Tv
oi-Muralidhar S
By ಅನಿತಾ ಬನಾರಿ
|
ಕಲರ್ಸ್
ಕನ್ನಡದಲ್ಲಿ
ಪ್ರಸಾರವಾಗುತ್ತಿರುವ
ಜನಪ್ರಿಯ
ಧಾರಾವಾಹಿ
‘ರಾಮಾಚಾರಿ’.
ಈ
ಧಾರಾವಾಹಿಯಲ್ಲಿ
ನಾಯಕ
ರಾಮಾಚಾರಿ
ಅಣ್ಣ
ಕೋದಂಡನ
ಎರಡನೇ
ಹೆಂಡತಿ
ವೈಶಾಖಾ
ಆಗಿ
ಐಶ್ವರ್ಯಾ
ಸಾಲಿಮಠ್
ಅಭಿನಯಿಸುತ್ತಿದ್ದಾರೆ.
ಈ
ಸೀರಿಯಲ್ನಲ್ಲಿ
ಖಳನಾಯಕಿಯಾಗಿ
ಕಿರುತೆರೆ
ಅಂಗಳದಲ್ಲಿ
ಮೋಡಿ
ಮಾಡುತ್ತಿದ್ದಾರೆ.
ಐಶ್ವರ್ಯಾ
ಸಾಲಿಮಠ್
ಆಕಸ್ಮಿಕವಾಗಿ
ನಟನಾ
ಕ್ಷೇತ್ರಕ್ಕೆ
ಕಾಲಿಟ್ಟಿದ್ದರು.
ಸದ್ಯ
ಖಳನಾಯಕಿಯಾಗಿಯೇ
ಕಿರುತೆರೆಯಲ್ಲಿ
ಫೇಮಸ್.
ಈಗಾಗಲೇ
ಹಲವು
ಧಾರಾವಾಹಿಗಳಲ್ಲಿ
ನಟಿಸಿರುವ
ಐಶ್ವರ್ಯಾ
ಸಾಲಿಮಠ್
ಡಿಪ್ಲೋಮಾದಲ್ಲಿ
ಪದವಿ
ಪಡೆದಿರುವ
ಬೆಡಗಿ.

‘ಮಹಾಸತಿ’ಯ
ಮೂಲಕ
ನಟನಾ
ಪಯಣ
ಉದಯ
ಟಿವಿಯಲ್ಲಿ
ಪ್ರಸಾರವಾಗುತ್ತಿದ್ದ
‘ಮಹಾಸತಿ’
ಧಾರಾವಾಹಿಯಲ್ಲಿ
ಎರಡನೇ
ನಾಯಕಿಯಾಗಿ
ಕಾಣಿಸಿಕೊಳ್ಳುವ
ಮೂಲಕ
ನಟನೆಗೆ
ಪಾದಾರ್ಪಣೆ
ಮಾಡಿದ್ರು.
ಐಶ್ವರ್ಯಾ
ನಂತರ
ಅದೇ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಸರಯೂ’
ಧಾರಾವಾಹಿಯಲ್ಲಿ
ನಟಿಸಿದ್ದರು.
ಅದ್ಭುತ
ನಟನೆಯ
ಮೂಲಕ
ವೀಕ್ಷಕರ
ಮನಸೆಳೆದಿರುವ
ಧಾರಾವಾಡದ
ಬೆಣ್ಣೆಯಂತಹ
ಬೆಡಗಿ
ಐಶ್ವರ್ಯಾ
ತದ
ನಂತರ
ಖಳನಾಯಕಿಯಾಗಿ
ಬದಲಾಗಿದ್ದರು.
ಸಿನಿಮಾ,
ವೆಬ್
ಸೀರಿಸ್ನಲ್ಲಿ
ಮೋಡಿ
ಮಾಡ್ತಿರೋ
ಕಿರುತೆರೆ
ನಟ
ಅರ್ಫತ್
ಶರೀಫ್
‘ಅಗ್ನಿಸಾಕ್ಷಿ’ಯ
ತನು
ಆಗಿ
ಫೇಮಸ್ಸು
!
ಮುಂದೆ
ಕಲರ್ಸ್
ಕನ್ನಡದಲ್ಲಿ
ಪ್ರಸಾರವಾಗುತ್ತಿದ್ದ
‘ಅಗ್ನಿಸಾಕ್ಷಿ’
ಧಾರಾವಾಹಿಯಲ್ಲಿ
ನಾಯಕಿ
ಸನ್ನಿಧಿ
ತಂಗಿ
ತನು
ಆಗಿ
ಕಾಣಿಸಿಕೊಂಡಿದ್ದ
ಐಶ್ವರ್ಯಾ
ಸಾಲಿಮಠ್
ಮೊದಲ
ಬಾರಿಗೆ
ಖಳನಾಯಕಿಯಾಗಿ
ಭಡ್ತಿ
ಪಡೆದಿದ್ದರು.
ಹೌದು,
ಧಾರಾವಾಹಿಯ
ಆರಂಭದಲ್ಲಿ
ತನು
ಆಗಿ
ಬಣ್ಣ
ಹಚ್ಚುತ್ತಿದ್ದ
ಶೋಭಾ
ಶೆಟ್ಟಿ
ಧಾರಾವಾಹಿಯಿಂದ
ಹೊರಬಂದಾಗ
ಆ
ಜಾಗಕ್ಕೆ
ಬಂದವರೇ
ಐಶ್ವರ್ಯಾ
ಸಾಲಿಮಠ್.
ಕಡಿಮೆ
ಅವಧಿಯಲ್ಲಿಯೇ
ಸೀರಿಯಲ್
ಪ್ರಿಯರ
ಮನ
ಸೆಳೆಯುವಲ್ಲಿ
ಯಶಸ್ವಿಯಾದ
ಐಶ್ವರ್ಯಾ
ಸಾಲಿಮಠ್
ಮುಂದೆ
ಬದಲಾದುದು
ಪ್ರಿಯಾ
ಆಗಿ.

‘ಸೇವಂತಿ’
ಧಾರಾವಾಹಿಯಲ್ಲಿಯೂ
ನಟನೆ
ಉದಯ
ಟಿವಿಯಲ್ಲಿ
ಪ್ರಸಾರವಾಗುತ್ತಿರುವ
‘ಸೇವಂತಿ’
ಧಾರಾವಾಹಿಯಲ್ಲಿ
ಖಳನಾಯಕಿ
ಪ್ರಿಯಾ
ಪಾತ್ರಕ್ಕೆ
ಜೀವ
ತುಂಬಿರುವ
ಐಶ್ವರ್ಯಾ
ಸಾಲಿಮಠ್
ಇಂದಿಗೂ
ಕೂಡಾ
ಗುರುತಿಸುವುದು
ಅಗ್ನಿಸಾಕ್ಷಿ
ಧಾರಾವಾಹಿಯ
ತನು
ಆಗಿಯೇ.
ಅಗ್ನಿಸಾಕ್ಷಿ
ಧಾರಾವಾಹಿಯ
ತನು
ಪಾತ್ರಕ್ಕಿಂತಲೂ
ಮೊದಲು
ಮೂರು
ಧಾರಾವಾಹಿಗಳಲ್ಲಿ
ಐಶ್ವರ್ಯಾ
ಸಾಲಿಮಠ್
ನಟಿಸಿದ್ದರೂ
ಜನಪ್ರಿಯತೆ
ದೊರಕಿದ್ದು
ತನು
ಆಗಿ
ಬದಲಾದ
ಬಳಿಕವೇ.
ಧಾರಾವಾಹಿ
ಮುಗಿದು
ವರ್ಷ
ಎರಡು
ಕಳೆಯುತ್ತಾ
ಬಂದರೂ
ಜನ
ಇಂದಿಗೂ
ಅದೇ
ಪಾತ್ರದ
ಮೂಲಕ
ಗುರುತಿಸುವಾಗ
ಐಶ್ವರ್ಯಾಗೆ
ಸಂತಸವಾಗುತ್ತದೆಯಂತೆ.
ಪತಿ
ಕೂಡ
ನಟ!
ಸದ್ಯ
‘ರಾಮಾಚಾರಿ’
ಧಾರಾವಾಹಿಯ
ವೈಶಾಖಾ
ಪಾತ್ರಕ್ಕೆ
ಜೀವ
ತುಂಬುತ್ತಿರುವ
ಐಶ್ವರ್ಯಾ
ಸಾಲಿಮಠ್
ಕಿರುತೆರೆ
ನಟ
ವಿನಯ್
ಅವರೊಂದಿಗೆ
ದಾಂಪತ್ಯ
ಜೀವನಕ್ಕೆ
ಕಾಲಿರಿಸಿದ್ದಾರೆ.
ಇನ್ನು
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
ಕಪಲ್
ರಿಯಾಲಿಟಿ
ಶೋ
‘ರಾಜ
ರಾಣಿ
ಸೀಸನ್
2’ರಲ್ಲಿ
ಈ
ದಂಪತಿ
ಭಾಗವಹಿಸಿದ್ದರು.
English summary
Ramachari serial Vaishaka fame Aishwarya from Dharwad is a charming villain on TV, know more.
Wednesday, June 21, 2023, 10:51
Story first published: Wednesday, June 21, 2023, 10:51 [IST]