Telugu
oi-Muralidhar S
By ಫಿಲ್ಮಿಬೀಟ್ ಡೆಸ್ಕ್
|
ಮೆಗಾ
ಕುಟುಂಬದ
ಹೀರೊ
ವರುಣ್
ತೇಜ್
ಹೊಸ
ಸಿನಿಮಾ
ಗ್ರ್ಯಾಂಡ್
ಆಗಿ
ಲಾಂಚ್
ಆಗಿದೆ.
ಇತ್ತೀಚೆಗಷ್ಟೇ
ವರುಣ್
ತೇಜ್
ನಟಿ
ಲಾವಣ್ಯ
ತ್ರಿಪಾಠಿ
ಜೊತೆ
ನಿಶ್ಚಿತಾರ್ಥ
ಮಾಡಿಕೊಂಡಿದ್ದರು.
ಆ
ಬಳಿಕ
ಸೆಟ್ಟೇರಿದ
ಸಿನಿಮಾವಿದು.
ಹಾಗಾಗಿ
ಈ
ಸಿನಿಮಾ
ವರುಣ್
ತೇಜ್‌ಗೆ
ತುಂಬಾನೇ
ಸ್ಪೆಷಲ್.
ಅಂದ್ಹಾಗೆ,
ನಟ
ವರುಣ್
ತೇಜ್‌ಗೆ
ಇದು
14ನೇ
ಸಿನಿಮಾ.
ಈ
ಸಿನಿಮಾಗೆ
ಟೈಟಲ್
ಇಟ್ಟಿದ್ದು,
‘ಮಟ್ಕಾ’
ಎಂದು
ಹೆಸರಿಡಲಾಗಿದೆ.
ಈ
ಸಿನಿಮಾದ
ಮುಹೂರ್ತವನ್ನು
ಹೈದರಾಬಾದ್‌ನಲ್ಲಿ
ಅದ್ಧೂರಿಯಾಗಿ
ಸೆಟ್ಟೇರಿದೆ.
ಟಾಲಿವುಡ್‌ನ
ದಿಗ್ಗಜರೇ
ಈ
ಸಿನಿಮಾ
ಸಾಥ್
ಕಟ್ಟಿದ್ದಾರೆ.
ನಿರ್ಮಾಪಕ
ಅಲ್ಲು
ಅರವಿಂದ್
ಈ
ಸಿನಿಮಾಗೆ
ಕ್ಲಾಪ್
ಮಾಡಿದ್ದಾರೆ.
ನಿರ್ದೇಶಕ
ಮಾರುತಿ
ಕ್ಯಾಮರಾಗೆ
ಚಾಲನೆ
ಕೊಟ್ಟಿದ್ದಾರೆ.
ಹಾಗೇ
ಮತ್ತೊಬ್ಬ
ನಿರ್ದೇಶಕ
ಮಟ್ಕಾ
ಸಿನಿಮಾದ
ಪೋಸ್ಟರ್
ಅನ್ನು
ಬಿಡುಗಡೆ
ಮಾಡಿದ್ದಾರೆ.
ಈ
ಸಿನಿಮಾ
ಜೂಜಾಟದ
ಕಥೆಯನ್ನು
ಆಧರಿಸಿದ
ಸಿನಿಮಾ.
1958ರಿಂದ
82ರ
ಅವಧಿಯಲ್ಲಿ
ವೈಜಾಗ್‌ನಲ್ಲಿ
ನಡೆದ
ಸತ್ಯ
ಘಟನೆಯನ್ನೇ
ಆಧರಿಸಿದ
ಸಿನಿಮಾವಾಗಿದೆ.
ಈ
ಸಿನಿಮಾದಲ್ಲಿ
ವರುಣ್
ತೇಜ್
ಬರೋಬ್ಬರು
ನಾಲ್ಕು
ಶೇಡ್‌ಗಳಲ್ಲಿ
ಕಾಣಿಸಿಕೊಳ್ಳಲಿದ್ದಾರೆ.
ಸುಮಾರು
24
ವರ್ಷಗಳ
ಹಿಂದಿನ
ಕಥೆಯನ್ನು
ಅದ್ಧೂರಿಯಾಗಿ
ನಿರ್ಮಾಣ
ಮಾಡಲಾಗುತ್ತಿದೆ.
ಈ
ಸಿನಿಮಾ
ಮೆಗಾ
ಪ್ರಿನ್ಸ್
ಸಿನಿ
ಕರಿಯರ್‌ನ
ಬಿಗ್
ಬಜೆಟ್
ಎಂದು
ಅಂದಾಜಿಸಲಾಗಿದೆ.
‘ಮಟ್ಕಾ’
ಸಿನಿಮಾವನ್ನು
‘ಫಲಾಸ’
ಸಿನಿಮಾವನ್ನು
ನಿರ್ದೇಶನ
ಮಾಡಿದ್ದ
ಕರುಣ್
ಕುಮಾರ್
ಆಕ್ಷನ್
ಕಟ್
ಹೇಳುತ್ತಿದ್ದಾರೆ.
ವರುಣ್
ತೇಜ್
ಜೊತೆ
ಈ
ಸಿನಿಮಾದಲ್ಲಿ
ಮೀನಾಕ್ಷಿ
ಚೌಧರಿ
ನಾಯಕಿಯಾಗಿ
ನಟಿಸುತ್ತಿದ್ದಾರೆ.
ಹಾಗೇ
ಕನ್ನಡ
ನಟ
ಕಿಶೋರ್
ವಿಶೇಷ
ಪಾತ್ರದಲ್ಲಿ
ನಟಿಸುತ್ತಿರೋದು
ವಿಶೇಷ.
ಇವರೊಂದಿಗೆ
ಅಜಯ್
ಘೋಷ್,
ಮೈಮ್
ಗೋಪಿ,
ರೂಪಲಕ್ಷ್ಮಿ,
ವಿಜಯರಾಮ
ರಾಜು,
ಜಗದೀಶ್
ಹಾಗೂ
ರಾಜ್
ತಿರಂದಾಸ್
ಸೇರಿದಂತೆ
ಹಲವರು
ಈ
ಸಿನಿಮಾದಲ್ಲಿ
ನಟಿಸುತ್ತಿದ್ದಾರೆ.
ಈ
ಸಿನಿಮಾದ
ಮತ್ತೊಂದು
ವಿಶೇಷ
ಅಂದ್ರೆ,
ಮಟ್ಕಾ
ಸಿನಿಮಾದಲ್ಲಿ
ಬಾಲಿವುಡ್
ಬ್ಯೂಟಿ
ನೋರಾ
ಫತೇಹಿ
ಐಟಂ
ಸಾಂಗ್‌ನಲ್ಲಿ
ಕಾಣಿಸಿಕೊಳ್ಳುತ್ತಿದ್ದಾರೆ.
ವರುಣ್
ತೇಜ್
ಈ
ಹಾಡಿನಲ್ಲೂ
ಕಾಣಿಸಿಕೊಳ್ಳುತ್ತಿದ್ದಾರೆ.
ವೈರಾ
ಎಂಟರ್‌ಟೈನ್ಮೆಂಟ್
ಈ
ಸಿನಿಮಾವನ್ನು
ನಿರ್ಮಾಣ
ಮಾಡುತ್ತಿದ್ದಾರೆ.
ಮೋಹನ್
ಚೆರುಕುರಿ
ಮತ್ತು
ಡಾ.
ವಿಜೇಂದರ್
ರೆಡ್ಡಿ
ಟೀಗಾಲ
ಈ
ಸಿನಿಮಾದ
ನಿರ್ಮಾಪಕರು.
ಈ
ಸಿನಿಮಾಗೆ
ಜಿ.ವಿ.
ಪ್ರಕಾಶ್
ಕುಮಾರ್
‘ಮಟ್ಕಾ’
ಸಿನಿಮಾಗೆ
ಸಂಗೀತ
ನೀಡುತ್ತಿದ್ದಾರೆ.
ಪ್ರಿಯ
ಸೇಠ್
ಈ
ಸಿನಿಮಾ
ಕ್ಯಾಮರಾ
ಹಿಡಿದ್ದಾರೆ.
ಕಾರ್ತಿಕ್
ಶ್ರೀನಿವಾಸ್
ಆರ್
ಎಡಿಟಿಂಗ್,
ಸುರೇಶ್
ಕಲಾ
ನಿರ್ದೇಶನವಿದೆ.
ಇದು
ಪ್ಯಾನ್
ಇಂಡಿಯಾ
ಸಿನಿಮಾ
ಆಗಿದ್ದು,
ತೆಲುಗು,
ಕನ್ನಡ,
ತಮಿಳು,
ಹಿಂದಿ
ಹಾಗೂ
ಮಲಯಾಳಂ
ಭಾಷೆಯಲ್ಲಿ
ಏಕಕಾಲಕ್ಕೆ
ಬಿಡುಗಡೆಯಾಗುತ್ತಿದೆ.
English summary
Varun Tej 14th movie title as Matka Nora Fatehi will do the Item Song
Thursday, July 27, 2023, 23:52