Business
oi-Punith BU
ನವದೆಹಲಿ, ಜೂನ್ 30: ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕ ಸಮೀಪಿಸುತ್ತಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆಯು ಭಾರತದ ನಾಗರಿಕರಿಗೆ ತಮ್ಮ ಪ್ಯಾನ್ ಕಾರ್ಡ್‌ಗಳನ್ನು ತಮ್ಮ ಆಧಾರ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವಂತೆ ನಿರಂತರವಾಗಿ ನೆನಪಿಸುತ್ತಿದೆ.
ಹಲವಾರು ಅಗತ್ಯ ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲಾಗುತ್ತಿದೆ. ಅದರಂತೆಯೇ ಪ್ಯಾನ್ ಕಾರ್ಡ್‌ಗೂ ಕೂಡಾ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಹಲವಾರು ಬಾರಿ ಈ ಅಗತ್ಯ ದಾಖಲೆಗಳ ಲಿಂಕ್ ಗಡುವು ವಿಸ್ತರಣೆ ಮಾಡಲಾಗಿದ್ದು, ಈಗ ಇಂದೇ ಅಂದರೆ ಜೂನ್ 30 ಅಂತಿಮ ಗಡುವು ಆಗಿದೆ.
ಹೌದು ಈ ಎರಡು ಅಗತ್ಯ ದಾಖಲೆಗಳನ್ನು ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದ್ದು, ನೀವು ಸಮಯಕ್ಕೆ ಸರಿಯಾಗಿ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಈಗಾಗಲೇ ನೀವು ಲಿಂಕ್ ಮಾಡುವಾಗ 1000 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಜುಲೈ ಬಳಿಕ ನಿಮ್ಮ ಪ್ಯಾನ್ ಕಾರ್ಡ್ ಸಂಪೂರ್ಣವಾಗಿ ನಿಷ್ಕ್ರೀಯವಾಗಲಿದೆ. ಎರಡು ದಾಖಲೆಗಳನ್ನು ಹೇಗೆ ಲಿಂಕ್ ಮಾಡುವುದು ತಿಳಿಯಿರಿ.
ಆಧಾರ್ – ಪ್ಯಾನ್ ಲಿಂಕ್ ಮಾಡುವುದು ಹೇಗೆ?
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ – https://incometaxindiaefiling.gov.in/
ಹಂತ 2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
ಹಂತ 3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ ‘Profile Settings’ ಗೆ ಹೋಗಿ, ‘Link Aadhaar’ ಕ್ಲಿಕ್ ಮಾಡಿ
ಹಂತ 6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ
ಪ್ಯಾನ್ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ, ಇಲ್ಲದಿದ್ರೆ 10,000 ದಂಡ!
ಎಸ್‌ಎಂಎಸ್ ಮೂಲಕ ಲಿಂಕ್ ಮಾಡಿ
ಹಂತ 1: ಎಸ್‌ಎಂಎಸ್ ಅನ್ನು ಪಡೆಯಲು 567678 ಅಥವಾ 56161ಗೆ ಡಯಲ್ ಮಾಡಿ. ಫಾರ್ಮೆಟ್ ಯುಐಡಿಪಿಎಎನ್ (10-ಅಂಕಿಯ PAN ಕಾರ್ಡ್ ಸಂಖ್ಯೆ), 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಸ್ಪೇಸ್ ಆಗಿರಬೇಕು.
ಹಂತ 2: ಪ್ಯಾನ್ ಆಧಾರ್ ಲಿಂಕಿಂಗ್ ಸ್ಟೇಟಸ್ ಬಗ್ಗೆ ನಿಮಗೆ ಎಸ್ಎಂಎಸ್ ಲಭ್ಯವಾಗಲಿದೆ. ಎರಡು ದಾಖಲೆಗಳಲ್ಲಿ ತೆರಿಗೆದಾರರ ಜನನ ದಿನಾಂಕವು ಒಂದೇ ಆಗಿದ್ದರೆ ಮಾತ್ರ ಆಧಾರ್ ಪ್ಯಾನ್ ಅನ್ನು ಲಿಂಕ್ ಮಾಡಬಹುದಾಗಿದೆ.
ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಚೆಕ್ ಮಾಡಿಕೊಳ್ಳಿ
ಹಂತ 1: ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
ಹಂತ 2: ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 5: View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲು ದಂಡವನ್ನು ಹೇಗೆ ಪಾವತಿಸುವುದು?
1. onlineservices.tin.egov-nsdl.com/etaxnew/tdsnontds.jsp ಗೆ ಭೇಟಿ ನೀಡಿ ಮತ್ತು ‘CHALLAN NO./ITNS 280’ ವಿಭಾಗದ ಅಡಿಯಲ್ಲಿ, ‘ಮುಂದುವರಿಯಿರಿ’ ಕ್ಲಿಕ್ ಮಾಡಿ.
2. ಈಗ ನಿಗಮ ತೆರಿಗೆ (ಕಂಪನಿಗಳು) ಅಥವಾ ಆದಾಯ ತೆರಿಗೆ (ಕಂಪನಿಗಳನ್ನು ಹೊರತುಪಡಿಸಿ) ಎಂದು ಅನ್ವಯವಾಗುವ ತೆರಿಗೆಯನ್ನು ಆಯ್ಕೆಮಾಡಿ.
3. ಪಾವತಿಯ ಪ್ರಕಾರ ವಿಭಾಗದ ಅಡಿಯಲ್ಲಿ, ‘ಇತರ ರಸೀದಿಗಳು’ ಮೇಲೆ ಕ್ಲಿಕ್ ಮಾಡಿ ಮತ್ತು ಪಾವತಿಯ ವಿಧಾನವನ್ನು ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್‌ನಂತೆ ಆಯ್ಕೆಮಾಡಿ.
4.ಈಗ ನಿಮ್ಮ ಪ್ಯಾನ್ ನಮೂದಿಸಿ, ಮೌಲ್ಯಮಾಪನ ವರ್ಷವನ್ನು 2023-24 ಎಂದು ಆಯ್ಕೆಮಾಡಿ ಮತ್ತು ನಿಮ್ಮ ಮಾನ್ಯವಾದ ವಿಳಾಸವನ್ನು ನಮೂದಿಸಿ.
5.ಮುಗಿದ ನಂತರ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ‘ಮುಂದುವರಿಸಿ’ ಕ್ಲಿಕ್ ಮಾಡಿ.
6. 4-5 ಕೆಲಸದ ದಿನಗಳ ನಂತರ NSDL (ಈಗ ಪ್ರೊಟೀನ್) ಪೋರ್ಟಲ್‌ನಲ್ಲಿ ಶುಲ್ಕವನ್ನು ಪಾವತಿಸಿದ ನಂತರ ವ್ಯಕ್ತಿಗಳು ಇ-ಫೈಲಿಂಗ್ ಪೋರ್ಟಲ್‌ನಲ್ಲಿ PAN-ಆಧಾರ್ ಲಿಂಕ್ ವಿನಂತಿಯನ್ನು ಸಲ್ಲಿಸಬಹುದು.
ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ಏನಾಗುತ್ತದೆ?
1) ನಿಮ್ಮ ಪ್ಯಾನ್ ನಿಷ್ಕ್ರಿಯವಾಗುತ್ತದೆ
ಮರುಪಾವತಿಗಳು ಮತ್ತು ಅಂತಹ ಮರುಪಾವತಿಗಳ ಮೇಲಿನ ಬಡ್ಡಿಯನ್ನು ನೀಡಲಾಗುವುದಿಲ್ಲ.
3) TDS ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಬೇಕಾಗುತ್ತದೆ.
4) TCS ಅನ್ನು ಹೆಚ್ಚಿನ ದರದಲ್ಲಿ ಸಂಗ್ರಹಿಸಬೇಕಾಗುತ್ತದೆ
English summary
What is the penalty for not linking the PAN with your Aadhar and what happens to your PAN if not linked with Aadhar. Know more
Story first published: Friday, June 30, 2023, 13:49 [IST]