Tv
oi-Narayana M
By ಪ್ರಿಯಾ ದೊರೆ
|
ಸಾಮಾನ್ಯವಾಗಿ
ಪರಭಾಷೆಯ
ಧಾರಾವಾಹಿಗಳು
ಕನ್ನಡಕ್ಕೆ
ಡಬ್
ಆಗುವುದು,
ರಿಮೇಕ್
ಮಾಡುವುದು
ಸರ್ವೇ
ಸಾಮಾನ್ಯವಾಗಿಬಿಟ್ಟಿದೆ.
ಅದರಲ್ಲೂ
ಹೆಚ್ಚಾಗಿ
ಮರಾಠಿ
ಭಾಷೆಯ
ಧಾರಾವಾಹಿಗಳು
ಕನ್ನಡಕ್ಕೆ
ರಿಮೇಕ್
ಆಗುತ್ತಲೇ
ಇರುತ್ತವೆ.
ಕಳೆದ
ಎರಡು
ವರ್ಷಗಳಿಂದ
ತೆಲುಗು
ಧಾರಾವಾಹಿಗಳು
ಕನ್ನಡಕ್ಕೆ
ಡಬ್
ಆಗುತ್ತಿವೆ.
ತೆಲುಗಿನ
‘ಪುನರ್
ವಿವಾಹ’,
‘ತ್ರಿನಯನಿ’,
‘ವೈದೇಹಿ’
‘ಪರಿಣಯ’,
‘ಸಂಧ್ಯಾ
ರಾಗ’,
‘ಸೌಭಾಗ್ಯವತಿ
ಭವ’
ಹೀಗೆ
ಸಾಕಷ್ಟು
ಧಾರಾವಾಹಿಗಳು
ಕನ್ನಡಕ್ಕೆ
ಡಬ್
ಆಗಿವೆ.
ಕನ್ನಡ
ಕಿರುತೆರೆ
ವೀಕ್ಷಕರನ್ನು
ರಂಜಿಸುತ್ತಿವೆ.
ಆದರೆ,
ಕನ್ನಡದ
ಧಾರಾವಾಹಿಯೊಂದು
ತಮಿಳಿಗೆ
ಡಬ್
ಆಗುತ್ತಿದೆ
ಎಂದರೆ
ನಿಜಕ್ಕೂ
ಇದು
ಖುಷಿಯ
ವಿಚಾರವೇ
ಸರಿ.
ಈ
ಹಿಂದೆ
ಕನ್ನಡದ
‘ಅಗ್ನಿಸಾಕ್ಷಿ’
ಧಾರಾವಾಹಿ
ಅದ್ಭುತವಾಗಿ
ಮೂಡಿ
ಬಂದ
ಕಾರಣ
ಇತರೆ
ಭಾಷೆಗಳಲ್ಲಿ
ರಿಮೇಕ್
ಮಾಡಲಾಯ್ತು.
ಕನ್ನಡದಲ್ಲಿ
ಪ್ರಸಾರವಾಗುತ್ತಿರುವ
ಧಾರಾವಾಹಿಯೊಂದು
ಈಗಾಗಲೇ
ಬಹಳ
ಜನಪ್ರಿಯತೆಯನ್ನು
ಪಡೆದಿದೆ.
ವೀಕ್ಷಕರು
ಧಾರಾವಾಹಿಯನ್ನು
ಮೆಚ್ಚಿಕೊಂಡಿದ್ದು,
ಟಿಆರ್‌ಪಿನಲ್ಲೂ
ಟಾಪ್‌ನಲ್ಲಿ
ಇದೆ.
ಇಂತಹ
ಧಾರಾವಾಹಿಯೊಂದು
ಈಗ
ಪರಭಾಷೆಯಲ್ಲಿ
ಡಬ್
ಆಗುತ್ತಿದೆ.
ಇತ್ತೀಚೆಗಷ್ಟೇ
‘ಪುಟ್ಟಕ್ಕನ
ಮಕ್ಕಳು’
ಧಾರಾವಾಹಿ
ಕೂಡ
ತಮಿಳಿಗೆ
ರಿಮೇಕ್
ಮಾಡಲಾಗಿದೆ.
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಮೂಡಿ
ಬರುತ್ತಿರುವ
‘ಭಾಗ್ಯಲಕ್ಷ್ಮೀ’
ಧಾರಾವಾಹಿ
ತಮಿಳು
ಭಾಷೆಗೆ
ಕಳೆದ
ಒಂದು
ತಿಂಗಳಿನಿಂದ
ಡಬ್
ಆಗುತ್ತಿದೆ.
ಸದ್ಯ
ಈ
ಧಾರಾವಾಹಿಯಲ್ಲಿ
ಈಗ
ಲಕ್ಷ್ಮೀ
ವೈಷ್ಣವ್
ಬಳಿ
ಅಕ್ಕನ
ವಿಚಾರವಾಗಿ
ಮಾತನಾಡುತ್ತಿರುವ
ಸೀಕ್ವೆನ್ಸ್
ನಡೆಯುತ್ತಿದೆ.
ವೈಷ್ಣವ್,
ಕೀರ್ತಿ
ಜೊತೆಗೆ
ಬ್ರೇಕಪ್
ಮಾಡಿಕೊಂಡಿರುವ
ಈ
ಸಂದರ್ಭದಲ್ಲಿ
ಕಾವೇರಿಗೆ
ಲಕ್ಷ್ಮೀ
ಅನ್ನು
ತನ್ನ
ಸೊಸೆಯನ್ನಾಗಿ
ಮಾಡಿಕೊಳ್ಳುವ
ಆಲೋಚನೆ
ಬಂದಿದೆ.
ತಮಿಳಿಗೆ
ಡಬ್
ಆದ
ಧಾರಾವಾಹಿ
ಜುಲೈ
3ರಿಂದ
ತಮಿಳಿನ
ಕಲರ್ಸ್
ವಾಹಿನಿಯಲ್ಲಿ
ಭಾಗ್ಯಲಕ್ಷ್ಮೀ
ಧಾರಾವಾಹಿ
ಮೂಡಿ
ಬರುತ್ತಿದೆ.
ಸೋಮವಾರದಿಂದ
ಶುಕ್ರವಾರದವರೆಗೂ
ರಾತ್ರಿ
9ಗಂಟೆಗೆ
ಪ್ರಸಾರವಾಗುತ್ತಿದೆ.
ತಮಿಳಿನಲ್ಲಿ
‘ಅರ್ಚನೈ
ಪೂಕಲ್’
ಹೆಸರಿನಲ್ಲಿ
ಈ
ಧಾರಾವಾಹಿ
ಪ್ರಸಾರವಾಗುತ್ತಿದೆ.
ಈ
ವಿಚಾರವನ್ನು
ತಾಂಡವ್
ಅಲಿಯಾಸ್
ನಟ
ಸುದರ್ಶನ್
ರಂಗಪ್ರಸಾದ್
ಅವರು
ಇನ್‌ಸ್ಟಾಗ್ರಾಂ
ಸ್ಟೋರಿಯಲ್ಲಿ
ಹಂಚಿಕೊಂಡಿದ್ದಾರೆ.
ಕನ್ನಡಿಗರ
ಮನ
ಗೆದ್ದ
ಭಾಗ್ಯಲಕ್ಷ್ಮಿ
ಕನ್ನಡದ
ಧಾರಾವಾಹಿಯೊಂದು
ಪರಭಾಷೆಯಲ್ಲಿ
ಡಬ್
ಆಗುವ
ಮಟ್ಟಕ್ಕೆ
ಜನಪ್ರಿಯತೆಯನ್ನು
ಪಡೆದಿರುವುದು
ವಿಶೇಷ.
ಅದರಲ್ಲೂ
ಕನ್ನಡದಲ್ಲಿ
ಸಂಚಲನ
ಮೂಡಿಸಿರುವ
ಭಾಗ್ಯಲಕ್ಷ್ಮೀ
ಧಾರಾವಾಹಿ
ಪರಭಾಷೆಯಲ್ಲಿ
ಮೂಡಿ
ಬರುತ್ತಿರುವುದು
ತಿಳಿದು
ಜನರು
ಕೂಡ
ಸಂತಸ
ಪಟ್ಟಿದ್ದಾರೆ.
ಇನ್ನು
ಕನ್ನಡಿಗರ
ಮನಗೆದ್ದ
ಭಾಗ್ಯಲಕ್ಷ್ಮೀ
ತಮಿಳಿನಲ್ಲೂ
ತಮಿಳು
ಪ್ರೇಕ್ಷಕರ
ಮನಸ್ಸನ್ನು
ಗೆಲ್ಲುವುದರಲ್ಲಿ
ಅನುಮಾನವೇ
ಇಲ್ಲ.
ಮುಂದಿನ
ಕಥೆ
ಹೇಗೆ
ಸಾಗುತ್ತದೆ..?
ಆದರೆ,
ಕನ್ನಡದಲ್ಲಿ
‘ಭಾಗ್ಯಲಕ್ಷ್ಮೀ’
ಧಾರಾವಾಹಿ
ವೈಷ್ಣವ್
ಹಾಗೂ
ಲಕ್ಷ್ಮೀ
ಮದುವೆಯವರೆಗೂ
ಒಂದೇ
ಆಗಿತ್ತು.
ತದನಂತರ
ಇದು
ಎರಡು
ಧಾರಾವಾಹಿಯಾಗಿ
ಮಾರ್ಪಾಡಾಗಿತ್ತು.
ಅಕ್ಕ
ಭಾಗ್ಯಳ
ಕಥೆ
ಭಾಗ್ಯಲಕ್ಷ್ಮೀ
ಆಗಿಯೂ,
ತಂಗಿ
ಲಕ್ಷ್ಮೀಯ
ಕಥೆಯೂ
ಲಕ್ಷ್ಮೀ
ಬಾರಮ್ಮ
ಆಗಿ
ಮೂಡಿ
ಬರುತ್ತಿದೆ.
ಆದರೆ,
ತಮಿಳು
ಧಾರಾವಾಹಿಯಲ್ಲೂ
ಎರಡಾಗಿ
ಮೂಡಿ
ಬರುತ್ತದೋ..?
ಅಥವಾ
ಒಂದೇ
ಧಾರಾವಾಹಿ
ಆಗಿ
ಪ್ರಸಾರವಾಗುತ್ತದೆಯೋ
ಎಂಬುದನ್ನು
ಕಾದು
ನೋಡಬೇಕಿದೆ.
English summary
Bhagyalakshmi serial to be dubbed in Tamil. know more.
Saturday, July 29, 2023, 23:11