ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೆಸ್:’ಅಸುರನ್’ ಡೈಲಾಗ್ ಹೇಳಿ ಪೊಲಿಟಿಕಲ್ ಎಂಟ್ರಿ ಸುಳಿವು ಕೊಟ್ರಾ ದಳಪತಿ?? | Thalapathy Vijay political entry: leo actor honoured the 10th and 12th toppers in Chennai

bredcrumb

Tamil

oi-Narayana M

|

ತಮಿಳು
ನಟ
ದಳಪತಿ
ವಿಜಯ್
ರಾಜಕೀಯರಂಗಕ್ಕೆ
ಬರ್ತಾರೆ
ಎನ್ನುವ
ಗುಸುಗುಸು
ಕಾಲಿವುಡ್‌ನಲ್ಲಿ
ಕೇಳಿಬರುತ್ತಲೇ
ಇದೆ.
ವಿಜಯ್
ತಮಿಳುನಾಡಿನಲ್ಲಿ

ವರ್ಷ
ಎಲ್ಲಾ
ಕ್ಷೇತ್ರಗಳ
ಎಸ್‌ಎಸ್‌ಎಲ್‌ಸಿ
ಹಾಗೂ
ಪಿಯುಸಿ
ಟಾಪರ್‌ಗಳಿಗೆ
ಸನ್ಮಾನಿಸಿದ್ದಾರೆ.

ಮೂಲಕ
ತಮ್ಮ
ಪೊಲಿಟಿಕಲ್
ಎಂಟ್ರಿಗೆ
ತೆರೆಮರೆಯಲ್ಲಿ
ಸಿದ್ಧತೆ
ನಡೆಸಿದ್ದಾರೆ
ಎನ್ನಲಾಗ್ತಿದೆ.
ರಾಜ್ಯದ
ಪ್ರತಿಭಾನ್ವಿತ
ವಿದ್ಯಾರ್ಥಿಗಳನ್ನು
ಖುದ್ದು
ನಟ
ವಿಜಯ್
ಸನ್ಮಾನಿಸಿದ್ದಾರೆ.

ವಿದ್ಯಾರ್ಥಿಗಳನ್ನು
ಉದ್ದೇಶಿಸಿ
ನಟ
ವಿಜಯ್
10
ನಿಮಿಷಗಳ
ಕಾಲ
ಮಾತನಾಡಿದರು.

ವೇಳೆ
ಎಲ್ಲರಿಗೂ
ಕಿವಿಮಾತು
ಹೇಳಿದರು.
ನಾನೇನು
ಓದಿಲ್ಲ
ನಿಮಗೆ
ಹೇಳುತ್ತಿದ್ದೇನೆ
ಎಂದುಕೊಳ್ಳಬೇಡಿ
ಓದಿನ
ಮಹತ್ವದ
ಬಗ್ಗೆ
ಮಾತನಾಡಿದ್ದಾರೆ.
ಧನುಷ್
ನಟನೆಯ
‘ಅಸುರನ್’
ಚಿತ್ರದ
ಡೈಲಾಗ್‌ವೊಂದನ್ನು
ಪ್ರಸ್ತಾಪಿಸಿ
ನೀವು
ಓದಿಕೊಂಡರೆ
ಅದನ್ನು
ಯಾರಿಂದರೂ
ಕಿತ್ತುಕೊಳ್ಳಲು
ಸಾಧ್ಯವಿಲ್ಲ.
ಓದುವುದು
ಬಹಳ
ಅಗತ್ಯ.
ಎಂಜಾಯ್
ಮಾಡುವಾಗ
ಎಂಜಾಯ್
ಮಾಡಿ.
ಓದುವ
ಸಮಯದಲ್ಲಿ
ಓದಿ
ಎಂದಿದ್ದಾರೆ.
ಹಣ
ತೆಗೆದುಕೊಂಡು
ಮತ
ಚಲಾಯಿಸಬೇಡಿ
ಎಂದು
ತಿಳಿಸಿದ್ದಾರೆ.

Thalapathy Vijay political entry: leo actor honoured the 10th and 12th toppers in Chennai

ಕಾಲಿವುಡ್‌ನಲ್ಲಿ
ಸೂಪರ್
ಹಿಟ್
ಸಿನಿಮಾಗಳಿಂದ
ವಿಜಯ್
ಸೆನ್ಸೇಷನ್
ಕ್ರಿಯೇಟ್
ಮಾಡಿದ್ದಾರೆ.
ಸೂಪರ್
ಸ್ಟಾರ್
ರಜನಿಕಾಂತ್
ಬಳಿಕ
ತಮಿಳು
ಚಿತ್ರರಂಗದಲ್ಲಿ

ಮಟ್ಟಿಗಿನ
ಕ್ರೇಜ್
ಸಂಪಾದಿಸಿರುವ
ಮತ್ತೊಬ್ಬ
ನಟ
ದಳಪತಿ
ವಿಜಯ್.
ಇನ್ನು
ಅಂಬೇಡ್ಕರ್,
ಕಾಮರಾಜ್,
ಪೆರಿಯಾರ್
ಎಲ್ಲರ
ಬಗ್ಗೆಯೂ
ಓದುವುದು
ಒಳ್ಳೆಯದು.
ಅದರಲ್ಲಿ
ನಿಮಗೆ
ಬೇಕು
ಅನ್ನಿಸಿದ್ದನ್ನು
ಅಳವಡಿಸಿಕೊಳ್ಳಿ,
ಬೇಡದ್ದನ್ನು
ಬಿಟ್ಟುಬಿಡಿ
ಎಂದು
ವಿಜಯ್
ಹೇಳಿದ್ದಾರೆ.
ಸೋಷಿಯಲ್
ಮೀಡಿಯಾ
ಬಗ್ಗೆ
ಎಚ್ಚರದಿಂದಿರಿ
ಎಂದು
ಸಲಹೆ
ನೀಡಿದ್ದಾರೆ.

ದಳಪತಿ ವಿಜಯ್ 68ನೇ ಸಿನಿಮಾಗೆ ವೆಂಕಟ್ ಪ್ರಭು ಆಕ್ಷನ್ ಕಟ್: ದಳಪತಿ
ವಿಜಯ್
68ನೇ
ಸಿನಿಮಾಗೆ
ವೆಂಕಟ್
ಪ್ರಭು
ಆಕ್ಷನ್
ಕಟ್:
“ಸುದೀಪ್
ಮನೆಗೆ
ಬಂದೋಗಿದ್ದೇಕೆ?”
ನೆಟ್ಟಿಗರ
ಪ್ರಶ್ನೆ

ವಿದ್ಯಾರ್ಥಿನಿಗೆ
ಡೈಮಂಡ್
ನೆಕ್ಲೆಸ್‌

ಚೆನ್ನೈನ
ನೀಲಂಕರೈನಲ್ಲಿರುವ
ಆರ್‌ಕೆ
ಕನ್ವೆಕ್ಷನ್‌
ಹಾಲ್‌ನಲ್ಲಿ
ವಿದ್ಯಾರ್ಥಿಗಳಿಗೆ
ಸಲ್ಮಾನ
ಸಮಾರಂಭ
ಏರ್ಪಡಿಸಲಾಗಿತ್ತು.
ತಮಿಳುನಾಡಿನಾದ್ಯಂತೆ
ಎಲ್ಲಾ
ವಿಧಾನ
ಸಭಾ
ಕ್ಷೇತ್ರಗಳ
10
ಮತ್ತು
12ನೇ
ತರಗತಿ(ಎಸ್‌ಎಸ್‌ಎಲ್‌ಸಿ
ಹಾಗೂ
ಪಿಯುಸಿ)
ಟಾಪ್
3
ವಿದ್ಯಾರ್ಥಿಗಳಿಗೆ
ವಿಜಯ್
ಬಹುಮಾನ
ನೀಡಿದರು.
ಪಿಯುಸಿಯಲ್ಲಿ
600
ಅಂಕಕ್ಕೆ
600
ಅಂಕ
ಗಳಿಸಿದ
ವಿದ್ಯಾರ್ಥಿನಿ
ನಂದಿನಿಗೆ
ವಿಜಯ್
ಡೈಮಂಟ್
ನೆಕ್ಲೆಸ್
ಬಹುಮಾನವಾಗಿ
ನೀಡಿದ್ದು
ವಿಶೇಷ.

ವಿಡಿಯೋ
ಈಗ
ವೈರಲ್
ಆಗಿದೆ.

ವಿದ್ಯಾರ್ಥಿಗಳಿಗೆ
ನಗದು
ಬಹುಮಾನ

ತಮಿಳುನಾಡಿದ
234
ಕ್ಷೇತ್ರಗಳಲ್ಲಿ
ಅತಿ
ಹೆಚ್ಚು
ಅಂಕ
ಗಳಿಸಿದ
ಮೂವರು
ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು.
‘ವಿಜಯ್
ಮಕ್ಕಳ್
ಇಯಕ್ಕಂ’
ಸಂಘಟನೆ
ಮೂಲಕ
ಅರ್ಹ
ವಿದ್ಯಾರ್ಥಿಗಳನ್ನು
ಆಹ್ವಾನಿಸಿ
ಪುಸ್ಕರಿಸಲಾಗಿದೆ.
ಪ್ರತಿ
ಕ್ಷೇತ್ರದಲ್ಲೂ
ಅತೀ
ಹೆಚ್ಚು
ಅಂಕ
ಪಡೆದ
ಮೊದಲ
ಮೂವರು
ವಿದ್ಯಾರ್ಥಿಗಳಿಗೆ
ಕ್ರಮವಾಗಿ
25
ಸಾವಿರ
ರೂಪಾಯಿ,
15
ಸಾವಿರ
ರೂ.,
10
ಸಾವಿರ
ರೂ.
ಹಣವನ್ನು
ನೀಡಲಾಗಿದೆ.

Thalapathy Vijay political entry: leo actor honoured the 10th and 12th toppers in Chennai

‘ಅಸುರನ್’
ಸಿನಿಮಾ
ಡೈಲಾಗ್

ವೇದಿಕೆಯಲ್ಲಿ
ವಿದ್ಯಾರ್ಥಿಗಳನ್ನು
ಉದ್ದೇಶಿಸಿ
ಮಾತನಾಡುವ
ವೇಳೆ
ನಟ
ವಿಜಯ್
ತಮಿಳಿನ
ಸೂಪರ್
ಹಿಟ್
‘ಅಸುರನ್’
ಸಿನಿಮಾ
ಡೈಲಾಗ್
ಹೇಳಿದರು.
“ನಮ್ಮ
ಬಳಿ
ಜಮೀನು
ಇದ್ದರೆ,
ಅದನ್ನು
ಕಿತ್ತುಕೊಳ್ಳುತ್ತಾರೆ.
ನಮ್ಮ
ಬಳಿ
ಹಣವಿದ್ದರೆ,
ಅದನ್ನು
ದೋಚುತ್ತಾರೆ.
ಅದೇ
ನಮ್ಮ
ಬಳಿ
ವಿದ್ಯೆ
ಇದ್ದರೆ,
ಅದನ್ನು
ನಮ್ಮಿಂದ
ಎಂದಿಗೂ
ಯಾರು
ಕಿತ್ತುಕೊಳ್ಳಲು
ಸಾಧ್ಯವಿಲ್ಲ”
‘ಅಸುರನ್’
ಚಿತ್ರದಲ್ಲಿ
ಧನುಷ್
ಹೇಳಿದ್ದ
ಡೈಲಾಗ್
ಇದು.
ಇದನ್ನು
ಹೇಳಿ
ವಿಜಯ್

ಮಾತುಗಳು
ನನ್ನಲ್ಲಿ
ಸಾಕಷ್ಟು
ಬದಲಾವಣೆ
ತಂದಿದೆ
ಎಂದರು.

ಹಣಕ್ಕೆ
ಮತ
ಮಾರಿಕೊಳ್ಳಬೇಡಿ

ನಟ
ವಿಜಯ್
ಮಾತನಾಡುತ್ತ
ಯಾವುದೇ
ಕಾರಣಕ್ಕೆ
ಹಣಕ್ಕೆ
ನಿಮ್ಮ
ಮತಗಳನ್ನು
ಮಾರಿಕೊಳ್ಳಬೇಡಿ.
ಒಂದು
ಮತಕ್ಕೆ
ಸಾವಿರ
ರೂಪಾಯಿ
ಕೊಡುತ್ತಾರೆ
ಅಂದ್ರೆ
ಒಂದು
ಕ್ಷೇತ್ರದಲ್ಲಿ
ಒಂದೂವರೆ
ಲಕ್ಷ
ಮತದಾರರಿಗೆ
ಅಂದಾಜು
15
ಕೋಟಿ
ರೂ.
ಕೊಡಬೇಕು.
ಇಷ್ಟು
ಹಣ
ಮತದಾರರಿಗೆ
ಕೊಡಿತ್ತಾರೆ
ಎಂದರೆ
ಅವರು
ಎಷ್ಟು
ಸಂಪಾದಿಸಿರುತ್ತಾರೆ?
ಗೆದ್ದಮೇಲೆ
ಎಷ್ಟು
ಸಂಪಾದಿಸುತ್ತಾರೆ?
ಯೋಚಿಸಿ.
ನೀವು
ನಿಮ್ಮ
ಪೋಷಕರಿಗೂ
ಹೇಳಿ,
ಹಣ
ಪಡೆದು
ಮತ
ಚಲಾಯಿಸಬೇಡಿ
ಎಂದು.
ನೀವು
ಕೂಡ
ಮುಂದೆ
ಮತ
ಚಲಾಯಿಸುತ್ತೀರಾ.
ಆಗ
ಇದು
ನಿಮಗೆ
ನೆನಪಿರಲಿ
ಎಂದಿದ್ದಾರೆ.

English summary

Thalapathy Vijay political entry: leo actor honoured the 10th and 12th toppers in Chennai. actor Gifted Diamond Necklace To Nandini, who scored 100% marks. know more.

Sunday, June 18, 2023, 18:21

Source link