ಫೈನಲ್ ಪ್ರವೇಶಿಸಿದ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್; ಡಿ 29ರಂದು ಪ್ರಶಸ್ತಿಗಾಗಿ ಕಾದಾಟ

ಪಾಟ್ನಾಗೆ ಜಯಭೇರಿ, 5ನೇ ಬಾರಿಗೆ ಫೈನಲ್​ಗೆ

ಮೊದಲ ಸೆಮಿಫೈನಲ್​ನಂತೆ ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಿನ 2ನೇ ಸೆಮಿಫೈನಲ್ ಸಹ ರೋಚಕತೆಯಿಂದ ಕೂಡಿತ್ತು. ಆದರೆ ಕೊನೆಗೆ ಪಾಟ್ನಾವೇ ಮೇಲುಗೈ ಸಾಧಿಸಿತು. 3, 4, 5 ಹಾಗೂ 8ನೇ ಆವೃತ್ತಿಗಳಲ್ಲಿ ಫೈನಲ್​ ಪ್ರವೇಶಿಸಿದ್ದ ಪಾಟ್ನಾ ಒಟ್ಟು 3 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. 8ನೇ ಸೀಸನ್​ನಲ್ಲಿ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಐದನೇ ಸಲ ಅಂತಿಮ ಸುತ್ತಿಗೇರಿರುವ ಪಾಟ್ನಾ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಸೆಮಿಫೈನಲ್​ನಲ್ಲಿ ಸೋತಿರುವ ಡಬಾಂಗ್ ಡೆಲ್ಲಿ, ಮೂರನೇ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಯಿತು.

Source link