ಪ್ರಧಾನಿ ಮೋದಿ & ಬೈಡನ್ ಮಧ್ಯೆ ‘ಎಣ್ಣೆ’ ಮಾತು! ಇಬ್ಬರೂ ನಾಯಕರು ನಕ್ಕಿದ್ದು ಏಕೆ? | Alcohol joke between PM Narendra Modi and Joe Biden

International

oi-Malathesha M

|

Google Oneindia Kannada News

ವಾಷಿಂಗ್ಟನ್: ಪಿಎಂ ನರೇಂದ್ರ ಮೋದಿ ಅಮೆರಿಕ ಭೇಟಿ ಜಗತ್ತಿನಾದ್ಯಂತ ಸದ್ದು ಮಾಡಿದೆ & ಸುದ್ದಿಯಾಗಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷರು ಭಾರತದ ಪ್ರಧಾನಿಗೆ ನೀಡಿದ ಆತಿಥ್ಯ ಪ್ರಪಂಚದ ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ & ಬೈಡನ್ ಮಧ್ಯೆ ನಡೆದ ‘ಎಣ್ಣೆ’ ಚರ್ಚೆ ಗಮನ ಸೆಳೆದಿದೆ. ಹಾಗಾದರೆ ಏನಿದು ಅಮೆರಿಕದಲ್ಲಿ ‘ಎಣ್ಣೆ’ ಪ್ರಸಂಗ? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ನಿಮಗೆಲ್ಲಾ ಗೊತ್ತಿರುವಂತೆ ಆಧುನಿಕ ಕಾಲದಲ್ಲಿ ಆಲ್ಕೋಹಾಲ್ ಅನ್ನೋದು ಮಾಮೂಲಿ ವಿಚಾರ. ಅದ್ರಲ್ಲೂ ಗಣ್ಯರಿಗೆ ಇದು ಪ್ರತಿಷ್ಠೆಯ ವಿಚಾರ ಕೂಡ. ಹೀಗಾಗಿಯೇ ಯಾವುದೇ ದೇಶದ ಜನಪ್ರತಿನಿಧಿ ವಿದೇಶಕ್ಕೆ ಹೋದಾಗ ಅಲ್ಲಿನ ಗಣ್ಯರು, ಅಧ್ಯಕ್ಷರು, ಪ್ರಧಾನ ಮಂತ್ರಿ ಭೇಟಿ ಮಾಡಿದಾಗ ಎಣ್ಣೆ ಹಾಕ್ತಾರೆ. ಹೀಗೆ ಏರ್ಪಡಿಸುವ ಔತಣ ಕೂಟದಲ್ಲಿ ಡ್ರಿಂಕ್ಸ್ ಅಂದರೆ ‘ಎಣ್ಣೆ’ ಇದ್ದೇ ಇರುತ್ತೆ. ಆದರೆ ಪ್ರಧಾನಿ ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಬೇರೆ ಘಟನೆಯೇ ನಡೆದು ಹೋಯ್ತು. ಪ್ರಮುಖವಾಗಿ ಪ್ರಧಾನಿ ಮೋದಿ ಹಾಗೂ ಬೈಡನ್ ಮಧ್ಯೆ ‘ಎಣ್ಣೆ’ ಬಗ್ಗೆ ಚರ್ಚೆ ನಡೆದಾಗ ಜನ ಹೊಟ್ಟೆ ಹಿಡಿದುಕೊಂಡು ನಕ್ಕರು!

PM Narendra Modi and Joe Biden

ಪ್ರಧಾನಿ ಮೋದಿಗೆ ಆಹಾರ ಶೈಲಿಗೆ ಮೆಚ್ಚುಗೆ!

ಹೌದು, ಪ್ರಧಾನಿ ಮೋದಿ ತಮ್ಮ ಅಮೆರಿಕ ಪ್ರವಾಸವನ್ನು ಅದ್ಧೂರಿಯಾಗಿ ಮುಗಿಸಿದ್ದಾರೆ. ಅದರಲ್ಲೂ ಈ ಬಾರಿಯ ಪ್ರವಾಸ ಭಾರತಕ್ಕೆ ಐತಿಹಾಸಿಕ ಲಾಭ ತಂದುಕೊಟ್ಟಿದೆ. ಹೀಗಾಗಿ ಇಡೀ ಜಗತ್ತು ಭಾರತದತ್ತ ನೋಡ್ತಿದೆ. ಅಚ್ಚುಕಟ್ಟಾಗಿ ನಡೆದ ಪ್ರಧಾನಿ ಮೋದಿ ಅಮೆರಿಕ ಭೇಟಿಯ ಸಂದರ್ಭದಲ್ಲಿ ಗ್ಯಾಂಡ್ ಡಿನ್ನರ್ ಪಾರ್ಟಿ ಕೂಡ ಇತ್ತು. ಆದ್ರೆ ಪ್ರಧಾನಿ ಮೋದಿ ಅವರು ಆಲ್ಕೋಹಾಲ್ ಸೇವನೆ ಮಾಡೋದಿಲ್ಲ, ಜೊತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಎಣ್ಣೆ ಹೊಡೆಯೋದಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಮತಹ್ವದ ಚರ್ಚೆ ನಡೆದು, ಜನರು ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ.

ಅಮೆರಿಕದ ಶ್ವೇತಭವನದಲ್ಲೂ ‘ಎಣ್ಣೆ’ ಜೋಕ್!

ಪಿಎಂ ಮೋದಿ ಅವರಿಗೆ ಶ್ವೇತಭವನದಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಮೋದಿಯವರ ಜೊತೆ 400 ಗಣ್ಯರಿಗೆ ಆಹ್ವಾನವಿತ್ತು. ವೇದಿಕೆ ಮೇಲೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬೈಡನ್ 2 ದೇಶಗಳ ಮಧ್ಯೆ ಸಂಬಂಧ, ಸೌಹಾರ್ದತೆ, ದ್ವಿಪಕ್ಷೀಯ ಮಾತುಕತೆ ಬಗ್ಗೆ ವಿಮರ್ಶೆ ಮಾಡಿ ಪರಸ್ಪರ ಶ್ಲಾಘಿಸಿದರು. ಆಗಲೇ ಸಾಂಪ್ರದಾಯಿಕವಾಗಿ ಅಮೆರಿಕದ ಅಧ್ಯಕ್ಷರು ಪ್ರಧಾನಿ ಮೋದಿಗೆ ಟೋಸ್ಟ್ ನೀಡಿದರು. ಟೋಸ್ಟ್ ಅಂದ್ರೆ ಗ್ಲಾಸಿಗೆ ಆಲ್ಕೋಹಾಲ್ ಸುರಿದು ಚಿಯರ್ಸ್ ಹೇಳುವುದು. ಆದರೆ ಪ್ರಧಾನಿ ಮೋದಿಯವರು ಮದ್ಯ, ಮಾಂಸದಿಂದ ದೂರ. ಕಟ್ಟುನಿಟ್ಟಿನ ಆಹಾರ ಸೇವನೆ, ಜೀವನ ಶೈಲಿ ಪಾಲಿಸುವವರು. ಹೀಗಾಗಿ ಜೋ ಬೈಡನ್ ಮೋದಿಯವರ ಜೊತೆ ಜೋಕ್ ಮಾಡಿ ಎಲ್ಲರನ್ನೂ ನಗಿಸಿದರು.

PM Narendra Modi and Joe Biden

ಬೈಡನ್ ಕೂಡ ಎಣ್ಣೆ ಮುಟ್ಟೋದಿಲ್ಲ!

ಅಂದಹಾಗೆ ಪ್ರಧಾನಿ ಮೋದಿ ಅವರ ರೀತಿಯೇ ಅಮೆರಿಕ ಅಧ್ಯಕ್ಷ ಬೈಡನ್ ಕೂಡ ಎಣ್ಣೆ ಮುಟ್ಟೋದಿಲ್ಲ. 80 ವರ್ಷದ ಬೈಡನ್ ಅವರಿಗೂ ಆಲ್ಕೋಹಾಲ್ ಸೇವಿಸುವ ಅಭ್ಯಾಸ ಇಲ್ಲ. ಇದೇ ಕಾರಣಕ್ಕೆ ತಮ್ಮ ತಾನ ಹೇಳಿದ ಮಾತನ್ನು ನೆನಪಿಸಿಕೊಂಡ ಬೈಡನ್, ನನ್ನ ತಾತ ಒಂದು ಮಾತು ಹೇಳುತ್ತಿದ್ದರು. ನೀವು ಮತ್ತೊಬ್ಬರಿಗೆ ಟೋಸ್ಟ್ ನೀಡಿ ಅದರಲ್ಲಿ ಆಲ್ಕೋಹಾಲ್ ಇರದಿದ್ದರೆ ಎಡಗೈಯಿಂದ ಚಿಯರ್ಸ್ ಹೇಳಬೇಕು ಎನ್ನುತ್ತಿದ್ದರು. ಹೀಗಾಗಿಯೇ ನಾನು ಇಂದು ಮೋದಿ ಅವರಿಗೆ ಎಡಗೈಯಿಂದಲೇ ಚಿಯರ್ಸ್ ಎನ್ನುತ್ತೇನೆ ಎಂದರು.

ಯುದ್ಧ ಬೇಡ.. ಶಾಂತಿ ಬೇಕು.. ಜಗತ್ತಿಗೆ ಪ್ರಧಾನಿ ಮೋದಿ ಶಾಂತಿಯ ಸಂದೇಶ!ಯುದ್ಧ ಬೇಡ.. ಶಾಂತಿ ಬೇಕು.. ಜಗತ್ತಿಗೆ ಪ್ರಧಾನಿ ಮೋದಿ ಶಾಂತಿಯ ಸಂದೇಶ!

ಹೀಗೆ ಜೋ ಬೈಡನ್ ಹೇಳಿದ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅಲ್ಲೆ ನೆರದಿದ್ದ ಎಲ್ಲರೂ ನಕ್ಕರು. ಹಾಗೇ ಪ್ರಧಾನಿ ಮೋದಿ ಅವರು ಇದೇ ವೇಳೆ ಶುಂಠಿ ಹಾಕಿದ ಗ್ರೀನ್ ಟೀ ಸೇವಿಸಿದರು ಎನ್ನಲಾಗಿದೆ. ಅದ್ಧೂರಿಯಾಗಿ ನಡೆದ ಡಿನ್ನರ್ ಪಾರ್ಟಿಯಲ್ಲಿ ಆಯ್ದ ಗಣ್ಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹಾಗೇ ಮಹತ್ವದ ಮಾತುಕತೆಗೆ ಕೂಡ ಈ ವೇದಿಕೆ ಸಾಕ್ಷಿಯಾಗಿದ್ದು ವಿಶೇಷ.

English summary

Alcohol joke between PM Narendra Modi and Joe Biden.

Story first published: Saturday, June 24, 2023, 18:11 [IST]

Source link