Telugu
oi-Narayana M
ಟಾಲಿವುಡ್
ನಟ
ಮಹೇಶ್
ಬಾಬು
ಸೂಪರ್
ಹಿಟ್
ಸಿನಿಮಾಗಳ
ಮೂಲಕ
ಅಭಿಮಾನಿಗಳ
ಆರಾಧ್ಯ
ದೈವವಾಗಿದ್ದಾರೆ.
ಬರೀ
ಸಿನಿಮಾ
ಅಲ್ಲ
ತಮ್ಮ
ಸಮಾಜಮುಖಿ
ಕೆಲಸಗಳಿಂದರೂ
ಟಾಲಿವುಡ್
ಪ್ರಿನ್ಸ್
ಎಲ್ಲರ
ಮನಗೆದ್ದಿದ್ದಾರೆ.
ಸದ್ಯ
ತ್ರಿವಿಕ್ರಮ್
ಶ್ರೀನಿವಾಸ್
ನಿರ್ದೇಶನದ
‘ಗುಂಟೂರು
ಖಾರಂ’
ಚಿತ್ರದಲ್ಲಿ
ಮಹೇಶ್
ನಟಿಸ್ತಿದ್ದಾರೆ.
ಇದ್ದಕ್ಕಿದಂತೆ
ತಮ್ಮ
ಮಗಳ
ಬಗ್ಗೆ
ಹೆಮ್ಮೆಯಿಂದ
ಪೋಸ್ಟ್
ಮಾಡಿದ್ದಾರೆ.
2005ರಲ್ಲಿ
ಮಹೇಶ್
ಬಾಬು,
ನಮ್ರತಾ
ಶಿರೋಡ್ಕರ್‌ನ
ಪ್ರೀತಿಸಿ
ಮದುವೆ
ಆಗಿದ್ದರು.
ದಂಪತಿಗೆ
ಗೌತಮ್,
ಸಿತಾರ
ಮುದ್ದಿನ
ಮಕ್ಕಳು.
ತಂದೆ
ಕೃಷ್ಣ
ಹಾದಿಯಲ್ಲೇ
ಮಹೇಶ್
ಬಾಬು
ಚಿಕ್ಕಂದಿನಲ್ಲೇ
ಚಿತ್ರರಂಗಕ್ಕೆ
ಬಂದರು.
ನಂತರ
ಹೀರೊ
ಆಗಿ
ಎಂಟ್ರಿ
ಕೊಟ್ಟರು.
ಇನ್ನು
ಮಹೇಶ್
ಬಾಬು
ಮಗಳು
ಸಿತಾರಾಗೂ
ಅಭಿಮಾನಿಗಳಿದ್ದಾರೆ.
ಸೋಶಿಯಲ್
ಮೀಡಿಯಾದಲ್ಲಿ
ಸಖತ್
ಆಕ್ಟೀವ್
ಆಗಿರುವ
ಸಿತಾರ
ಫ್ಯಾಮಿಲಿ
ಫೋಟೊಸ್,
ರೀಲ್ಸ್
ಶೇರ್
ಮಾಡುತ್ತಿರುತ್ತಾಳೆ.
ತಮ್ಮದೇ
ಯೂಟ್ಯೂವ್
ಚಾನಲ್
ಹೊಂದಿರುವ
ಮಹೇಶ್
ಬಾಬು
ಮುದ್ದಿನ
ಮಗಳು
ಮಕ್ಕಳಿಗೆ
ಅವಶ್ಯಕವಾದ
ಮಾಹಿತಿಗಳನ್ನು
ನೀಡುತ್ತಿರುತ್ತಾಳೆ.
3
ವರ್ಷಗಳ
ಹಿಂದೆ
ತನ್ನ
ಸ್ನೇಹಿತೆ
ಜೊತೆ
ಸೇರಿ
ತಂದೆ
ಮಹೇಶ್
ಬಾಬುರನ್ನು
ಸಿತಾರ
ಸಂದರ್ಶನ
ಮಾಡಿದ್ದಳು.
ಆ
ವಿಡಿಯೋ
ಸಖತ್
ವೈರಲ್
ಆಗಿತ್ತು.
11
ಭಾಷೆಗಳಲ್ಲಿ
ಪ್ರಭಾಸ್,
ಮಹೇಶ್‌ಗೆ
‘ಹನುಮಾನ್’
ಸವಾಲ್:
ಯುವನಟನ
ಧೈರ್ಯ
ಮೆಚ್ಚಲೇಬೇಕು
ಟೈಮ್ಸ್
ಸ್ಕೇರ್
ಮೇಲೆ
ಸಿತಾರ
ಪೋಸ್ಟರ್
ಇತ್ತೀಚೆಗೆ
ಸಿತಾರ
ಒಂದು
ಖಾಸಗಿ
ಜಾಹಿರಾತಿನಲ್ಲಿ
ಕಾಣಿಸಿಕೊಂಡಿದ್ದರು.
ಅದು
ಒಂದು
ಖ್ಯಾತ
ವಜ್ರಾಭರಣದ
ಜಾಹೀರಾತತು.
ಇದೀಗ
ಆ
ಜಾಹೀರಾತಿನ
ಪೋಸ್ಟರ್‌ಗಳು
ನ್ಯೂಯಾರ್ಕ್‌ನ
ಪ್ರತಿಷ್ಠಿತ
ಟೈಮ್ಸ್
ಸ್ಕೇರ್
ಕಟ್ಟಡದ
ಮೇಳೆ
ರಾರಾಜಿಸುತ್ತಿದೆ.
ಇದಕ್ಕೆ
ಸಂಬಂಧಿಸಿದ
ವಿಡಿಯೋಗಳು,
ಫೋಟೋಗಳು
ಸೋಶಿಯಲ್
ಮೀಡಿಯಾದಲ್ಲಿ
ವೈರಲ್
ಆಗುತ್ತಿದೆ.
ಚಿಕ್ಕ
ವಯಸ್ಸಿನಲ್ಲಿ
ಜ್ಯೂವೆಲ್ಲರಿ
ಸಂಸ್ಥೆಗೆ
ಬ್ರಾಂಡ್
ಅಂಬಾಸಿಡರ್
ಆಗಿರುವುದರಿಂದ
ಫ್ಯಾನ್ಸ್
ತುಂಬಾ
ಸಂತೋಷಪಡುತ್ತಿದ್ದಾರೆ.
ಆ
ಫೋಟೊ,
ವಿಡಿಯೋ
ನೋಡಿ
ತಂದೆಯನ್ನು
ಮೀರಿಸಿದ
ಮಗಳು
ಎಂದು
ಕಾಮೆಂಟ್
ಮಾಡ್ತಿದ್ದಾರೆ.
ಸಿತಾರಾ
ಸಿಕ್ಕಾಪಟ್ಟೆ
ಚೂಟಿ
ಮಹೇಶ್
ಬಾಬು,
ನಮ್ರತಾ
ಮುದ್ದಿನ
ಮಗಳು
ಸಿತಾರಾ
ಚಿಕ್ಕಂದಿನಿಂದಲೂ
ಬಹಳ
ಚೂಟಿ.
ಈಗಾಗಲೇ
ಭರತನಾಟ್ಯ
ತರಬೇತಿ
ಕೂಡ
ಪಡೆಯುತ್ತಿದ್ದಾರೆ.
ಈ
ಹಿಂದೆ
ತನ್ನ
ಮಗಳು
ಭಾರತನಾಟ್ಯಂ
ಮಾಡಿದ
ವೀಡಿಯೊವನ್ನು
ಮಹೇಶ್
ತನ್ನ
ಸಾಮಾಜಿಕ
ಮಾಧ್ಯಮದ
ಖಾತೆಯಲ್ಲಿ
ಹಂಚಿಕೊಂಡಿದ್ದಾರೆ.
ಹಾಗೆಯೇ
ಇತ್ತೀಚೆಗೆ
ಹಲವು
ಸೂಪರ್
ಹಿಟ್ಸ್
ಹಾಡುಗಳಿಗೆ
ಸಿತಾರ
ಸುಂದರ
ಡ್ಯಾನ್ಸ್
ಮಾಡಿದ
ವಿಡಿಯೋಗಳು
ಸಾಮಾಜಿಕ
ಜಾಲತಾಣದಲ್ಲಿ
ವೈರಲ್
ಆಗಿವೆ.
ಇನ್ನು
ಟೈಮ್ಸ್
ಸ್ಕ್ವೇರ್
ಮೇಲೆ
ಮಗಳ
ಪೋಸ್ಟರ್
ನೋಡಿ
ಮಹೇಶ್
ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.
‘ಗುಂಟೂರು
ಖಾರಂ’
ಚಿತ್ರದಲ್ಲಿ
ಮಹೇಶ್
ಸದ್ಯ
ತ್ರಿವಿಕ್ರಮ್
ಶ್ರೀನಿವಾಸ್
ನಿರ್ದೇಶನದ
‘ಗುಂಟೂರು
ಖಾರಂ’ಚಿತ್ರದಲ್ಲಿ
ಮಹೇಶ್
ಬಾಬು
ನಟಿಸುತ್ತಿದ್ದಾರೆ.
ಚಿತ್ರದಲ್ಲಿ
ಪೂಜಾ
ಹೆಗ್ಡೆ
ಹಾಗೂ
ಶ್ರೀಲೀಲಾ
ನಾಯಕಿಯರಾಗಿ
ಕಾಣಿಸಿಕೊಳ್ಳುತ್ತಿದ್ದಾರೆ.
ಕಾರಣಾಂತರಗಳಿಂದ
ಸಿನಿಮಾ
ಚಿತ್ರೀಕರಣ
ತಡವಾಗುತ್ತಿದೆ.
ಮುಂದಿನ
ಸಂಕ್ರಾಂತಿಗೆ
ಈ
ಆಕ್ಷನ್
ಎಂಟರ್‌ಟೈನರ್
ಸಿನಿಮಾ
ತೆರೆಗೆ
ತರುವ
ಪ್ರಯತ್ನ
ನಡೀತಿದೆ.
ಮೌಳಿ
ಚಿತ್ರಕ್ಕಾಗಿ
ತಯಾರಿ
‘ಗುಂಟೂರು
ಖಾರಂ’
ನಂತರ
ರಾಜಮೌಳಿ
ನಿರ್ದೇಶನದ
ಚಿತ್ರದಲ್ಲಿ
ಮಹೇಶ್
ಬಾಬು
ನಟಿಸಲಿದ್ದಾರೆ.
ಆ
ಚಿತ್ರಕ್ಕಾಗಿ
ಸ್ಕ್ರಿಪ್ಟ್
ವರ್ಕ್
ಭರದಿಂದ
ಸಾಗಿದೆ.
ಮುಂದಿನ
ವರ್ಷ
ಸಿನಿಮಾ
ಸೆಟ್ಟೇರಲಿದೆ.
ಹಾಲಿವುಡ್
ಮಟ್ಟದಲ್ಲಿ
ಸಿನಿಮಾ
ಮೂಡಿ
ಬರಲಿದೆ.
ಬಹುಕೋಟಿ
ವೆಚ್ಚದಲ್ಲಿ
ಈ
ಆಕ್ಷನ್
ಅಡ್ವೆಂಚರಸ್
ಸಿನಿಮಾ
ತೆರೆಗೆ
ಬರಲಿದೆ.
English summary
Mahesh Babu’s daughter Sitara dazzles on Time Square billboards. PMJ Jewels Launch Sitara Collection. know more.
Tuesday, July 4, 2023, 17:50
Story first published: Tuesday, July 4, 2023, 17:50 [IST]