Features
oi-Sunitha B
ಚಲಿಸುವ ರೈಲಿನಲ್ಲಿ ಗೋಲ್ಗಪ್ಪ: ಪಾನಿಪುರಿ ಮಾರಾಟ ಮಾಡುವ ಈ ಮಾರಾಟಗಾರನ ಗಮನಾರ್ಹ ಸಾಮರ್ಥ್ಯ ಥಂಬ್ಸ್ ಅಪ್ ಪಡೆಯುತ್ತದೆ
ಗೋಲ್ಗಪ್ಪಾ, ಪಾನಿಪುರಿ ಅಥವಾ ಪುಚ್ಕಾ ಭಾರತದ ಅತ್ಯಂತ ಪ್ರಿಯವಾದ ಬೀದಿ ಆಹಾರ. ಇದನ್ನು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಶಾಪಿಂಗ್‌ಗಾಗಿ ಮಾರುಕಟ್ಟೆಗಳಿಗೆ ಭೇಟಿ ನೀಡುವಾಗ, ರಸ್ತೆಗಳಲ್ಲಿ ನಡೆಯುವಾಗ ಅಥವಾ ಕೆಲಸ ಮತ್ತು ಇತರ ಅಗತ್ಯಗಳಿಗಾಗಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುವಾಗ ನೀವು ಪಾನಿಪುರಿ ಮಾರಾಟ ಮಾಡುವುದನ್ನು ನೋಡಿರುತ್ತೀರಿ.
ಆದರೆ ಚಲಿಸುತ್ತಿರುವ ರೈಲಿನಲ್ಲಿ ಈ ಸವಿಯನ್ನು ಸವಿಯುವುದನ್ನು ನೀವು ಎಂದಾದರೂ ಊಹಿಸಿದ್ದೀರಾ? ಇಲ್ಲಾ ತಾನೆ. ಆದರೆ ವೈರಲ್ ವಿಡಿಯೋವೊಂದರಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಪಾನಿಪುರಿ ಮಾರಾಟ ಮಾಡುವುದು ಕಂಡುಬಂದಿದೆ. ಚಲಿಸುವ ರೈಲಿನಲ್ಲಿ ಪಾನಿಪುರಿ ಮಾರಾಟಗಾರ ಪ್ರಯಾಣಿಕರಿಗೆ ಪಾನಿಪುರಿ ಒದಗಿಸುವ ಮೂಲಕ ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಆನಂದಗೊಳಿಸಿದ್ದಾನೆ.
When you put your business mind on the right track pic.twitter.com/Wg3sQmEgpQ
— Sagar (@sagarcasm) June 21, 2023
ತಿಂಡಿ ಮತ್ತು ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡಲು ಮಾರಾಟಗಾರರು ರೈಲುಗಳನ್ನು ಹತ್ತುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಚಲಿಸುವ ಲೋಕಲ್ ರೈಲಿನಲ್ಲಿ ಗೋಲ್ಗಪ್ಪ ತಿನ್ನಲು ಸಿಗುತ್ತದೆ ಅಂದರೆ ಅದು ಇದೇ ಮೊದಲು.
ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುವ ಜನರು ಉತ್ಸಾಹದಿಂದ ಪಾನಿಪುರಿಯನ್ನು ತಿಂದಿರುವುದು ಕಂಡುಬಂದಿದೆ. ವೈರಲ್ ವಿಡಿಯೋದಲ್ಲಿ ರೈಲು ವೇಗವಾಗಿ ಚಲಿಸುತ್ತಿದೆ. ರೈಲಿನಲ್ಲಿ ಗದ್ದಲವನ್ನು ಸಹ ಕಾಣಬಹುದು. ಅದರ ನಡುವೆ ಮಾರಾಟಗಾರನು ಕಂಪಾರ್ಟ್‌ಮೆಂಟ್‌ನಲ್ಲಿ ನಿಂತು ಪಾನಿಪುರಿಯನ್ನು ಮಾರಾಟ ಮಾಡುತ್ತಾನೆ. ಪ್ರಯಾಣಿಕರು ಗೋಲ್ಗಪ್ಪಾದ ರುಚಿಯನ್ನು ಸವಿಯುತ್ತಿದ್ದಾರೆ ಎಂಬುದನ್ನು ವೀಡಿಯೊ ತೋರಿಸುತ್ತದೆ.
ಅದೇ ರೈಲಿನಲ್ಲಿದ್ದ ಯಾರೋ ಒಬ್ಬರು ವೀಡಿಯೊವನ್ನು ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಜನರನ್ನು ರಂಜಿಸಿದೆ. ಈ ವೀಡಿಯೊದ ಸ್ಥಳವನ್ನು ಕಂಡುಹಿಡಿಯಲಾಗಲಿಲ್ಲ. ಆದರೆ ಕಾಮೆಂಟ್ ವಿಭಾಗವನ್ನು ನೋಡಿದಾಗ, ಸ್ಥಳೀಯ ರೈಲಿನ ದೃಶ್ಯಗಳು ಮುಂಬೈ ಅಥವಾ ಕೋಲ್ಕತ್ತಾದಿಂದ ಇರಬಹುದೆಂದು ತೋರುತ್ತದೆ.
ಈ ವೀಡಿಯೊ ನೆಟ್ಟಿಗರ ಗಮನವನ್ನು ಸೆಳೆದಿದೆ. ಹಲವಾರು ಜನ ಮಾರಾಟಗಾರನನ್ನು ಹೊಗಳಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಮಾರಾಟಗಾರನ ಗಮನಾರ್ಹ ಸಾಮರ್ಥ್ಯವನ್ನು ಹೊಗಳಿದ್ದಾರೆ. ರೈಲು ಪ್ರಯಾಣವನ್ನು ಅದ್ಭುತ ಪಾಕಶಾಲೆಯ ಅನುಭವವನ್ನಾಗಿ ಮಾಡಿದ ಆತ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಸದ್ಯ ಮುಂಗಾರು ಮಳೆ ಆರಂಭವಾಗಿದೆ. ಎಲ್ಲೆಡೆ ಕಾಯಿಲೆಗಳು ಹರಡುವ ಬಗ್ಗೆ ಎಚ್ಚರ ವಹಿಸಲಾಗುತ್ತಿದೆ. ಜೊತೆಗೆ ತಳ್ಳುಗಾಡಿಗಳಲ್ಲಿ ಮಾರುವ ಪಾನಿಪುರಿ ತಿಂದರೆ ರೋಗರುಜಿನಗಳಿಗೆ ತುತ್ತಾಗುವ ಅಪಾಯವಿದೆ ಎಂದು ತೆಲಂಗಾಣ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಪಾನಿ ಪುರಿ ವ್ಯಾಪಾರಿಗಳು ಸಹ ಎಚ್ಚರಿಕೆ ವಹಿಸಬೇಕು. ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ತೆಲಂಗಾಣ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸತತವಾಗಿ ಮೂರ್ನಾಲ್ಕು ದಿನ ಜ್ವರ ಬಂದರೆ ವೈದ್ಯರನ್ನು ಸಂಪರ್ಕಿಸಬೇಕೆಂದು ವೈದ್ಯರು ಎಚ್ಚರಿಕೆ ನೀಡಲಾಗಿದೆ.
ಮತ್ತೊಂದೆಡೆ ಪಾನಿಪುರಿ ಮಾಡುವ ವಿಧಾನದ ವಿಡಿಯೋಗಳು ಕೂಡ ವೈರಲ್ ಆಗುತ್ತಿರುತ್ತವೆ. ಕಲುಷಿತ ನೀರು ಬಳಕೆ ಮಾಡಿ ಪಾನಿಪುರಿ ತಯಾರಿಸುವ ವಿಡಿಯೋಗಳು ಈವರೆಗೆ ಹೆಚ್ಚು ವೈರಲ್ ಆಗಿವೆ. ಇದೆಲ್ಲದರ ನಡುವೆ ದೇಶದ ಹಲವೆಡೆ ಪಾನಿಪುರಿ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನ ಈಗಲೂ ಪಾನಿಪುರಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಏನೇ ಆಗಲಿ ರೈಲಿನಲ್ಲಿ ಪಾನಿಪೂರಿ ಮಾರಾಟ ಮಾಡುವುದು ಪ್ರಯಾಣಿಕರಿಗೆ ಖುಷಿ ನೀಡಿದ್ದು ಸುಳ್ಳಲ್ಲ.
English summary
Golgappa seller sell pani puri in moving train. this video goes viral.
Story first published: Monday, June 26, 2023, 17:31 [IST]