ಬರಾಕ್ ಒಬಾಮಾ 6 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ಮಾಡಿಸಿದವರು ಎಂದಿದ್ದೇಕೆ ನಿರ್ಮಲಾ ಸೀತಾರಾಮನ್? | Nirmala Sitharaman slams Barack Obama, says 6 Muslim nations bombed by his rule

India

oi-Mamatha M

|

Google Oneindia Kannada News

ನವದೆಹಲಿ, ಜೂನ್. 26 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಅಮೆರಿಕಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾರತದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಮತ್ತು ಈ ವಿಷಯದ ಕುರಿತು ನೀಡಿದ ಉತ್ತರದ ಸುತ್ತಲಿನ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಇದರ ಜೊತೆಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಜ್ ಒಬಾಮ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಾಕ್ ಒಬಾಮಾ ಅವರ ಆಡಳಿತದಲ್ಲಿ ಯುಎಸ್ ಆರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಭಾರತೀಯ ಮುಸ್ಲಿಮರ ಬಗ್ಗೆ ಹೇಳಿಕೆ ನೀಡುವುದನ್ನು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.

Nirmala Sitharaman slams Barack Obama

“ಗೌರವಾನ್ವಿತ ಪ್ರಧಾನ ಮಂತ್ರಿಗಳು ಸ್ವತಃ ಅಮೆರಿಕಾದ ಪತ್ರಿಕಾಗೋಷ್ಠಿಯಲ್ಲಿ, ತಮ್ಮ ಸರ್ಕಾರವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ತತ್ವದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದಿದೆ. ಆದ್ದರಿಂದ ದೇಶದಲ್ಲಿ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಟೂಲ್‌ಕಿಟ್‌ಗಳ ಮೂಲಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಪ್ರಚಾರಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ: ಗೋಮಾಂಸ ಕಳ್ಳಸಾಗಣೆ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆಗೈದ ಗುಂಪುಮಹಾರಾಷ್ಟ್ರ: ಗೋಮಾಂಸ ಕಳ್ಳಸಾಗಣೆ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆಗೈದ ಗುಂಪು

ಒಂಬತ್ತು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ಅವರು ಪಡೆದ 13 ಉನ್ನತ ಪ್ರಶಸ್ತಿಗಳಲ್ಲಿ ಆರು ಮುಸ್ಲಿಂ ಪ್ರಾಬಲ್ಯ ಹೊಂದಿರುವ ರಾಷ್ಟ್ರಗಳಿಂದ ನೀಡಲ್ಪಟ್ಟಿವೆ. ಅದರಲ್ಲಿ ಈಜಿಪ್ಟ್ ಇತ್ತೀಚಿನದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Nirmala Sitharaman slams Barack Obama

“ಪ್ರಧಾನಿ ಅವರು ಅಮೆರಿಕಾದಲ್ಲಿದ್ದಾಗ ಭಾರತದ ಬಗ್ಗೆ ಮಾತನಾಡುವಾಗ, ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು ಭಾರತೀಯ ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿರುವುದು ನನಗೆ ಆಶ್ಚರ್ಯ ತಂದಿದೆ. ಸಿರಿಯಾ, ಯೆಮೆನ್, ಸೌದಿ ಅರೇಬಿಯಾ ಮತ್ತು ಇರಾಕ್ ಸೇರಿದಂತೆ ಆರು ಮುಸ್ಲಿಂ ಪ್ರಾಬಲ್ಯದ ರಾಷ್ಟ್ರಗಳಲ್ಲಿ ಬಾಂಬ್ ದಾಳಿಗಳು ಅವರ ಆಡಳಿತದಲ್ಲಿ ಸಂಭವಿಸಿದವು. ಯುದ್ಧದಂತಹ ಪರಿಸ್ಥಿತಿಗಳು ಅಭಿವೃದ್ಧಿಗೊಂಡವು ಮತ್ತು 26,000 ಕ್ಕೂ ಹೆಚ್ಚು ಬಾಂಬ್‌ಗಳ ದಾಳಿ ನಡೆಸಲಾಯಿತು” ಎಂದಿದ್ದಾರೆ.

“ಅವರು ಭಾರತದ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡಿದಾಗ, ಭಾರತೀಯರು ಅವರನ್ನು ಹೇಗೆ ನಂಬುತ್ತಾರೆ..? ಎಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. ವಿದೇಶ ಪ್ರವಾಸಗಳಲ್ಲಿ ವಿರೋಧ ಪಕ್ಷದ ನಾಯಕರು ಎಂದಿಗೂ ಭಾರತದ ಹಿತಾಸಕ್ತಿಯಲ್ಲಿ ಮಾತನಾಡುವುದಿಲ್ಲ ಮತ್ತು ಇತರರನ್ನು ತಮ್ಮ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ರಾಜ್ಯ ಮಟ್ಟದಲ್ಲಿ ಪ್ರಸ್ತಾಪಿಸಬೇಕಾದ ಸಮಸ್ಯೆಗಳಿವೆ. ಅದನ್ನು ನೋಡಿಕೊಳ್ಳುವ ಜನರಿದ್ದಾರೆ. ಕೈಯಲ್ಲಿ ಮೂಲಭೂತ ಡೇಟಾ ಇಲ್ಲದೆ ಕೇವಲ ಆರೋಪ ಮಾಡುವುದು ಇವು ಸಂಘಟಿತ ಪ್ರಚಾರಗಳು ಎಂದು ನಮಗೆ ತಿಳಿಯುತ್ತಿದೆ” ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ.

English summary

Finance Minister Nirmala Sitharaman defended Prime Minister Narendra Modi and slams former US President Barack Obama on his comments on Indian Muslims. know more.

Story first published: Monday, June 26, 2023, 10:49 [IST]

Source link