ಪ್ರಧಾನಿ ಮೋದಿ ಮೇಲಿರುವ ಭಯಕ್ಕೆ ವಿಪಕ್ಷಗಳು ಒಂದಾಗಿವೆ: ಉತ್ತರ ಪ್ರದೇಶ ಉಪಮುಖ್ಯಮಂತ್ರಿ! | Uttar Pradesh Deputy CM Keshav Prasad Maurya comment over Patna opposition meet

India

oi-Malathesha M

|

Google Oneindia Kannada News

ಲಖನೌ: ವಿರೋಧ ಪಕ್ಷಗಳ ಸಭೆ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ತಿರುಗೇಟು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮೇಲಿರುವ ಭಯದಿಂದ ವಿಪಕ್ಷಗಳು ಒಂದಾಗಿವೆ ಎಂದಿದ್ದಾರೆ. ನಿನ್ನೆಯಷ್ಟೇ ವಿರೋಧ ಪಕ್ಷ ನಾಯಕರು ಸಭೆ ನಡೆಸಿದ್ದರು. ಈಗ ಸಭೆ ವಿರುದ್ಧ ಆಡಳಿತ ಪಕ್ಷದ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸೋಲಿಸಬೇಕೆಂದು ವಿಪಕ್ಷಗಳು ಸಜ್ಜಾಗುತ್ತಿವೆ. ಇದೇ ಕಾರಣಕ್ಕೆ ಹಲವು ತಿಂಗಳ ಪರಿಶ್ರಮದ ಬಳಿಕ ನಿನ್ನೆ ಬಿಹಾರ ರಾಜಧಾನಿಯಲ್ಲಿ ವಿಪಕ್ಷ ನಾಯಕರ ಮಹತ್ವದ ಸಭೆ ನಡೆದಿತ್ತು. ಸಭೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರ ದಂಡೇ ನೆರೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಉಪಮುಖ್ಯಮಂತ್ರಿ, ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರ ಮೇಲಿನ ಭಯಕ್ಕೆ ಒಂದಾಗಿವೆ ಎಂದಿದ್ದಾರೆ. ಅಲ್ಲದೆ ಈ ಸಭೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕೇಶವ್‌ ಪ್ರಸಾದ್‌ ಮೌರ್ಯ ಭವಿಷ್ಯ ನುಡಿದಿದ್ದಾರೆ.

comment over Patna opposition meet

ವಿಪಕ್ಷಗಳಲ್ಲಿ ಕುಟುಂಬ ರಾಜಕಾರಣದ ಆರೋಪ

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, ಹಾವು ಮುಂಗುಸಿ ಒಟ್ಟಿಗೆ ಇರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಅವಕಾಶವಾದಿ ಪಕ್ಷಗಳು ಒಂದಾಗಲು ಸಾಧ್ಯವೇ ಇಲ್ಲ. ಮೋದಿಗೆ ಹೆದರಿ ಮುಂದೆ ಬಂದಿದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದರು. ಅಲ್ಲದೆ ಜಮ್ಮು & ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿ ವಿರೋಧಿಸಿದ್ದ ಇವರು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಅಡ್ಡಿಪಡಿಸಿದವರು ಹಾಗೂ ಬಡವರ ಮತ್ತು ರೈತ ವಿರೋಧಿಗಳು ಪಟ್ನಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮೌರ್ಯ ಆರೋಪ ಮಾಡಿದ್ದಾರೆ. ಅಲ್ಲದೆ ವಿರೋಧ ಪಕ್ಷಗಳು ರಾಜಕೀಯದಲ್ಲಿ ತಮ್ಮ ಕುಟುಂಬವನ್ನು ಉಳಿಸಲು ಪ್ರಯತ್ನಿಸುತ್ತಿವೆ ಎಂದಿದ್ದಾರೆ.

ಸಭೆ ಯಶಸ್ವಿ ಆಗುತ್ತಾ? ಆಗಲ್ವಾ?

ಲಾಲು, ಅಖಿಲೇಶ್‌, ಮಮತಾ, ಸ್ಟಾಲಿನ್‌, ಹೇಮಂತ್‌, ಮೆಹಬೂಬ, ಠಾಕ್ರೆ & ಪವಾರ್‌ರ ಕುಟುಂಬಗಳ ವಿರುದ್ಧ ವಾಗ್ದಾಳಿ ನಡೆಸಿ. ಮೋದಿಯವರ ಕುಟುಂಬ ವಿರೋಧಿ, ಭ್ರಷ್ಟಾಚಾರ ವಿರೋಧಿ ರಾಜಕೀಯದ ಮುಂದೆ ವಿರೋಧ ಪಕ್ಷಗಳ ನಡೆಯು ಯಶಸ್ವಿಯಾಗಲ್ಲ ಎಂದು ಇದೇ ವೇಳೆ ಕೇಶವ್‌ ಪ್ರಸಾದ್‌ ಮೌರ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನಿನ್ನೆ ಕೂಡ BJP ಪಕ್ಷದ ಕೇಂದ್ರ ನಾಯಕರು ವಿರೋಧ ಪಕ್ಷಗಳ ಸಭೆ ಬಗ್ಗೆ ಲೇವಡಿ ಮಾಡಿದ್ದರು. ಇದೀಗ ಯುಪಿ ಡಿಸಿಎಂ ಕೂಡ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದ್ಕಡೆ ಈ ಸವಾಲುಗಳನ್ನ ಮೆಟ್ಟಿ ನಿಲ್ಲಲು ವಿಪಕ್ಷಗಳ ಒಳಗೆ ಹೊಂದಾಣಿಕೆ ಇಲ್ಲ ಎಂದು ಆರೋಪಿಸಿದ್ದಾರೆ.

ವಿಪಕ್ಷಗಳ ಪಾಟ್ನಾ ಸಭೆ ಯಶಸ್ಸು, ಶಿಮ್ಲಾದಲ್ಲಿ ಮತ್ತೊಂದು ಸಭೆಗೆ ಪಕ್ಷಗಳ ತಯಾರಿ!: ಯಾವಾಗ ತಿಳಿಯಿರಿವಿಪಕ್ಷಗಳ ಪಾಟ್ನಾ ಸಭೆ ಯಶಸ್ಸು, ಶಿಮ್ಲಾದಲ್ಲಿ ಮತ್ತೊಂದು ಸಭೆಗೆ ಪಕ್ಷಗಳ ತಯಾರಿ!: ಯಾವಾಗ ತಿಳಿಯಿರಿ

ಸಭೆಯಲ್ಲಿ 16 ವಿಪಕ್ಷಗಳ ನಾಯಕರು ಭಾಗಿ

ಇನ್ನು ನಿನ್ನೆ ಬಿಹಾರ ಸಿಎಂ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ, ಎನ್‌ಸಿಪಿ ಸೇರಿದಂತೆ 16 ಪಕ್ಷಗಳು ಪಾಲ್ಗೊಂಡಿದ್ದವು. ಈ ಸಭೆಯಲ್ಲಿ 2024ರ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಮುನ್ನಡೆಯಲು ಶಪಥ ಮಾಡಲಾಗಿದೆ. ಒಗ್ಗಟ್ಟಿನ ಮೂಲಕ ಬಿಜೆಪಿ ಮಣಿಸಲು ವಿಪಕ್ಷಗಳ ನಾಯಕರು ತೀರ್ಮಾನಿಸಿದ್ದರು. ಆದ್ರೆ ಈಗ ಬಿಜೆಪಿ ನಾಯಕರು ವಿಪಕ್ಷಗಳ ನಾಯಕರ ಸಭೆ ಬಗ್ಗೆ ವಾಗ್ದಾಳಿ ನಡೆಸುತ್ತಿದ್ದಾರೆ ಹಾಗೇ ಲೇವಡಿ ಮಾಡಿದ್ದಾರೆ. ಆದರೆ ಈವರೆಗೂ ಬಿಜೆಪಿ ನಾಯಕರ ಹೇಳಿಕೆಗೆ ವಿರೋಧ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಒಟ್ನಲ್ಲಿ ಅತ್ತ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗುತ್ತಿವೆ. ಆದ್ರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ಚುನಾವಣೆ ಭೀಕರ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದಂತೆ ಕಾಣುತ್ತಿದೆ. ಟಿಡಿಪಿ ಹಾಗೂ ಅಕಾಲಿ ದಳದ ಜೊತೆ ಮೈತ್ರಿಗೆ BJP ಮುಂದಾಗಿದೆ ಎಂಬ ಮಾತು ಕೇಳಿಬಂದಿತ್ತು. ಈ ಮೂಲಕ 2024ರ ಚುನಾವಣೆಯಂತು ಹೈವೋಲ್ಟೇಜ್ ಆಗೋದು ಗ್ಯಾರಂಟಿ.

English summary

Uttar Pradesh Deputy CM Keshav Prasad Maurya comment over Patna opposition meet.

Story first published: Saturday, June 24, 2023, 20:54 [IST]

Source link