ಈ ಹಿಂದೆ ರಮೀಜ್ ರಾಜಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬಳಿಕ, ಸೇಥಿ ಪಿಸಿಬಿಯನ್ನು ಮುನ್ನಡೆಸುತ್ತಿದ್ದಾರೆ. ಆದರೆ ಈ ಸ್ಥಾನ ಕಾಯಂ ಅಲ್ಲ. ಅವರ ಆರು ತಿಂಗಳ ಅವಧಿಯಲ್ಲಿ, ಕ್ರಿಕೆಟ್‌ನ ಅರೆಕಾಲಿಕ ನಿರ್ದೇಶಕರಾಗಿ ಮಿಕ್ಕಿ ಆರ್ಥರ್ ಅವರನ್ನು ನೇಮಿಸಿಕೊಳ್ಳುವುದನ್ನು ಮ್ಯಾನೇಜ್‌ಮೆಂಟ್ ಮೇಲ್ವಿಚಾರಣೆ ಮಾಡಿತು. ಸೇಥಿ ಅವರ ಅಧಿಕಾರಾವಧಿಯಲ್ಲಿ ನಡೆದ ಅತ್ಯಂತ ಮಹತ್ವದ ಭಾಗವೆಂದರೆ, ಏಷ್ಯಾಕಪ್‌ನ ಆತಿಥ್ಯ ಮತ್ತು 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಕುರಿತ ಚರ್ಚೆ. ಏಷ್ಯಾಕಪ್ ಅನ್ನು ಪೂರ್ಣ ಪ್ರಮಾಣದಲ್ಲಿ ಆಯೋಜಿಸಲು ಯಶಸ್ವಿಯಾಗುವಲ್ಲಿ ಸೇಥಿ ವಿಫಲರಾದರು. ಆದರೆ, ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಅವಕಾಶವನ್ನು ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.