ಒಂದು ಬಾರಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls), ಹೊಸ ಆವೃತ್ತಿಗೆ ಸಜ್ಜಾಗಿ ನಿಂತಿದೆ. ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಗೂಳಿಗಳ ಸೈನ್ಯ, ಟ್ರೋಫಿ ಗೆಲ್ಲಲು ವಿಫಲವಾಗಿತ್ತು. ಆದರೆ, 10ನೇ ಆವೃತ್ತಿಗೆ ಮತ್ತಷ್ಟು ಹೊಸತನದೊಂದಿಗೆ ಮರಳುತ್ತಿರುವ ತಂಡವು, ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಹಾಗಿದ್ದರೆ, ಈ ಬಾರಿ ಗುಮ್ಮೋ ಗೂಳಿಗಳ ಬಳಗ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ನೋಡೋಣ.