News
oi-Narayana M
ಹೊಂಬಾಳೆ
ಫಿಲ್ಮ್ಸ್
ಸಂಸ್ಥೆಯ
ಬಹುನಿರೀಕ್ಷಿತ
ಸಿನಿಮಾಗಳಲ್ಲಿ
ಶ್ರೀಮುರಳಿ
ನಟನೆಯ
‘ಬಘೀರ’
ಕೂಡ
ಒಂದು.
‘ಮಫ್ತಿ’,
‘ಭರಾಟೆ’,
‘ಮದಗಜ’
ಸಿನಿಮಾಗಳ
ನಂತರ
ರೋರಿಂಗ್
ಸ್ಟಾರ್
ಈ
ಆಕ್ಷನ್
ಎಂಟರ್ಟೈನರ್
ಒಪ್ಪಿಕೊಂಡಿದ್ದಾರೆ.
ಡಾ.
ಸೂರಿ
ಈ
ಚಿತ್ರಕ್ಕೆ
ಆಕ್ಷನ್
ಕಟ್
ಹೇಳ್ತಿದ್ದಾರೆ.
ಆದರೆ
‘KGF’
ಖ್ಯಾತಿಯ
ಪ್ರಶಾಂತ್
ನೀಲ್
ಈ
ಚಿತ್ರಕ್ಕೆ
ಕಥೆ
ಒದಗಿಸಿರುವುದು
ವಿಶೇಷ.
ಸತತ
ಸೋಲುಗಳಿಂದ
ಕಂಗೆಟ್ಟಿದ್ದ
ಶ್ರೀಮುರಳಿ
‘ಉಗ್ರಂ’
ಸಿನಿಮಾ
ಮೂಲಕ
ಭರ್ಜರಿ
ಕಂಬ್ಯಾಕ್
ಮಾಡಿದ್ದರು.
ನಂತರ
ಸಾಲು
ಸಾಲು
ಹಿಟ್
ಸಿನಿಮಾಗಳ
ಮೂಲಕ
ಮುನ್ನುಗ್ಗುತ್ತಿದ್ದಾರೆ.
ಕಥೆಗಳ
ಆಯ್ಕೆಯಲ್ಲಿ
ಬಹಳ
ಚೂಸಿಯಾಗಿದ್ದಾರೆ.
‘ಉಗ್ರಂ’
ನಂತರ
9
ವರ್ಷಗಳಲ್ಲಿ
ಕೇವಲ
4
ಸಿನಿಮಾಗಳಲ್ಲಿ
ಮಾತ್ರ
ನಟಿಸಿದ್ದಾರೆ.
ಪಾತ್ರಕ್ಕಾಗಿ
ಎಲ್ಲಾ
ತರಹದ
ಹೋಂ
ವರ್ಕ್
ಮಾಡುತ್ತಾರೆ.
ಸದ್ಯ
‘ಬಘೀರ’
ಚಿತ್ರಕ್ಕಾಗಿ
ದೇಹ
ದಂಡಿಸುವ
ಕಾಯಕದಲ್ಲಿ
ರೋರಿಂಗ್
ಬ್ಯುಸಿಯಾಗಿದ್ದಾರೆ.
‘ಬಘೀರ’
ಚಿತ್ರದಲ್ಲಿ
ಖಡಕ್
ಪೊಲೀಸ್
ಆಫೀಸರ್
ಪಾತ್ರದಲ್ಲಿ
ಶ್ರೀಮುರಳಿ
ನಟಿಸುತ್ತಿದ್ದಾರೆ.
ಈಗಾಗಲೇ
ಮಂಗಳೂರು,
ಬೆಂಗಳೂರಿನಲ್ಲಿ
ಒಂದಷ್ಟು
ಚಿತ್ರೀಕರಣ
ಮುಕ್ತಾಯವಾಗಿದೆ.
ಇತ್ತೀಚೆಗೆ
ಶೂಟಿಂಗ್
ವೇಳೆ
ರೋರಿಂಗ್
ಸ್ಟಾರ್
ಪೆಟ್ಟಾಗಿದ್ದ
ವರದಿಯಾಗಿತ್ತು.
ಕೂಡಲೇ
ಅವರನ್ನು
ಆಸ್ಪತ್ರೆಗೆ
ದಾಖಲಿಸಿ
ಚಿಕಿತ್ಸೆ
ನೀಡಲಾಗಿತ್ತು.
ಧ್ರುವ
ಸರ್ಜಾ
ಹೆಸರಲ್ಲಿ
ಜಿಮ್..
ಇಳಕಲ್
ಫ್ಯಾನ್ಸ್ಗೆ
ನೆರವಾದ
ನಟ:
ತಾಯಿಯ
ಪಾದ
ಮುಟ್ಟಿ
ಆಶೀರ್ವಾದ
ಪಡೆದ
ಪ್ರಿನ್ಸ್
ಜಿಮ್ನಲ್ಲಿ
ರೋರಿಂಗ್
ಸ್ಟಾರ್
ಶ್ರೀಮುರಳಿ
ಮೊದಲಿನಿಂದಲೂ
ದೇಹ
ದಂಡಿಸುತ್ತಾ
ಬರ್ತಿದ್ದಾರೆ.
ಸಿನಿಮಾ
ಪಾತ್ರಗಳಿಗಳಿಗಾಗಿ
ಮಾಂಸಖಂಡಗಳನ್ನು
ಗಟ್ಟಿಗೊಳಿಸಿಕೊಂಡು
ತೆರೆಮೇಲೆ
ದರ್ಶನ
ಕೊಡುತ್ತಿದ್ದಾರೆ.
ಇದೀಗ
‘ಬಘೀರ’
ಚಿತ್ರಕ್ಕಾಗಿ
ಮತ್ತೊಂದು
ಬಲ್ಕ್
ಬಾಡಿ
ಬಿಲ್ಡ್
ಮಾಡಿದ್ದಾರೆ.
ಸೋಶಿಯಲ್
ಮೀಡಿಯಾದಲ್ಲಿ
ಸಣ್ಣ
ವಿಡಿಯೋ
ವೈರಲ್
ಆಗಿದೆ.
ಜಿಮ್ನಲ್ಲಿ
ಬೆವರಿಳಿಸಿ
ಕ್ಯಾಮರಾ
ಮುಂದೆ
ವಜ್ರದೇಹವನ್ನು
ಪ್ರದರ್ಶಿಸಿದಿದ್ದಾರೆ.
ಬೈಸಿಪ್ಸ್,
ಟ್ರೈಸಿಪ್ಸ್,
ಚೆಸ್ಟ್,
ಶೋಲ್ಡರ್,
ಲೆಗ್
ಮಾಂಸ
ಖಂಡಗಳನ್ನು
ಗಟ್ಟಿಗೊಳಿಸಿರುವುದುನ್ನು
ನೋಡಬಹುದು.
ಅಭಿಮಾನಿಗಳು
ಈ
ವಿಡಿಯೋ
ನೋಡಿ
ಖುಷಿಯಾಗಿದ್ದಾರೆ.
ಸಂಪೂರ್ಣ
ಚೇತರಿಸಿಕೊಂಡ
ಶ್ರೀಮುರಳಿ
5
ತಿಂಗಳ
ಹಿಂದೆ
ರಾಕ್ಲೈನ್
ಸ್ಟುಡಿಯೋದಲ್ಲಿ
ಚಿತ್ರೀಕರಣದ
ವೇಲೆ
ಶ್ರೀಮುರಳಿ
ಕಾಲಿಗೆ
ಪೆಟ್ಟಾಗಿತ್ತು.
ಕೂಡಲೇ
ಆಸ್ಪತ್ರೆಗೆ
ದಾಖಲಿಸಿ
ಸೂಕ್ತ
ಚಿಕಿತ್ಸೆ
ನೀಡಲಾಗಿತ್ತು.
ಎಡ
ಮೊಣಕಾಲಿಗೆ
ಪೆಟ್ಟಾಗಿದ್ದರಿಂದ
ಸಣ್ಣ
ಸರ್ಜರಿ
ಕೂಡ
ಮಾಡಲಾಗಿತ್ತು.
4
ತಿಂಗಳ
ನಂತರ
ರೋರಿಂಗ್
ಸ್ಟಾರ್
ಮತ್ತೆ
ಶೂಟಿಂಗ್
ಅಖಾಡಕ್ಕೆ
ಕಾಲಿಟ್ಟಿದ್ದರು.
ಇದೀಗ
ಸಂಪೂರ್ಣವಾಗಿ
ಚೇತರಿಸಿಕೊಂಡಿದ್ದು
ಜಿಮ್ನಲ್ಲಿ
ಕಸರತ್ತು
ಕೂಡ
ಮಾಡುತ್ತಿದ್ದಾರೆ.
‘ಬಘೀರ’
ಚಿತ್ರದಲ್ಲಿ
ಬೇರೆ
ಲುಕ್ನಲ್ಲೇ
ಅವರನ್ನು
ನೋಡಬಹುದು.
ಶ್ರೀಮುರಳಿ
ಎದುರು
ಫಹಾದ್
ಇನ್ನು
‘ಬಘೀರ’
ಚಿತ್ರದಲ್ಲಿ
ರೋರಿಂಗ್
ಸ್ಟಾರ್
ಎದುರು
ಫಹಾದ್
ಫಾಸಿಲ್
ನಟಿಸುತ್ತಿದ್ದಾರೆ.
ಸದ್ಯ
ಫಹಾದ್
ನಟನೆಯ
‘ಧೂಮಮ್’
ಸಿನಿಮಾ
ರಿಲೀಸ್
ಆಗಿದೆ.
‘ಬಘೀರ’
ಚಿತ್ರದಲ್ಲಿ
ಖಡಕ್
ಸಿಬಿಐ
ಪಾತ್ರದಲ್ಲಿ
ಅವರು
ನಟಿಸುತ್ತಿದ್ದಾರೆ.
ಎ.
ಜೆ
ಶೆಟ್ಟಿ
ಛಾಯಾಗ್ರಹಣ,
ಅಜನೀಶ್
ಲೋಕನಾಥ್
ಸಂಗೀತ
ಚಿತ್ರಕ್ಕಿದೆ.
ಇನ್ನು
ರಂಗಾಯಣ
ರಘು,
ಅಚ್ಯುತ್
ಕುಮಾರ್ರಂತಹ
ಘಟಾನುಘಟಿ
ಕಲಾವಿದರು
ಚಿತ್ರದಲ್ಲಿದ್ದಾರೆ.
ಮತ್ತೊಂದು
ಚಿತ್ರಕ್ಕೆ
ಗ್ರೀನ್
ಸಿಗ್ನಲ್
ಪ್ರಶಾಂತ್
ನೀಲ್
ಹಾಗೂ
ಶ್ರೀಮುರಳಿ
ಕಾಂಬಿನೇಷನ್ನಲ್ಲಿ
‘ಉಗ್ರಂ
ವೀರಂ’
ಚಿತ್ರಕ್ಕಾಗಿ
ಅಭಿಮಾನಿಗಳು
ಕಾಯುತ್ತಿದ್ದಾರೆ.
ಆದರೆ
ಸದ್ಯಕ್ಕೆ
ಆ
ಸಿನಿಮಾ
ಸೆಟ್ಟೇರುವ
ಸಾಧ್ಯತೆಯಿದೆ.
ಇನ್ನು
ಹೊಸ
ಪ್ರತಿಭೆ
ಹಾಲೇಶ್
ಕೋಗುಂಡಿ
ಹೇಳಿರುವ
ಕಥೆಯನ್ನು
ರೋರಿಂಗ್
ಸ್ಟಾರ್
ಒಪ್ಪಿಕೊಂಡಿದ್ದಾರೆ.
‘ಬಘೀರ’
ನಂತರ
ಆ
ಚಿತ್ರದಲ್ಲಿ
ನಟಿಸಲಿದ್ದಾರೆ.
English summary
Srimurali’s intense gym workout for Bhageera goes viral. roaring star resumes his work out post leg surgery. know more.
Sunday, June 25, 2023, 10:39
Story first published: Sunday, June 25, 2023, 10:39 [IST]