Chamarajanagar
lekhaka-Surendra S
ಚಾಮರಾಜನಗರ, ಜೂನ್ 23: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದೇ ದಿನ 3 ಚಿರತೆ ಶವಗಳು ಪತ್ತೆಯಾಗಿತುವ ಆತಂಕಕಾರಿ ಘಟನೆ ಇಂದು ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯದ ಕಣಿಯನಪುರ ಗ್ರಾಮದ ಸಮೀಪ ಒಂದು ಚಿರತೆ ಹಾಗೂ ಜಿ.ಎಸ್.ಬೆಟ್ಟ ವಲಯ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಮತ್ತೊಂದು ಚಿರತೆ ಶವ ಪತ್ತೆಯಾಗಿದ್ದು ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಏಕಾಏಕಿ ಚಿರತೆಗಳು ಸಾವನ್ನಪ್ಪಿರುವ ಕಣಿಯನಪುರ ಹಾಗೂ ಮಂಗಲ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ. ಕಣಿಯನಪುರದಲ್ಲಿ 5 ವರ್ಷದ ಗಂಡು ಚಿರತೆ ಮತ್ತು ಮಂಗಲ ಗ್ರಾಮದಲ್ಲಿ 2.5 ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಗುಟ್ಟಾಗಿ ಹುಲಿ,ಚಿರತೆ ಹೂತಿಟ್ಟ RFO?: ಅರಣ್ಯಾಧಿಕಾರಿಗಳ ವಿರುದ್ಧ ಗಂಭೀರ ಆರೋಪ
ವಿಷಪೂರಿತ ಮಾಂಸ ತಿಂದು ಮತ್ತೊಂದು ಚಿರತೆ ಸಾವು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬಫರ್ ವಲಯದ ಕೂತನೂರು ಗ್ರಾಮದ ಜಮೀನಿನಲ್ಲಿ ವಿಷಪೂರಿತ ಮಾಂಸ ತಿಂದು 3 ವರ್ಷದ ಚಿರತೆಯೊಂದು ಮೃತಪಟ್ಟಿದೆ. ಜಿ.ಆರ್.ಗೋವಿಂದರಾಜ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಕೂತನೂರು ಗ್ರಾಮದ ಜಿ.ಆರ್.ಗೋವಿಂದರಾಜ ಅವರ ಸಾಕು ನಾಯಿಯನ್ನು ಚಿರತೆ ಬೇಟೆಯಾಡಿ ಹೋಗಿತ್ತು. ಹೀಗಾಗಿ ಉಳಿದ ಕಳೇಬರಕ್ಕೆ ಜಮೀನಿನ ಕಾವಲುಗಾರ ಸೋಮಶೇಖರ್ ಕೀಟನಾಶಕ ಸಿಂಪಡಿಸಿ ಇರಿಸಿದ್ದು, ತನ್ನ ಉಳಿದ ಬೇಟೆ ತಿನ್ನಲು ಬಂದ ಚಿರತೆ ವಿಷಪೂರಿತ ಮಾಂಸವನ್ನು ತಿಂದು ಸಾವನ್ನಪ್ಪಿದೆ.
ಮೃತ ಚಿರತೆ 3 ವರ್ಷದ ಹೆಣ್ಣು ಚಿರತೆ ಎಂದು ಬಂಡೀಪುರ ಸಿಎಫ್ಒ ರಮೇಶ್ ಕುಮಾರ್ ತಿಳಿಸಿದ್ದಾರೆ. ವಿಷ ಹಾಕಿದ್ದ ಕಾವಲುಗಾರ ಸೋಮಶೇಖರ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಣಿಯನಪುರ ಹಾಗೂ ಮಂಗಲ ಗ್ರಾಮದ ಚಿರತೆಗಳ ದಿಢೀರ್ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
English summary
While one leopard was poisoned to death, the other two had died in Gundlupet taluk Bandipur forest area. Know more
Story first published: Friday, June 23, 2023, 8:48 [IST]