ನ್ಯಾಯಾಂಗ ತನಿಖೆಗೆ 40% ಕೇಸ್: ಬಿಜೆಪಿಗರಿಗೆ ಹೊಸ ಜೈಲು ಕಟ್ಟಬೇಕೋ? ಇಲ್ಲ ಬಿಜೆಪಿ ಕಚೇರಿಗೆ ಕಂಬಿ ಹಾಕಬೇಕೋ?: ಕಾಂಗ್ರೆಸ್ | BJP 40 Percentage Commission Case Orders Judicial Probe: Congress Tweet Slams On BJP

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜಲೈ 05: ಕರ್ನಾಟಕ ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಿಜೆಪಿ ವಿರುದ್ಧ ಮಹತ್ವದ ನೀರ್ಣಯ ಕೈಗೊಂಡಿದೆ. ಬಿಟ್ ಕಾಯಿನ್ ಸೇರಿದಂತೆ ವಿವಿಧ ಹಗರಣಗಳಿಗೆ ವಿಶೇಷ ತನಿಖಾ ತಂಡ ನೇಮಿಸಿದರೆ, ಭಾರೀ ಸದ್ದು ಮಾಡಿದ್ದ 40 ಪರ್ಸೆಂಟ್ ಭ್ರಷ್ಟಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ನೀರ್ಧರಿಸಿದೆ. 40% ಕಮಿಷನ್ ಹಗರಣದ ದಾಖಲೆ ಕೇಳುತ್ತಿದ್ದವರಿಗೆ ಸಾಕ್ಷಿ ಕೊಡಲು ತನಿಖಾ ಸಮಿತಿ ತಯಾರಾಗಿದೆ ಎಂದು ಕಾಂಗ್ರೆಸ್ ಕುಟುಕಿದೆ.

ಬಿಜೆಪಿ ಅವಧಿಯ ಭ್ರಷ್ಟಾಚಾರಗಳ ತನಿಖೆ ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 40 ಪರ್ಸೆಂಟ್ ಕಮಿಷನ್ ಹಗರಣದ ದಾಖಲೆ ಕೊಡಿ ಎನ್ನುತ್ತಿದ್ದ ರಾಜ್ಯ ಬಿಜೆಪಿ ಭ್ರಷ್ಟರಿಗೆ ಈಗ ತನಿಖಾ ಸಮಿತಿಯೇ ದಾಖಲೆ ನೀಡಲಿದೆ.

 BJP 40 Percentage Commission Case

ಸಾಕ್ಷಿ ಕೇಳುತ್ತಿದ್ದವರಿಗೆ ಸಾಕ್ಷಿ ಕೊಡಲು ತಯಾರಾಗಿದ್ದಾರೆ.

ನ್ಯಾಯಾಂಗ ತನಿಖೆಯಿಂದ ಬಿಜೆಪಿ ಭ್ರಷ್ಟಾಚಾರ ಹೊರ ಬೀಳಲಿದೆ. ಬಿಜೆಪಿಗರಿಗೆ ಹೊಸ ಜೈಲು ಕಟ್ಟಬೇಕೋ ಅಥವಾ ಬಿಜೆಪಿ ಕಚೇರಿಗೇ ಕಂಬಿ ಹಾಕಬೇಕೋ, ಚಿಂತಿಸಬೇಕಿದೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್ ನಿಂದ ಪೇಸಿಎಂ ಅಭಿಯಾನ

ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವಿವಿಧ ಕಾಮಗಾರಿಗಳಿಗೆ ಶೇಕಡಾ 40 ಪರ್ಸೆಂಟೇಜ್ ಕಮಿಷನ್ ನೀಡಬೇಕು. ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನೇರವಾಗಿ ಆರೋಪ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ತನಿಖೆ ಆಗ್ರಹಿಸಿದ್ದರು.

 BJP 40 Percentage Commission Case

ಇದರ ಬೆನ್ನಲ್ಲೆ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿಳುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಇಂದು ಅಧಿಕಾರ ಚುಕ್ಕಾಣೆ ಹಿಡಿದೆ. ಅಂದು ಕಾಂಗ್ರೆಸ್ ಪೇಸಿಎಂ ಕ್ಯೂಆರ್‌ ಕೋಡ್ ಅಭಿಯಾನ ಆರಂಭಿಸಿತ್ತು. ಪೋಸ್ಟರ್ ಅಂಟಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು.

ನ್ಯಾ.ಬಿ.ವೀರಪ್ಪ ಅವರ ನೇತೃತ್ವದಲ್ಲಿ ತನಿಖೆ

ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಟ್ ಕಾಯಿನ್ ಹಗರಣ, ಚಾಮರಾಜನಗರ ಆಕ್ಸಿಜನ್ ದುರಂತ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ. 40 ಪರ್ಸೆಂಟ್ ಹಗರಣಕ್ಕೆ ನ್ಯಾಯಾಂಗ ತನಿಖೆಗೆ ಸರ್ಕಾರ ಅಸ್ತು ಎಂದಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ನೀರ್ಣಯಿಸಿದೆ.

 ಸಿಎಂ ಸ್ಥಾನಕ್ಕೆ ಟವೆಲ್‌ ಹಾಕಿದ ಅಜಿತ್‌ ಪವಾರ್: ಉದ್ದವ್‌ ಜೊತೆ ಹೋಗುತ್ತೇವೆಂದ ಶಿಂಧೆ ಶಾಸಕರು- 'ಮಹಾ' ಸಂಕಟದಲ್ಲಿ ಬಿಜೆಪಿ ಸಿಎಂ ಸ್ಥಾನಕ್ಕೆ ಟವೆಲ್‌ ಹಾಕಿದ ಅಜಿತ್‌ ಪವಾರ್: ಉದ್ದವ್‌ ಜೊತೆ ಹೋಗುತ್ತೇವೆಂದ ಶಿಂಧೆ ಶಾಸಕರು- ‘ಮಹಾ’ ಸಂಕಟದಲ್ಲಿ ಬಿಜೆಪಿ

ಕಾಂಗ್ರೆಸ್ ಕೊಟ್ಟ ಭರವಸೆಯಂತೆ ಗ್ಯಾರಂಟಿಗಳನ್ನು ಪೂರೈಸುತ್ತಿದೆ. ಗಂಗಾ ಕಲ್ಯಾಣ ಬೋರ್ ವೆಲ್ ಪ್ರಕರಣ, ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್‌ಕಾಯಿನ್ ಹಗರಣ ಅಥವಾ ಇನ್ನಾವುದೇ ಹಗರಣವಿರಲಿ, ಹಗರಣದ ಸ್ವರೂಪ ಆಧಾರ, ಅರಿತು ಸರ್ಕಾರ ವಿಶೇಷ ತನಿಖಾ ತಂಡಗಳನ್ನು ರಚಿಸಿದೆ. ನಾವು ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿಲ್ಲ. ಅವುಗಳನ್ನು ಗುತ್ತಿಗೆದಾರರೇ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನಿಡಿದರು.

English summary

BJP 40 percentage commission case orders judicial probe: congress hits back on bjp.

Story first published: Wednesday, July 5, 2023, 19:34 [IST]

Source link