ಪಾಕಿಸ್ತಾನ ಕೈಯಲ್ಲಿ ಕಾಸು ಇಲ್ಲ: ಕರಾಚಿ ಬಂದರು ಮಾರಿ ಜೀವನ ನಡೆಸಬೇಕು ಭಾರತದ ಶತ್ರು? | Pakistan to hand over Karachi Port to UAE after strong Economic crisis

International

oi-Malathesha M

|

Google Oneindia Kannada News

ಕರಾಚಿ: ಭಯೋತ್ಪಾದನೆ, ಹಿಂಸಾಚಾರ, ಆರ್ಥಿಕ ಸಂಕಷ್ಟ ಹೀಗೆ ಪಾಕಿಸ್ತಾನ ನರಳುತ್ತಿದೆ. ಈ ಕಾರಣಕ್ಕೆ ಪಾಕಿಸ್ತಾನದ ಆರ್ಥಿಕತೆ ಕೂಡ ಬೀದಿಗೆ ಬಿದ್ದಿದೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಪಾಕಿಸ್ತಾನ ಜನರಿಗೆ ಆಘಾತ ಎದುರಾಗಿದೆ. ಕೈಯಲ್ಲಿ ಕಾಸೇ ಇಲ್ಲ ಅಂತಾ ಪಾಕಿಸ್ತಾನದ ಸರ್ಕಾರ ಕರಾಚಿ ಬಂದರು ಪ್ರದೇಶವನ್ನೇ ಈಗ ಮಾರಲು ಮುಂದಾಗಿದೆ!

ಹೌದು ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಾ ಆರ್ಥಿಕವಾಗಿ ಅಕ್ಷರಶಃ ಬೀದಿಗೆ ಬಿದ್ದಿದೆ ಪಾಕ್. ಹೀಗಾಗಿ ಪಾಕಿಸ್ತಾನ ತನ್ನ ಕರಾಚಿ ಬಂದರನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಅಂದರೆ ಯುಎಇಗೆ ಮಾರಲು ಮುಂದಾಗಿದೆ. ಈ ಸಂಬಂಧ ವಾಣಿಜ್ಯ ಒಪ್ಪಂದದ ಮಾತುಕತೆಗಾಗಿ ಅಂತರ್‌ ಸರ್ಕಾರಿ ವಾಣಿಜ್ಯ ವಹಿವಾಟುಗಳ ಕ್ಯಾಬಿನೆಟ್ ಸಮಿತಿ ರಚಿಸಿದೆ ಎನ್ನಲಾಗಿದೆ. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಪಾಕಿಸ್ತಾನದಲ್ಲಿ ನಿರ್ಮಾಣವಾಗಿದೆ. ಪಾಕಿಸ್ತಾನ ಸರ್ಕಾರ ಮಾಡಿದ ಎಡವಟ್ಟಿಗೆ ಪಾಕಿಸ್ತಾನ ಜನ ಬೀದಿಗೆ ಬಿದ್ದಿದ್ದಾರೆ. ಈ ವೇಳೆ ಅನಿವಾರ್ಯವಾಗಿ ಬಂದರು ಮಾರುತ್ತಿದೆ ಪಾಕ್.

Pakistan to hand over Karachi Port to UAE after strong Economic crisis

ಪಾಕಿಸ್ತಾನದ ಪರಿಸ್ಥಿತಿ ಕೈಮೀರಿ ಹೋಗಿದೆ!

ಕೈಗೆ ಸಿಗದ ಹಣದುಬ್ಬರ ಅದರ ಜೊತೆಗೆ ಹಣಕಾಸಿನ ಅಸಮತೋಲನ. ಇಷ್ಟು ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡು ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನ ಪಾಕಿಸ್ತಾನ ಮಾರಾಟ ಮಾಡಿದೆ. ಈಗ ಕರಾಚಿ ಪೋರ್ಟ್ ಟರ್ಮಿನಲ್ಸ್ ಅನ್ನ ಯುಎಇಗೆ ಹಸ್ತಾಂತರಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಇನ್ನೂ ತುರ್ತು ನಿಧಿ ಸಂಗ್ರಹಿಸಲು ಕಳೆದ ವರ್ಷ ಹೊಸ ಕಾನೂನು ಜಾರಿಗೆ ತಂದಿದ್ದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್‌ ಜೊತೆಗಿನ ಒಪ್ಪಂದದ ಅವಧಿಯು ಮುಕ್ತಾಯವಾಗಿರುವ ಕಾರಣ, ಪಾಕ್‌ಗೆ ಇದೀಗ ತುರ್ತಾಗಿ ಹೆಚ್ಚುವರಿ ಹಣದ ಅವಶ್ಯಕತೆ ಇದೆ. ಈಗಾಗಲೇ ಚೀನಾ ಕೂಡ ಸಾಕಷ್ಟು ಸಹಾಯ ಮಾಡಿದೆ, ಆದ್ರೂ ಕರಾಚಿ ಬಂದರು ಮಾರುವ ಸ್ಥಿತಿ ಬಂದಿದೆ.

ಪಾಕಿಸ್ತಾನ ನೆರವಿಗೆ ನಿಂತ ಚೀನಾ

ಆರ್ಥಿಕ ಸಂಕಷ್ಟದಲ್ಲಿರುವ ಪಾಕ್‌ಗೆ ಚೀನಾ ಕಳೆದ ವಾರ ನೆರವಿನ ಹಸ್ತ ಚಾಚಿತ್ತು. ನಗದಿನ ಕೊರತೆ ನಿವಾರಿಸಲು ಚೀನಾ 1 ಬಿಲಿಯನ್ ಡಾಲರ್‌ ಹಣ ಸಾಲ ಕೊಟ್ಟಿತ್ತು. ಈ ವಿಚಾರ ಸ್ವತಃ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮೂಲಕ ಕನ್ಫರ್ಮ್ ಆಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಚೀನಾ ಸಹಾಯವು ಭರವಸೆ ನೀಡಿದೆ. ಇತ್ತೀಚೆಗೆ ಚೀನಾಕ್ಕೆ ಮರುಪಾವತಿಸಿದ್ದ 1.30 ಬಿಲಿಯನ್‌ ಡಾಲರ್‌ ಹಣವನ್ನ ಚೀನಾದಿಂದ ಮರಳಿ ಪಡೆಯಲಾಗಿತ್ತು. ಆದರೂ ಪರಿಸ್ಥಿತಿ ಸರಿ ಹೋಗುತ್ತಿಲ್ಲ, ಇದೇ ಕಾರಣಕ್ಕೆ ಬಂದರು ಮಾರಲು ಮುಂದಾಗಿದೆ ಪಾಕ್.

ಎಲ್ಲೆಲ್ಲಿ ಸಾಲ ಮಾಡಿದೆ ಪಾಕಿಸ್ತಾನ?

ಅಂದಹಾಗೆ ಹಣಕಾಸಿನ ಕೊರತೆ, ಐಎಂಎಫ್‌ ಜೊತೆಗಿನ ಒಪ್ಪಂದ ವಿಳಂಬದ ಪರಿಣಾಮವಾಗಿ ಪಾಕಿಸ್ತಾನ ಆರ್ಥಿಕತೆ ಸಂಕಷ್ಟ ಎದುರಿಸಿದೆ. ಸುಸ್ತಿಯಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನಕ್ಕೆ ಐಎಂಎಫ್‌ ಬಿಡುಗಡೆ ಮಾಡುವ ಸಾಲ ನಿರ್ಣಾಯಕ. ಹೀಗಾಗಿ ಪರದಾಡುತ್ತಿದ್ದ ಪಾಕ್ ಸರ್ಕಾರಕ್ಕೆ ಚೀನಾ ರಿಲೀಫ್ ಕೊಟ್ಟಿತ್ತು. ಚೀನಾ ಕೊಟ್ಟ ₹7500 ಕೋಟಿ ಸಾಲ ದೊಡ್ಡ ಸಹಾಯ ಮಾಡಲಿದೆ ಎಂದು ನಂಬಲಾಗಿತ್ತು. ಆದರೂ ಪಾಕಿಸ್ತಾನದ ಆರ್ಥಿಕ ಸಂಕಷ್ಟವು ಬಗೆಹರಿದಿಲ್ಲ, ಈ ಕಾರಣಕ್ಕೆ ಕರಾಚಿ ಬಂದರನ್ನು ಮಾರಿ ಒಂದಷ್ಟು ಹಣ ಮಾಡಿಕೊಳ್ಳಲು ಪ್ಲ್ಯಾನ್ ಮಾಡಲಾಗಿದೆ.

ಇದಿಷ್ಟೇ ಅಲ್ಲ, ಪಾಕಿಸ್ತಾನ ಹಲವು ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಅದರಲ್ಲೂ ಪಾಕಿಸ್ತಾನದ ರಾಜಕಾರಣಿಗಳ ವಿರುದ್ಧ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಇದೆ. ಈ ಆರೋಪಗಳ ನಡುವೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಕೂಡ ಬೀದಿಗೆ ಬೀಳುತ್ತಿದೆ. ಪಾಕ್ ಪ್ರಜೆಗಳು ಕೂಡ ಈ ಅವ್ಯವಸ್ಥೆ ವಿರುದ್ಧ ತಿರುಗಿಬಿದ್ದಿದ್ದಾರೆ. ಆದರೆ ಏನೂ ಮಾಡಲಾಗದ ಪರಿಸ್ಥಿತಿ ಅಲ್ಲಿದೆ. ಇನ್ನು ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪದೇ ಪದೆ ಟಾರ್ಗೆಟ್ ಆಗುತ್ತಿರುವುದು ಹಿಂಸಾಚಾರಕ್ಕೆ ನಾಂದಿ ಹಾಡುತ್ತಿದೆ.

English summary

Pakistan to hand over Karachi Port to UAE after strong Economic crisis.

Story first published: Friday, June 23, 2023, 17:44 [IST]

Source link