ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ವೇಳೆ ಭುಗಿಲೆದ್ದ ಹಿಂಸಾಚಾರ: ಐವರು ಟಿಎಂಸಿ ಕಾರ್ಯಕರ್ತರು ಸಾವು | Deadly Violence Mars Bengal Panchayat Polls: 5 Killed, Including TMC Workers

India

oi-Naveen Kumar N

|

Google Oneindia Kannada News

ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇಬ್ಬರು ಟಿಎಂಸಿ ಕಾರ್ಯಕರ್ತರು ಸೇರಿ ಐವರು ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಮುರ್ಷಿದಾಬಾದ್ ಮತ್ತು ಕೂಚ್‌ಬೆಹರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಟಿಎಂಸಿ ಅಭ್ಯರ್ಥಿಗಳು ಸಾವನ್ನಪ್ಪಿದ್ದರೆ, ಕಳೆದ ರಾತ್ರಿ ಮುರ್ಷಿದಾಬಾದ್‌ನಲ್ಲಿ ಇಬ್ಬರು ಟಿಎಂಸಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ.

ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯು ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಇಂಡಿಯನ್ ಸೆಕ್ಯುಲರ್ ಫ್ರಂಟ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಉತ್ತರ 24 ಪರಗಣಗಳು ಮತ್ತು ನಾಡಿಯಾಗೆ ಪಂಚಾಯತ್ ಚುನಾವಣೆಯ ಮೇಲ್ವಿಚಾರಣೆಗೆ ಭೇಟಿ ನೀಡಲಿದ್ದಾರೆ. 2018 ರಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಂಚಾಯತ್ ಚುನಾವಣೆಗಳಲ್ಲಿ 34 ಪ್ರತಿಶತದಷ್ಟು ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ.

Deadly Violence Mars Bengal Panchayat Polls: 5 Killed, Including TMC Workers

ಕೂಚ್‌ಬೆಹಾರ್‌ನ ದೀನ್‌ಹಟಾದಲ್ಲಿನ ಮತಗಟ್ಟೆಯೊಳಗೆ ಹಿಂಸಾಚಾರ ಸ್ಫೋಟಗೊಂಡಿತು, ಅಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬ ಮತಗಟ್ಟೆ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದು. ಮತಗಟ್ಟೆಯನ್ನು ಧ್ವಂಸಗೊಳಿಸಿದ್ದಾರೆ. ಮತದಾನ ಸ್ಥಗಿತಗೊಳಿಸಲಾಗಿದೆ. ಹಿಂಸಾಚಾರ ನಡೆದಾಗ ಯಾವುದೇ ಪೊಲೀಸ್ ಅಧಿಕಾರಿಗಳು ಅಥವಾ ಕೇಂದ್ರ ಪಡೆಗಳು ಇರಲಿಲ್ಲ ಎಂದು ವರದಿಯಾಗಿದೆ.

ಗುಂಡು ಹಾರಿಸಿದ ಟಿಎಂಸಿ ಕಾರ್ಯಕರ್ತ

ಮತದಾನದ ನಡುವೆ ಮುರ್ಷಿದಾಬಾದ್‌ನ ಮತಗಟ್ಟೆ ಸಂಖ್ಯೆ 16 ರಲ್ಲಿ ತೃಣಮೂಲ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಕಾರ್ಯಕರ್ತನನ್ನು ತಕ್ಷಣವೇ ಮುರ್ಷಿದಾಬಾದ್ ಜಿಲ್ಲೆಯ ಸಂಸರ್‌ಸಂಜ್‌ನಲ್ಲಿರುವ ಅನುಪ್‌ನಗರ ಬ್ಲಾಕ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು.

ಸ್ಥಳೀಯ ಮೂಲಗಳ ಪ್ರಕಾರ ಯುವಕನ ಹೆಸರು ಸನೌಲ್ ಶೇಖ್. ಘಟನೆಯ ಬಗ್ಗೆ ಮಾಹಿತಿ ಪಡೆದ ಸಂಸರ್‌ಗಂಜ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ, ಯಾಕೆ ಗುಂಡು ಹಾರಿಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ರಾಯಗಂಜ್‌ನಲ್ಲಿ ಪ್ರತಿಪಕ್ಷ ಬಿಜೆಪಿ ಸಿಆರ್‌ಪಿಎಫ್ ನಿಯೋಜನೆಗೆ ಒತ್ತಾಯಿಸಿದ್ದರಿಂದ ಮತದಾನವನ್ನು ಸ್ಥಗಿತಗೊಳಿಸಲಾಗಿದೆ. ಘರ್ಷಣೆಯಲ್ಲಿ 5 ಜನರು, ನಾಲ್ವರು ಟಿಎಂಸಿ ಕಾರ್ಯಕರ್ತರು ಮತ್ತು ಒಬ್ಬ ಬಿಜೆಪಿ ಪೋಲಿಂಗ್ ಏಜೆಂಟ್ ಸಾವನ್ನಪ್ಪಿದ್ದಾರೆ. ಶನಿವಾರ ಮುಂಜಾನೆ ಮಾಣಿಕ್‌ಚಾಕ್‌ನಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಕೂಚ್ ಬೆಹಾರ್‌ನಲ್ಲಿ ಬಿಎಸ್‌ಎಫ್ ಸಿಬ್ಬಂದಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ ಟಿಎಂಸಿ ಟ್ವೀಟ್‌ ಮಾಡಿದ್ದು, “ಬಿಎಸ್‌ಎಫ್ ಸಿಬ್ಬಂದಿ ಕೂಚ್ ಬೆಹಾರ್‌ನ ಗಿಟಾಲ್ದಾಹಾ-II ನಲ್ಲಿ ಮತದಾರರಿಗೆ ಬೆದರಿಕೆ ಹಾಕಿದರು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸಲು ಪ್ರಯತ್ನಿಸಿದರು. ಪಂಚಾಯತ್ ಚುನಾವಣೆಗಳಲ್ಲಿ ಬಿಎಸ್‌ಎಫ್‌ನ ಪಾಲ್ಗೊಳ್ಳುವಿಕೆ ಅಗತ್ಯವಿಲ್ಲ ಆದರೂ ಅವರು ನಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಪಡೆಗಳ ಒಬ್ಬ ಅಧಿಕಾರಿಯೂ ಸ್ಥಳದಲ್ಲಿ ಕಂಡುಬಂದಿಲ್ಲ.” ಎಂದು ಆರೋಪಿಸಿದೆ.

English summary

Violence erupted during the Bengal panchayat polls, resulting in the death of five individuals, including four TMC workers. In one incident, a Trinamool worker was shot at booth number 16 in Murshidabad and promptly taken to a local health center for treatment.

Story first published: Saturday, July 8, 2023, 10:26 [IST]

Source link