11ನೇ ಆವೃತ್ತಿಯ ಪ್ರೊ ಕಬಡ್ಡಿ (Pro Kabaddi League Season 11) ಲೀಗ್‌ನ ಪ್ಲೇಆಫ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ದಿನಾಂಕ ಘೋಷಣೆಯಾಗಿದೆ. ಮಾರ್ಕ್ಯೂ ಲೀಗ್‌ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್ ಖಚಿತಪಡಿಸಿದ್ದು, 2024ರ ಡಿಸೆಂಬರ್ 26 ರಿಂದ 29ರ ತನಕ ಪುಣೆಯ ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು (PKL 11 Playoffs) ಜರುಗಲಿವೆ. ಲೀಗ್ ಹಂತದಲ್ಲಿ ಅಗ್ರ 2 ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಆದರೆ 3ನೇ, 4ನೇ, 5ನೇ ಮತ್ತು 6ನೇ ಸ್ಥಾನ ಪಡೆದ ತಂಡಗಳು ಡಿಸೆಂಬರ್ 26ರಂದು ಎಲಿಮಿನೇಟರ್ ಹಂತದಲ್ಲಿ ಸೆಣಸಾಟ ನಡೆಸಲಿವೆ.