ಪಂಚಾಯತ್ ಚುನಾವಣಾ ಫಲಿತಾಂಶ: ಬಂಗಾಳದಲ್ಲಿ ತಾನೇ ನಂಬರ್ ಒನ್ ಎಂದು ತೋರಿಸಿದ ಮಮತಾ ಬ್ಯಾನರ್ಜಿ! | Bengal panchayat elections Results: TMC registered a landslide victory

India

oi-Mamatha M

|

Google Oneindia Kannada News

ಕೋಲ್ಕತ್ತಾ, ಜುಲೈ. 13: ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 2023 ರ ಪಶ್ವಿಮ ಬಂಗಾಳ ಪಂಚಾಯತ್ ಚುನಾವಣೆಗಳಲ್ಲಿ ಜಿಲ್ಲಾ ಪರಿಷತ್ತಿನ ಎಲ್ಲಾ 20 ಸ್ಥಾನಗಳನ್ನು ಒಳಗೊಂಡಂತೆ ಪಂಚಾಯತಿ ಚುನಾವಣೆಯ ಎಲ್ಲಾ ಮೂರು ಹಂತಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ.

ಬುಧವಾರ ರಾತ್ರಿ ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿದ ಫಲಿತಾಂಶದ ಪ್ರಕಾರ ಆಡಳಿತ ಪಕ್ಷವು ಯಾವುದೇ ಹಾನಿಗೊಳಗಾಗದೆ ಉಳಿದುಕೊಂಡಿದೆ ಮತ್ತು ಸುಮಾರು 80 ಪ್ರತಿಶತ ಗ್ರಾಮ ಪಂಚಾಯತ್‌ಗಳನ್ನು ಅಂದರೆ, ಒಟ್ಟು 3,317 ರಲ್ಲಿ 2,641 ಮತ್ತು 92 ಶೇಕಡಾ ಪಂಚಾಯತ್ ಸಮಿತಿಗಳನ್ನು ಅಂದರೆ ಒಟ್ಟು 341 ರಲ್ಲಿ 313 ಸ್ಥಾನಗಳನ್ನು ಗೆದ್ದಿದೆ.

Bengal panchayat elections Results

ಎರಡು ಜಿಲ್ಲೆಗಳಾದ ಕಾಲಿಂಪಾಂಗ್ ಮತ್ತು ಡಾರ್ಜಿಲಿಂಗ್‌ನಲ್ಲಿ ಟಿಎಂಸಿ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿಲ್ಲ. ಆದರೆ, ಅದರ ಮಿತ್ರ ಪಕ್ಷವಾದ ಬಿಜಿಪಿಎಂ (ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ ಮೋರ್ಚಾ) ಕಾಲಿಂಪಾಂಗ್‌ನಲ್ಲಿ ಬಹುಪಾಲು 30/42 ಗ್ರಾಮ ಪಂಚಾಯಿತಿಗಳನ್ನು ಮತ್ತು ಡಾರ್ಜಿಲಿಂಗ್‌ನಲ್ಲಿ 38/70 ಗ್ರಾಮ ಪಂಚಾಯಿತಿಗಳನ್ನು ಗೆದ್ದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಂಚಾಯತಿ ಚುನಾವಣೆಯಲ್ಲಿ ಟಿಎಂಸಿಗೆ ಬಹುದೊಡ್ಡ ಗೆಲುವು ನೀಡಿದ್ದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಆದರೆ, ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಈ ಭರ್ಜರಿ ಗೆಲುವಿಗಾಗಿ ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕ್ಷಮತೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಟಿಎಂಸಿಗೆ 14,000, ಬಿಜೆಪಿಗೆ 3,344 ಸ್ಥಾನ, ಮುಂದುವರೆದ ಮತ ಎಣಿಕೆಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಟಿಎಂಸಿಗೆ 14,000, ಬಿಜೆಪಿಗೆ 3,344 ಸ್ಥಾನ, ಮುಂದುವರೆದ ಮತ ಎಣಿಕೆ

2021 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದ ನಂತರ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷ (ಬಿಜೆಪಿ), ಮೂರು ಹಂತದ ಪಂಚಾಯತ್ ವ್ಯವಸ್ಥೆಯ ಉನ್ನತ ಶ್ರೇಣಿಯಾದ ಒಂದೇ ಒಂದು ಜಿಲ್ಲಾ ಪರಿಷತ್ತನ್ನು ಗೆಲ್ಲಲು ವಿಫಲವಾಗಿದೆ. ಜಿಲ್ಲಾ ಪರಿಷತ್ತಿನ ಸ್ಥಾನಗಳ ಪ್ರಕಾರ, ಒಟ್ಟು 928 ಸ್ಥಾನಗಳಲ್ಲಿ ಟಿಎಂಸಿ 880 ಸ್ಥಾನಗಳನ್ನು ಗೆದ್ದಿದೆ, ಬಿಜೆಪಿ ಕೇವಲ 31 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್ ಮತ್ತು ಎಡರಂಗ ಕ್ರಮವಾಗಿ 13 ಮತ್ತು ಎರಡು ಸ್ಥಾನಗಳನ್ನು ಗೆದ್ದಿದೆ ಎಂದು ವರದಿಯಾಗಿದೆ.

Bengal panchayat elections Results

ಎರಡನೇ ಹಂತದ ಪಂಚಾಯತ್ ಸಮಿತಿಗಳಲ್ಲಿ ಆಡಳಿತ ಪಕ್ಷವು 313 ಪಂಚಾಯತ್ ಸಮಿತಿಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ ಕೇವಲ ಏಳು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ತನ್ನ ಖಾತೆ ತೆರೆಯಲೂ ಸಾಧ್ಯವಾಗಿಲ್ಲ. ಮೂರನೇ ಹಂತದ, ಗ್ರಾಮ ಪಂಚಾಯಿತಿಗಳಿಗೆ, ಟಿಎಂಸಿ 3,317 ರಲ್ಲಿ 2,641 ಗೆದ್ದಿದೆ. ತುಲನಾತ್ಮಕವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬಿಜೆಪಿ 230 ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ.

ಕಾಂಗ್ರೆಸ್ ಮತ್ತು ಎಡರಂಗ ಕ್ರಮವಾಗಿ 11 ಮತ್ತು 19 ಗ್ರಾಮ ಪಂಚಾಯಿತಿಗಳನ್ನು ಗೆದ್ದಿವೆ. ಆದರೆ, 267 ಗ್ರಾಮ ಪಂಚಾಯಿತಿಗಳಲ್ಲಿ ಯಾವ ಪಕ್ಷವೂ ಸ್ಪಷ್ಟ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇತರರು ಮತ್ತು ಸ್ವತಂತ್ರರು 149 ಸ್ಥಾನಗಳನ್ನು ಗೆದ್ದಿದ್ದಾರೆ. ಒಟ್ಟು 223 ರಲ್ಲಿ 61 ಗ್ರಾಮ ಪಂಚಾಯತಿಗಳನ್ನು ಗೆದ್ದಿರುವ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಬಿಜೆಪಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಜುಲೈ 8 ರಂದು 61,000 ಕ್ಕೂ ಹೆಚ್ಚು ಬೂತ್‌ಗಳಲ್ಲಿ ಪಂಚಾಯತ್ ಚುನಾವಣೆಗಳು ನಡೆದಿವೆ. ಹಲವಾರು ಸ್ಥಳಗಳಲ್ಲಿ ಹಿಂಸಾಚಾರದ ಘಟನೆಗಳ ನಡುವೆಯೂ 80.71% ಮತದಾನವಾಗಿದೆ.

English summary

West Bengal panchayat elections Results: Trinamool Congress (TMC) won nearly 80% gram panchayats and 92% panchayat samitis. registered a landslide victory. know more.

Story first published: Thursday, July 13, 2023, 17:30 [IST]

Source link