Karnataka
oi-Malathesha M

‘ಕೆಜಿಎಫ್’ ಸಿನಿಮಾ ಮೂಲಕ ಜಗತ್ತಿನ ಮನಗೆದ್ದ ಕನ್ನಡಿಗರ ಮನೆ ಹುಡುಗ ‘ರಾಕಿಂಗ್ ಸ್ಟಾರ್’ ಯಶ್. ಅದಕ್ಕೂ ಮೊದಲು ಕನ್ನಡ ಸಿನಿಮಾ ರಂಗದಲ್ಲೇ ವಿಭಿನ್ನ ಕಥಾಹಂದರ ಆಯ್ಕೆ ಮಾಡಿಕೊಳ್ಳುತ್ತಾ ಎಲ್ಲರ ಮನಗೆದ್ದಿದ್ದರು. ನೋಡ ನೋಡುತ್ತಲೇ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದ ಯಶ್ ಈಗ ಸೈಲೆಂಟ್ ಆಗಿದ್ದಾರೆ ಅನ್ನೋ ಮಾತುಗಳು ಹಬ್ಬಿದ್ದವು. ಆದರೆ ರಾಕಿಭಾಯ್ ರೀ ಎಂಟ್ರಿ ಕೊಟ್ಟ ರಭಸಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಹೌದು, ರಾಕಿಂಗ್ ಸ್ಟಾರ್ ಯಶ್ ಅಲಿಯಾಸ್ ರಾಕಿಭಾಯ್ ಭರ್ಜರಿಯಾಗಿ ಎಂಟ್ರಿ ಕೊಟ್ಟು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಅಮೆರಿಕದ ಹಾಲಿವುಡ್ ಸಿನಿ ರಂಗವನ್ನು ಒಂದು ಕಾಲದಲ್ಲಿ ಅಕ್ಷರಶಃ ಆಳಿದ್ದ ‘ಕೌಬಾಯ್’ ಅವತಾರದಲ್ಲಿ ನಟ ಯಶ್ ಸಂಚಲನ ಸೃಷ್ಟಿ ಮಾಡಿದ್ದಾರೆ. ನಾಳೆ ಸಲಾರ್ ಟೀಸರ್ ರಿಲೀಸ್ ಆಗುತ್ತಿದ್ದು, ಅದಕ್ಕೆ ಮೊದಲೇ ಯಶ್ ಹವಾ ಜೋರಾಗಿದೆ. ಯಶ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ‘ಕೌಬಾಯ್’ ಅವತಾರದಲ್ಲಿ ನಟ ಯಶ್ ಅವರನ್ನ ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ. ಹಾಗಾದ್ರೆ ಇದೇ ರಾಕಿಭಾಯ್ ಮುಂದಿನ ಸಿನಿಮಾನ?

ಯಶ್ ಮುಂದಿನ ಸಿನಿಮಾ ಬಂದೇಬಿಡ್ತಾ?
ಇನ್ನೇನು ಕೆಲವೇ ಗಂಟೆ ಬಾಕಿ ಅಷ್ಟೇ, ಸಲಾರ್ ಎಂಬ ಬಹುನಿರೀಕ್ಷಿತ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಇಡೀ ಜಗತ್ತೇ ಈ ಸಿನಿಮಾಗಾಗಿ ಕಾಯುತ್ತಿದೆ. ಆದರೆ ಇದೇ ಹೊತ್ತಲ್ಲೇ ಯಶ್ ಅಬ್ಬರ ಶುರುವಾಗಿದೆ. ಹೀಗೆ ರಾಕಿಭಾಯ್ ಸದ್ದು ಮಾಡ್ತಿರೋದು ಬೆಳ್ಳಿತೆರೆ ಮೇಲೆ ಅಲ್ಲ, ಬದಲಾಗಿ ಭರ್ಜರಿ ಜಾಹೀರಾತು ಮೂಲಕ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ 1 ವರ್ಷ 3 ತಿಂಗಳು ಕಳೆದಿದ್ರೂ ಯಶ್ ತಮ್ಮ ಮುಂದಿನ ಚಿತ್ರ ಯಾವುದೆಂದು ಘೋಷಿಸಿರಲಿಲ್ಲ. ಹೀಗಾಗಿ ಯಶ್ ಅವರನ್ನ ‘ಕೌಬಾಯ್’ ಅವತಾರದಲ್ಲಿ ನೋಡಿದ್ದ ಅವರ ಅಭಿಮಾನಿಗಳು ಖುಷ್ ಆಗಿದ್ರು. ಆದರೆ ಇದು ಜಾಹೀರಾರು ಅನ್ನೋದು ಕನ್ಫರ್ಮ್ ಆಗಿದ್ದು, ಜಾಹೀರಾತು ಕೂಡ ಥೇಟ್ ಸಿನಿಮಾ ರೇಂಜ್‌ಗೆ ಮೂಡಿಬಂದಿದೆ.
ಯಶ್ ನೀಡಿದ ಜಾಹೀರಾತು ಯಾವುದು?
ಅಂದಹಾಗೆ ‘ವಿಲನ್’ ಬ್ರಾಂಡ್‌ನ ಬೀಯರ್ಡ್ ಆಯಿಲ್ ಉತ್ಪನ್ನದ ಜಾಹೀರಾತಿನಲ್ಲಿ ಯಶ್ ಮಿಂಚಿದ್ದಾರೆ. ಈ ಜಾಹೀರಾತಿನಲ್ಲಿ ಯಶ್ ನಟಿಸಿದ್ದು ರಿಲೀಸ್ ಆಗಿ ಫುಲ್ ವೈರಲ್ ಆಗ್ತಿದೆ. ಇನ್ನು ಈ ಜಾಹೀರಾತಿನಲ್ಲಿ ನಡೆಯುವ ಫೈಟ್ ಸೀನ್ ಒಂದು ಥೇಟ್ ಸಿನಿಮಾ ರೇಂಜ್‌ಗೆ ಮೂಡಿಬಂದಿದೆ. ಹೀಗಾಗಿಯೇ ಮತ್ತೆ ಯಶ್ ಹವಾ ಬಲು ಜೋರಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಯಶ್ ಹವಾ ಜಗತ್ತಿನಾದ್ಯಂತ ಜೋರಾಗಿದೆ. ಅದರಲ್ಲೂ ಉತ್ತರ ಭಾರತದ ಅಭಿಮಾನಿಗಳು ಈ ಜಾಹೀರಾತಿಗೆ ಫಿದಾ ಆಗಿದ್ದಾರೆ. ಈ ಹೊಸ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಶ್ 19 ಯಾವಾಗ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.

ನಾಳೆ ‘ಸಲಾರ್’ ಟೀಸರ್ ರಿಲೀಸ್!
ಭಾರತೀಯ ಚಿತ್ರರಂಗದ ಹೊಸ ಟ್ರೆಂಡ್ ಪ್ಯಾನ್ ಇಂಡಿಯಾ ಸಿನಿಮಾಗಳು. ಈಗ ಸಲಾರ್ ಅದೇ ಪ್ಯಾನ್ ಇಂಡಿಯಾ ಸಾಲಿಗೆ ಹೊಸ ಸೇರ್ಪಡೆ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್‌ನ ‘ಕೆಜಿಎಫ್-1’ ಮತ್ತು ‘ಕೆಜಿಎಫ್-2’ ಸರಣಿ ಇಂಡಸ್ಟ್ರಿ ಹಿಟ್ ಆಗಿವೆ. ಈಗ ‘ಸಲಾರ್’ ಮೂಲಕ ಹೊಂಬಾಳೆ ಫಿಲ್ಮ್ಸ್ & ಪ್ರಶಾಂತ್ ನೀಲ್ ಮೊದಲ ಬಾರಿಗೆ ಪ್ರಭಾಸ್ ಜೊತೆಗೆ ಕೈಜೋಡಿಸಿದ್ದಾರೆ. ಅಲ್ಲದೆ ಇದು ಪರಭಾಷೆಯಲ್ಲಿ ಮೂಡಿಬರುತ್ತಿರುವ ಹೊಂಬಾಳೆ ಫಿಲ್ಮ್ಸ್‌ನ ಮೊದಲ ಸಿನಿಮಾ. ನಾಳೆ ಬೆಳಗ್ಗೆ ಸಲಾರ್ ಟೀಸರ್ ರಿಲೀಸ್ ಆಗಲಿದೆ.
ಚಿತ್ರ ಬಿಡುಗಡೆ ಆಗುವುದಕ್ಕೂ ಮೊದಲೇ ನೂರಾರು ಕೋಟಿ ಬಿಸಿನೆಸ್ ಮಾಡಿದೆ ಎಂಬ ಮಾತು ಓಡಾಡುತ್ತಿದೆ. ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಶ್ರುತಿ ಹಾಸನ್ & ಕನ್ನಡದ ನಟ ಪ್ರಮೋದ್ ಹಾಗೂ ಮಧು ಗುರುಸ್ವಾಮಿ ನಟಿಸಿದ್ದಾರೆ. ಹೀಗೆ ದೊಡ್ಡ ತಾರಾಬಳಗವೇ ‘ಸಲಾರ್’ ಸಿನಿಮಾ ತಂಡಕ್ಕೆ ಸಾಥ್ ನೀಡಿದೆ. ಈ ಎಲ್ಲಾ ಕಾರಣಕ್ಕೆ ಇಡೀ ದೇಶಾದ್ಯಂತ ಸಲಾರ್ ಸಿನಿಮಾ ನೋಡಲು ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಇದೇ ಹೊತ್ತಲ್ಲಿ ಕನ್ನಡದ ನಟ ಯಶ್ ಹವಾ ಕೂಡ ಜೋರಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ನಾಳೆ ಮುಂಜಾನೆ 5 ಗಂಟೆಗೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.
English summary
Yash advertisement created storm after KGF.
Story first published: Wednesday, July 5, 2023, 23:35 [IST]