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಉಚಿತ ಬಸ್ ಸೇವೆಯಿಂದ ಗ್ರಾಮಾಂತರ ಬಸ್‌ಗಳು ರಶ್‌ ಆಗುತ್ತಿವೆ. ಇದರಿಂದ ಬಸ್‌ ಹತ್ತಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತೆರಳಲಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

 Shakti Smart Card: ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಪೋರ್ಟಲ್‌- ಮಾಹಿತಿ, ವಿವರ ತಿಳಿಯಿರಿ Shakti Smart Card: ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಶೀಘ್ರದಲ್ಲೇ ಪೋರ್ಟಲ್‌- ಮಾಹಿತಿ, ವಿವರ ತಿಳಿಯಿರಿ

ಮಹಿಳೆಯರಿಗೆ ಉಚಿತ ಪ್ರಯಾಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳುವ ಸಮಯದಲ್ಲಿ ಹಾಗೂ ಸಂಜೆ ಶಾಲಾ ಕಾಲೇಜುಗಳು ಬಿಡುವ ಸಮಯದಲ್ಲಿ ಬಸ್‌ ಸಂಖ್ಯೆಯನ್ನು ಹೆಚ್ಚಿಸಿ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸಂಘಟನೆ ಆಗ್ರಹಿಸಿದೆ.

ABVP Protest Against Shakti Scheme

ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಬಹುಪಾಲು ಮಹಿಳಾ ಪ್ರಯಾಣಿಕರಿಂದ ಬಸ್‌ಗಳು ತುಂಬಿ ತುಳುಕುತ್ತಿದ್ದು, ಶಾಲೆ ಕಾಲೇಜುಗಳಿಗೆ ತೆರಳಲು ವೇಗವಾಗಿ ಚಲಿಸುವ ಸಾರಿಗೆ ಬಸ್‌ಗಳ ಪುಟ್ ಬೋರ್ಡ್ ಮೇಲೆ ನಿಂತು ಅಪಾಯದಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರು ಪ್ರಯಾಣ ನಡೆಸುತ್ತಿದ್ದಾರೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಶೀಘ್ರವೇ ಬಸ್‌ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಬೇಕು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.

English summary

Akhil Bharatiya Vidyarthi Parishad protest against shakti Free bus for women scheme at Chikkamagaluru, Know more

Story first published: Wednesday, June 28, 2023, 13:43 [IST]

Source link