Telugu
oi-Narayana M
ಬಾಹುಬಲಿ
ಪ್ರಭಾಸ್
ನಟನೆಯ
‘ಪ್ರಾಜೆಕ್ಟ್
–
K’
ಸಿನಿಮಾ
ಭಾರೀ
ಹೈಪ್
ಕ್ರಿಯೇಟ್
ಮಾಡಿದೆ.
ಮುಂದಿನ
ವರ್ಷ
ಸಂಕ್ರಾಂತಿಗೆ
ಸಿನಿಮಾ
ತೆರೆಗೆ
ಬರಲಿದೆ.
ಅಮಿತಾಬ್
ಬಚ್ಚನ್,
ದೀಪಿಕಾ
ಪಡುಕೋಣೆ
ಸೇರಿದಂತೆ
ಘಟಾನುಘಟಿ
ಕಲಾವಿದರು
ಚಿತ್ರದಲ್ಲಿ
ಬಣ್ಣ
ಹಚ್ಚಿದ್ದಾರೆ.
ಸದ್ಯ
ಈ
ಹೈ
ಬಜೆಟ್
ಸಿನಿಮಾ
ಬಗ್ಗೆ
ಕ್ರೇಜಿ
ನ್ಯೂಸ್
ಒಂದು
ವೈರಲ್
ಆಗ್ತಿದೆ.
‘ಮಹಾನಟಿ’
ಸಿನಿಮಾ
ಮಾಡಿದ್ದ
ನಾಗ್
ಅಶ್ವಿನ್
ಈ
ಸೈನ್ಸ್
ಫಿಕ್ಷನ್
ಆಕ್ಷನ್
ಥ್ರಿಲ್ಲರ್‌ಗೆ
ಆಕ್ಷನ್
ಕಟ್
ಹೇಳ್ತಿದ್ದಾರೆ.
ವೈಯಂತಿ
ಮೂವೀಸ್
ಬ್ಯಾನರ್‌ನಲ್ಲಿ
500
ಕೋಟಿಗೂ
ಅಧಿಕ
ಬಜೆಟ್‌ನಲ್ಲಿ
ಅಶ್ವಿನಿ
ದತ್
ಸಿನಿಮಾ
ನಿರ್ಮಾಣ
ಮಾಡುತ್ತಿದ್ದಾರೆ.
3
ವರ್ಷಗಳ
ಹಿಂದೆ
ಘೋಷಣೆಯಾಗಿದ್ದ
ಸಿನಿಮಾ
ಕಾರಣಾಂತರಗಳಿಂದ
ತಡವಾಗುತ್ತಿದೆ.
ಸಣ್ಣ
ಸಣ್ಣ
ಶೆಡ್ಯೂಲ್‌ಗಳಲ್ಲಿ
ಸಿನಿಮಾ
ಚಿತ್ರೀಕರಣ
ಮಾಡ್ತಾ
ಬರ್ತಿದ್ದಾರೆ.
ಇತ್ತೀಚೆಗೆ
ಚಿತ್ರದಲ್ಲಿನ
ಬಿಗ್‌ಬಿ
ಲುಕ್
ಲೀಕ್
ಆಗಿತ್ತು.
ಕಳೆದ
ವರ್ಷವೇ
ಸಿನಿಮಾ
ರಿಲೀಸ್
ಪ್ಲ್ಯಾನ್
ಮಾಡಲಾಗಿತ್ತು.
ಆದರೆ
ಕೊರೊನಾ
ಹಾವಳಿಯಿಂದ
ಶೂಟಿಂಗ್
ತಡವಾಗಿ
ರಿಲೀಸ್
ಡೇಟ್
ಮುಂದೂಡಲಾಗಿತ್ತು.
ಅಂತೂ
ಇಂತೂ
ಇದೀಗ
ಸಿನಿಮಾ
ಶೂಟಿಂಗ್
ಒಂದು
ಹಂತಕ್ಕೆ
ಮುಗಿದಿದೆ.
ಸದ್ಯ
‘ಆದಿಪುರುಷ್’
ಸಿನಿಮಾ
ಭಾರೀ
ಟೀಕೆಗೆ
ಗುರಿಯಾಗಿದ್ದರಿಂದ
ಪ್ರಭಾಸ್
ಅಭಿಮಾನಿಗಳು
‘ಸಲಾರ್’
ಹಾಗೂ
‘ಪ್ರಾಜೆಕ್ಟ್-
K’
ಸಿನಿಮಾಗಳ
ಮೇಲೆ
ಭಾರೀ
ನಿರೀಕ್ಷೆ
ಇಟ್ಟುಕೊಂಡಿದ್ದಾರೆ.
ಇನ್ನು
‘ಬಾಹುಬಲಿ’
ನಂತರ
ಆ
ಮಟ್ಟಿಗಿನ
ಹಿಟ್
ಇಲ್ಲದೇ
ಯಂಗ್
ರೆಬಲ್
ಸ್ಟಾರ್
ಕೂಡ
ಕಂಗೆಟ್ಟಿದ್ದಾರೆ.
ಪ್ರಭಾಸ್
ಎದುರು
ಕಮಲ್
ಹಾಸನ್
ಬಹುಕೋಟಿ
ವೆಚ್ಚದಲ್ಲಿ
ಬಹಳ
ಅದ್ಧೂರಿಯಾಗಿ
‘ಪ್ರಾಜೆಕ್ಟ್-
K’
ಸಿನಿಮಾ
ನಿರ್ಮಾಣವಾಗುತ್ತಿದೆ.
ದೀಪಿಕಾ,
ಅಮಿತಾಬ್,
ದಿಶಾ
ಪಟಾನಿ
ನಂತರ
ಈ
ಚಿತ್ರದಲ್ಲಿ
ಕಮಲ್
ಹಾಸನ್
ನಟಿಸೋ
ಬಗ್ಗೆ
ಚರ್ಚೆ
ನಡೀತಿದೆ.
ಬಹಳ
ಹಿಂದೆಯೇ
ಇಂತಾದೊಂದು
ಗುಸುಗುಸು
ಶುರುವಾಗಿತ್ತು.
ಇದೀಗ
ಉಳಗ
ನಾಯಗನ್
ಕೂಡ
ಚಿತ್ರದಲ್ಲಿ
ನಟಿಸೋಕೆ
ಗ್ರೀನ್
ಸಿಗ್ನಲ್
ಕೊಟ್ಟಿದ್ದಾರೆ
ಎನ್ನಲಾಗ್ತಿದೆ.
ಶೀಘ್ರದಲ್ಲೇ
ಈ
ಬಗ್ಗೆ
ಚಿತ್ರತಂಡ
ಅಧಿಕೃತವಾಗಿ
ಘೋಷಣೆ
ಮಾಡುವ
ಸಾಧ್ಯತೆಯಿದೆ.
ಪ್ರೇಕ್ಷಕರಿಗೆ
ಸಖತ್
ಥ್ರಿಲ್
ಒಂದ್ಕಡೆ
ಪ್ರಭಾಸ್,
ಮತ್ತೊಂದು
ಕಡೆ
ಅಮಿತಾಬ್,
ದೀಪಿಕಾ
ಪಡುಕೋಣೆ.
ಇದೀಗ
ಕಮಲ್
ಹಾಸನ್
ಕೂಡ
ಎಂಟ್ರಿ
ಆಗ್ತಿರೋದ್ರಿಂದ
ಇದು
ಭಾರತೀಯ
ಚಿತ್ರರಂಗದಲ್ಲೇ
ಅತಿದೊಡ್ಡ
ಮಲ್ಟಿಸ್ಟಾರರ್
ಸಿನಿಮಾ
ಎನಿಸಿಕೊಳ್ಳಲಿದೆ.
ಬಾಲಿವುಡ್,
ಟಾಲಿವುಡ್,
ಕಾಲಿವುಡ್
ಸೂಪರ್
ಸ್ಟಾರ್ಸ್‌ನ
ಒಂದೇ
ಫ್ರೇಮ್‌ನಲ್ಲಿ
ನೋಡಿದ್ರೆ
ಅಂದೆಂಥಾ
ಥ್ರಿಲ್
ಸಿಗಬಹುದು
ಹೇಳಿ?
ಹಾಗಾಗಿ
ಈ
ಸುದ್ದಿ
ನಿಜವೇ
ಆದರೆ
ಸಿನಿರಸಿಕರಿಗೆ
ಹಬ್ಬವೇ
ಸರಿ.
ವಿಲನ್
ಆಗಿ
ಉಳಗ
ನಾಯಗನ್
ಕಮಲ್
ಹಾಸನ್
ನಟನೆ
ಬಗ್ಗೆ
ದೂಸ್ರಾ
ಮಾತಿಲ್ಲ.
ಇನ್ನು
ಪಾತ್ರಕ್ಕಾಗಿ
ಎಷ್ಟೇ
ಕಸರತ್ತು
ಬೇಕಾದರೂ
ಉಳಗ
ನಾಯಗನ್
ಮಾಡ್ತಾರೆ.
ಅವರ
ವಿಭಿನ್
ಗೆಟಪ್‌ಗಳು,
ಲುಕ್‌ಗಳನ್ನು
ಈಗಾಗಲೇ
ಸಾಕಷ್ಟು
ಸಿನಿಮಾಗಳಲ್ಲಿ
ನೋಡಿದ್ದೇವೆ.
ಇತ್ತೀಚೆಗೆ
‘ವಿಕ್ರಂ’
ಸಿನಿಮಾ
ಮೂಲಕ
ಕಮಲ್
ಭರ್ಜರಿ
ಕಂಬ್ಯಾಕ್
ಮಾಡಿದ್ದರು.
ಹಾಗಾಗಿ
ಸಹಜವಾಗಿಯೇ
ಪ್ರಭಾಸ್-
ಕಮಲ್
ಜುಗಲ್‌ಬಂದಿ
ಪ್ರೇಕ್ಷಕರಿಗೆ
ಮಜಾ
ಕೊಡಲಿದೆ.
ಅದರಲ್ಲೂ
ವಿಲನ್
ಆಗಿ
ನಟಿಸ್ತಾರೆ
ಅನ್ನೋದು
ಹೆಚ್ಚು
ಕುತೂಹಲ
ಮೂಡಿಸಿದೆ.
ಕಮಲ್
ಹಾಸನ್
ಭಾರೀ
ಸಂಭಾವನೆ
ಕಮಲ್
‘ಪ್ರಾಜೆಕ್ಟ್-
K’
ಚಿತ್ರದಲ್ಲಿ
ವಿಲನ್
ಆಗಿ
ನಟಿಸೋಕೆ
150
ಕೋಟಿ
ರೂ.
ಸಂಭಾವನೆ
ಕೇಳ್ತಿದ್ದಾರೆ
ಎನ್ನುವ
ಗುಸುಗುಸು
ಕೇಳಿಬಂದಿತ್ತು.
ಕತೆ
ಮೇಲೆ
ನಿರ್ಮಾಪಕರು,
ನಿರ್ದೇಶಕರಿಗೆ
ಭಾರೀ
ನಂಬಿಕೆ
ಇದೆ.
ಈ
ಹಿಂದೆ
ಸಂದರ್ಶನವೊಂದರಲ್ಲಿ
ಮಾತನಾಡುತ್ತಾ
ಅಶ್ವಿನಿ
ದತ್
ಈ
ಚಿತ್ರಕ್ಕೆ
ಎಷ್ಟು
ಬಜೆಟ್
ಆಗುತ್ತೆ
ಅನ್ನೋದು
ಗೊತ್ತಿಲ್ಲ.
ಅದು
ಕೇಳಿದ್ದಷ್ಟು
ನಾವು
ಕೊಡಲು
ಸಿದ್ಧ
ಎಂದಿದ್ದರು.
ಹಾಗಾಗಿ
ಕಮಲ್
ಹಾಸನ್‌ಗೆ
ಅಷ್ಟು
ದೊಡ್ಡ
ಮೊತ್ತದ
ಸಂಭಾವನೆ
ಕೊಡೊಕೆ
ಹಿಂದೇಟು
ಹಾಕಲ್ಲ
ಎನ್ನಲಾಗ್ತಿದೆ.
English summary
Project- K Buzz: Kamal Haasan confirmed to play antagonist role against Prabhas. Official Announcement Expected Today. know more.
Sunday, June 25, 2023, 8:44