ನಿರಂತರ ಮಳೆಗೆ ಪಾಕಿಸ್ತಾನ-ಬಾಂಗ್ಲಾದೇಶ ಪಂದ್ಯ ಆಹುತಿ; ಗೆಲುವೇ ಕಾಣದೆ ಅಭಿಯಾನ ಮುಗಿಸಿದ ತಂಡಗಳಿಗೆ ಸಿಗುವ ಮೊತ್ತವಿದು!

ಬಾಂಗ್ಲಾ ಮತ್ತು ಪಾಕ್ ತಂಡಕ್ಕೆ ಸಿಕ್ಕಿದ್ದೆಷ್ಟು?

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಐಸಿಸಿಯಿಂದ ಸುಮಾರು 2.37 ಕೋಟಿ ರೂ.ಗಳ ಬಹುಮಾನದ ಮೊತ್ತ ಪಡೆಯಲಿವೆ. ಈ ಎರಡೂ ತಂಡಗಳು 7ನೇ ಮತ್ತು 8ನೇ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಈ ಸ್ಥಾನಿಗಳಿಗೆ ಐಸಿಸಿ 1.40 ಮಿಲಿಯನ್ ಡಾಲರ್ (ಸುಮಾರು 1.22 ಕೋಟಿ ರೂಪಾಯಿ) ಬಹುಮಾನ ಮೊತ್ತ ಘೋಷಿಸಿದೆ. ಮತ್ತೊಂದೆಡೆ ಪಂದ್ಯ ಗೆಲ್ಲುವ ತಂಡಕ್ಕೆ 34000 (ಸುಮಾರು 30 ಲಕ್ಷ) ಯುಎಸ್ ಡಾಲರ್ ಸಿಗಲಿದೆ. ಪಾಕ್, ಬಾಂಗ್ಲಾ ಪಂದ್ಯ ರದ್ದುಗೊಂಡ ಕಾರಣ ಈ ಮೊತ್ತವನ್ನು (17,000 ಡಾಲರ್​) ಸಮನಾಗಿ ಎರಡೂ ತಂಡಗಳಿಗೆ ವಿತರಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಐಸಿಸಿ, ತಲಾ 1,25,000 ಡಾಲರ್ ಪ್ರತ್ಯೇಕ ಬಹುಮಾನವನ್ನು ಘೋಷಿಸಿತ್ತು. ಇದು ಸುಮಾರು ಒಂದು ಕೋಟಿ ರೂಪಾಯಿ. ಹೀಗಾಗಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಒಟ್ಟು 2.37 ಕೋಟಿ ರೂ ಪಡೆಯಲಿವೆ. ಆತಿಥ್ಯ ವಹಿಸಿದ ಪಾಕಿಸ್ತಾನಕ್ಕೆ ಸಿಗುವ ಮೊತ್ತವೂ ವಿಭಿನ್ನವಾಗಿರುತ್ತದೆ.

Source link