ಪ್ಲೇಆಫ್ಗೆ ಮೂರು ತಂಡಗಳ ನಡುವೆ ಪೈಪೋಟಿ
ಜೈಪುರ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟನ್, ದಬಾಂಗ್ ಡೆಲ್ಲಿ, ಪಾಟ್ನಾ ಪೈರೇಟ್ಸ್, ಗುಜರಾತ್ ಜೈಂಟ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ಗೆ ಪ್ರವೇಶಿಸಿವೆ. ಉಳಿದ ಒಂದು ಸ್ಥಾನಕ್ಕಾಗಿ ಮೂರು ತಂಡಗಳು ರೇಸ್ನಲ್ಲಿವೆ. ಹರಿಯಾಣ ಸ್ಟೀಲರ್ಸ್, ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಹರಿಯಾಣ ತಂಡಕ್ಕೆ ಇನ್ನೂ 4 ಪಂದ್ಯಗಳಿದ್ದರೆ, ಬೆಂಗಳೂರಿಗೆ 2 ಪಂದ್ಯ, ಬೆಂಗಾಲ್ಗೆ 1 ಪಂದ್ಯ ಮಾತ್ರ ಇದೆ. ಹೀಗಾಗಿ ಅಂಕಗಳಲ್ಲೂ ಎರಡು ತಂಡಗಳಿಗಿಂತ ಮುಂದಿರುವ ಹರಿಯಾಣ ಪ್ಲೇ ಆಫ್ಗೇರುವ ಸಾಧ್ಯತೆ ಹೆಚ್ಚಿದೆ.