International
oi-Malathesha M
ಮಾಸ್ಕೋ: ನಿನ್ನೆ ಇಡೀ ಜಗತ್ತು ಉಸಿರು ಬಿಗಿಹಿಡಿದು ಕಾಯುತ್ತಿತ್ತು. ಯಾಕಂದ್ರೆ ಒಂದ್ಕಡೆ ರಷ್ಯಾ ರಾಜಧಾನಿ ಕಡೆಗೆ ಖಾಸಗಿ ಸೇನೆ ನುಗ್ಗಿ ಬರುತ್ತಿತ್ತು. ಆದರೆ ಇನ್ನೊಂದ್ಕಡೆ ಪರಿಸ್ಥಿತಿ ನಿಯಂತ್ರಿಸಲು ಆಗದೆ ರಷ್ಯಾ ಅಧ್ಯಕ್ಷ ಪುಟಿನ್ ರಹಸ್ಯ ಜಾಗಕ್ಕೆ ಓಡಿ ಹೋಗಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಇದರ ಜೊತೆ ರಷ್ಯಾ ನಿನ್ನೆಯೇ ಪರಮಾಣು ಬಾಂಬ್ ಹಾಕಲಿದೆ ಅನ್ನೋ ವದಂತಿಗಳು ಭಯ ಹುಟ್ಟಿಸಿದ್ದವು!
ಹೌದು, ರಷ್ಯಾ ಆರೋಪ ಮಾಡುತ್ತಿರುವ ಪ್ರಕಾರ ನಿನ್ನೆ ನಡೆದ ಖಾಸಗಿ ಮಿಲಿಟರಿ ದಂಗೆ ಹಿಂದೆ ಅಮೆರಿಕದ ಕೈವಾಡ ಇದೆ. ಹಾಗೇ ತನ್ನ ಶತ್ರು ರಾಷ್ಟ್ರಗಳ ಕುಮ್ಮಕ್ಕಿನಿಂದ ದಾಳಿಗೆ ಖಾಸಗಿ ಸೇನೆ ಮುಂದಾಗಿದೆ ಎಂದಿತ್ತು. ಇನ್ನೇನು ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ದಿಢೀರ್ ಖಾಸಗಿ ಸೇನೆ ರಷ್ಯಾ ಬಿಟ್ಟು ಮತ್ತೆ ಉಕ್ರೇನ್ ವಿರುದ್ಧ ಯುದ್ಧಕ್ಕೆ ಹೊರಟಿದೆ. ಆದರೆ ಹೀಗೆ ಖಾಸಗಿ ಸೇನೆ ಭಯಪಟ್ಟು ಹೊರಗೆ ಹೋಗಲು ಪ್ರಮುಖವಾದ ಮತ್ತೊಂದು ಕಾರಣ ಕೂಡ ಚರ್ಚೆಯಾಗುತ್ತಿದೆ. ಆ ಕಾರಣ ಅದೆಷ್ಟು ಭಯಾನಕ ಅಂದರೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಮತ್ತೊಂದು ಭೀಕರ ಪರಮಾಣು ಯುದ್ಧಕ್ಕೆ ಜಗತ್ತು ಸಜ್ಜಾಗಿ ನಿಲ್ಲಬೇಕಿದೆ (Russia Ukraine War).
ನ್ಯೂಕ್ಲಿಯರ್ ಅಸ್ತ್ರ ಹೊರತೆಗೆದಿದ್ದ ರಷ್ಯಾ?
ಈಗಾಗಲೇ ರಷ್ಯಾ ತನ್ನ ಪರಮಾಣು ಅಸ್ತ್ರಗಳ ಪೈಕಿ ಹಲವು ಮಿಸೈಲ್‌ಗಳನ್ನ ಬೆಲಾರಸ್‌ನ ಗಡಿಗೆ ರವಾನಿಸಿದೆ. ಇದರ ಜೊತೆಗೆ ಮತ್ತೊಂದು ಭೀಕರ ಯುದ್ಧಕ್ಕೆ ರಷ್ಯಾ ಸಜ್ಜಾಗಿತ್ತೆಂದು ವದಂತಿಗಳು ಹರಡಿವೆ. ಅಕಸ್ಮಾತ್ ರಷ್ಯಾದ ಖಾಸಗಿ ಸೇನೆ ರಷ್ಯಾ ರಾಜಧಾನಿ ಮೇಲೆ ದಾಳಿ ಮಾಡಿದ್ದೇ ಆದರೆ, ಮುಂದಿನ ಪರಿಣಾಮ ಕೂಡ ಅಷ್ಟೇ ಭೀಕರವಾಗಿರುತ್ತೆ ಎಂಬ ಮಾಹಿತಿ ಹೊರಬಿದ್ದಿತ್ತು. ಅಲ್ಲದೆ ಅನಿವಾರ್ಯ ಪರಿಸ್ಥಿತಿ ಬಂದರೆ ಪರಮಾಣು ಅಸ್ತ್ರಗಳ ಬಳಕೆಗೂ ರಷ್ಯಾ ಸಿದ್ಧತೆ ನಡೆಸಿದೆ ಅನ್ನೋ ಮಾತು ಬೆಚ್ಚಿಬೀಳಿಸಿತ್ತು. ಇಷ್ಟೆಲ್ಲದರ ನಡುವೆ ರಷ್ಯಾದ ಖಾಸಗಿ ಸೇನೆ ಕೂಡ ರಕ್ತಪಾತ ಬೇಡ ಎಂದು ವಾಪಸ್ ಹೋಗುತ್ತಿರುವುದಾಗಿ ತಿಳಿಸಿದೆ. ಈ ಮಾತು ಕೇಳುತ್ತಿದ್ದರೆ ಎಲ್ಲೋ ಏನೋ ಎಡವಟ್ಟು ಆಗಿರೋದು ಪಕ್ಕಾ ಆಗಿದೆ.
ಭಾರಿ ಪ್ರಮಾಣದಲ್ಲಿ ದುಡ್ಡು ಕೊಟ್ಟ ಪುಟಿನ್?
ಇನ್ನೊಂದು ಲೆಕ್ಕಾಚಾರ ಪ್ರಕಾರ ರಷ್ಯಾ ಖಾಸಗಿ ಸೇನೆ ರಾಜಧಾನಿ ಮಾಸ್ಕೋ ಕಡೆ ಬರದೇ ಇರಲು ಭಾರಿ ಪ್ರಮಾಣದ ಹಣ ಪಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. ಖಾಸಗಿ ಸೇನೆ ಕೇಂದ್ರ ಕಚೇರಿ ಇರುವ ಸೇಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ನಿನ್ನೆ ನೂರಾರು ಮಿಲಿಯನ್ ಡಾಲರ್ ಮೌಲ್ಯದ ನೋಟುಗಳು ಪತ್ತೆಯಾಗಿದ್ದವು. ವಾಹನದಲ್ಲಿ ತಂದಿದ್ದ ಈ ದುಡ್ಡನ್ನು ಖಾಸಗಿ ಸೇನೆಗೆ ತಲುಪಿಸಲಾಗಿದೆ ಎನ್ನಲಾಗಿತ್ತು. ಈ ಮಾಹಿತಿ ತಿಳಿಸುವಂತೆ ದಂಗೆ ನಿಲ್ಲಲು ದುಡ್ಡಿನ ವ್ಯವಹಾರ ಕೂಡ ಕಾರಣ ಎನ್ನಲಾಗಿದೆ. ಆದ್ರೆ ಆರೋಪಕ್ಕೆ ಯಾವುದೇ ಪುರಾವೆ ಲಭ್ಯವಾಗಿಲ್ಲ.
ಎಲ್ಲಿ ಹೊರಟಿದೆ ರಷ್ಯಾ ಖಾಸಗಿ ಸೇನೆ?
ಅಂದಹಾಗೆ ರಷ್ಯಾ ಖಾಸಗಿ ಸೇನೆ ಬಹುತೇಕ ಎಲ್ಲಾ ಪ್ರದೇಶಗಳನ್ನೂ ತನ್ನ ವಶಕ್ಕೆ ಪಡೆದು ಭಯ ಹುಟ್ಟಿಸಿತ್ತು. ರಷ್ಯಾ ರಾಜಧಾನಿ ಮಾಸ್ಕೋ ಕೂಡ ಖಾಸಗಿ ಸೇನೆ ವಶಕ್ಕೆ ಹೋಗುವ ಎಲ್ಲಾ ಸಾಧ್ಯತೆ ದಟ್ಟವಾಗಿತ್ತು. ಪರಿಸ್ಥಿತಿ ಹೀಗಿದ್ದಾಗ ಬೆಲಾರಸ್ ಅಧ್ಯಕ್ಷ ಖುದ್ದು ಮುಂದೆ ಬಂದು ಪರಿಸ್ಥಿತಿ ತಣ್ಣಗಾಗಿಸುವ ಮಾತು ಕೊಟ್ಟಿದ್ದ. ಹೀಗೆ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಜೊತೆ ಮಾತುಕತೆ ನಡೆಸಿದ್ದ. ರಷ್ಯಾ ಸೇನೆಯಿಂದ ಜೀವ ಭಯದಲ್ಲಿ ನಲುಗಿದ್ದ ಯೆವ್ಗೆನಿ ಪ್ರಿಗೊಝಿನ್‌ಗೆ ಧೈರ್ಯ ತುಂಬಿದ್ದ. ಕೊನೆಗೆ ಬೇಡಿಕೆ ಮುಂದಿಟ್ಟು, ಆ ಬೇಡಿಕೆಗೆ ರಷ್ಯಾ ಒಪ್ಪಿದ ನಂತರ ಖಾಸಗಿ ಸೇನೆ ಮುಖ್ಯಸ್ಥ ತನ್ನ ಸೈನಿಕರನ್ನೆಲ್ಲಾ ವಾಪಸ್ ಕರೆದಿದ್ದಾನೆ. ಮಾಸ್ಕೋದಿಂದ 200 ಕಿ.ಮೀ. ದೂರದಿಂದಲೇ ತನ್ನ ಖಾಸಗಿ ಸೇನೆ ವಾಪಸ್ ಕರೆಸಿಕೊಂಡಿದ್ದಾನೆ.
ಸೇನಾ ದಂಗೆ ಶುರುವಾಗಿದ್ದು ಏಕೆ?
ವ್ಯಾಗ್ನರ್ ಗುಂಪು ಅಥವಾ ರಷ್ಯಾ ಖಾಸಗಿ ಸೈನಿಕ ಪಡೆ ರಷ್ಯಾದ ಸರ್ಕಾರಿ ಸೇನಾ ಪಡೆಯಷ್ಟೇ ಬಲವಾಗಿದೆ. ಪುಟಿನ್‌ರ ಅಧಿಕಾರ ಅವಧಿಯಲ್ಲಿ ಈ ಖಾಸಗಿ ಸೇನೆ ಸ್ಥಾಪನೆ ಆಗಿದ್ದು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆಗೇ ಇರುವ ಈ ವ್ಯಕ್ತಿಯೇ ಖಾಸಗಿ ಸೇನೆ ಮುಖ್ಯಸ್ಥ. 2014ರಲ್ಲಿ ಪುಟಿನ್ ಅನುಮತಿ ಪಡೆದು ರಷ್ಯಾದಲ್ಲಿ ಖಾಸಗಿ ಸೇನೆ ಸ್ಥಾಪನೆ ಮಾಡಿದ್ದ. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧ ಯುದ್ಧದ ವಿಚಾರದಲ್ಲಿ ಪ್ರಿಗೊಝಿನ್ ಮತ್ತು ರಷ್ಯಾ ರಕ್ಷಣಾ ಸಚಿವನ ನಡುವೆ ಫೈಟ್ ಶುರುವಾಗಿತ್ತು. ಉಕ್ರೇನ್‌ನ ಯುದ್ಧದಲ್ಲಿ ತನ್ನ ಖಾಸಗಿ ಸೇನೆ ಸೈನಿಕರು ಸಾಯುತ್ತಿದ್ದಿದ್ದು ಯೆವ್ಗೆನಿ ಪ್ರಿಗೊಝಿನ್ ಪಿತ್ತ ನೆತ್ತಿಗೇರಿಸಿತ್ತು. ಹಾಗೇ ಉಕ್ರೇನ್ ವಿರುದ್ಧ ಹೋರಾಡಲು ಖಾಸಗಿ ಸೈನಿಕರಿಗೆ ಸರಿಯಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಲಾಗಿತ್ತು. ಹೀಗಾಗಿ ದಂಗೆ ಶುರುವಾಗಿತ್ತು ಎನ್ನಲಾಗಿದೆ.
English summary
Fear about Nuclear war after the Wagner group coup in Russia.
Story first published: Sunday, June 25, 2023, 16:44 [IST]