ನಾನು ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ ಎಂದ ಎಲಾನ್ ಮಸ್ಕ್: ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಭರವಸೆ | Elon Musk Says I’m a Big Fan of Narendra Modi, Plans to Visit India Next Year

International

oi-Naveen Kumar N

|

Google Oneindia Kannada News

ವಿಶ್ವದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ದೈತ್ಯ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್, ಭಾರತದ ಪ್ರಧಾನಿ
ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನರೇಂದ್ರ ಮೋದಿಯವರ ಐತಿಹಾಸಿಕ ಯುಎಸ್‌ ಪ್ರವಾಸದ ಮೊದಲ ದಿನ ಎಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಭೇಟಿ ಮಾಡಿದರು.

ಭೇಟಿಯ ನಂತರ ಮಾತನಾಡಿದ ಎಲಾನ್ ಮಸ್ಕ್, ನಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ, ಅವರು ಭಾರತಕ್ಕಾಗಿ ಉತ್ತಮ ಕೆಲಸಗಳನ್ನು ಮಾಡಲು ಬಯಸುತ್ತಾರೆ. ನನ್ನನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ, ಮೋದಿಯವರ ಆಹ್ವಾನದ ಮೇರೆಗೆ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದರು.

Narendra Modi during his US state visit

ನರೇಂದ್ರ ಮೋದಿಯವರು, ಹೊಸ ಕಂಪನಿಗಳನ್ನು ಆಹ್ವಾನಿಸಲು ಮತ್ತು ಬೆಂಬಲಿಸಲು ಬಯಸುತ್ತಾರೆ ಎಂದರು. ಭಾರತ ಸೋಲಾರ್ ಪವರ್ ವಿಚಾರದಲ್ಲಿ ಹೂಡಿಕೆ ಮಾಡಲು ಅದ್ಭುತ ದೇಶವಾಗಿದೆ, ಅತಿ ಶೀಘ್ರದಲ್ಲೇ ಸ್ಟಾರ್ ಲಿಂಕ್ ಇಂಟರ್ನೆಟ್‌ ಅನ್ನು ಭಾರತಕ್ಕೆ ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ಬಗ್ಗೆ ನರೇಂದ್ರ ಮೋದಿ ಉತ್ತಮ ಯೋಜನೆಗಳನ್ನು ಹೊಂದಿದ್ದಾರೆ ಎಂದು ಮಸ್ಕ್ ಹೇಳಿದರು.

ಭಾರತದ ಬಗ್ಗೆ ಹೆಚ್ಚಿನ ಭರವಸೆ

“ಭಾರತದ ಭವಿಷ್ಯದ ಬಗ್ಗೆ ನಂಬಲಾಗದಷ್ಟು ಉತ್ಸುಕನಾಗಿದ್ದೇನೆ. ಪ್ರಪಂಚದ ಯಾವುದೇ ದೊಡ್ಡ ದೇಶಕ್ಕಿಂತ ಭಾರತ ಹೆಚ್ಚಿನ ಭರವಸೆ ಹೊಂದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು. ನರೇಂದ್ರ ಮೋದಿ ಅವರು ಭಾರತದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದಾರೆ, ಭಾರತದಲ್ಲಿ ಹೂಡಿಕೆ ಮಾಡುವಂತೆ ಅವರು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಇದು ಪ್ರಧಾನಿ ಮೋದಿ ಜೊತೆಗಿನ ಅದ್ಭುತ ಭೇಟಿಯಾಗಿದೆ. ಹಲವು ವರ್ಷಗಳ ಹಿಂದೆ ನರೇಂದ್ರ ಮೋದಿ ನಮ್ಮ ಫ್ರೀಮಾಂಟ್ ಕಾರ್ಖಾನೆಗೆ ಭೇಟಿ ನೀಡಿದ್ದರು ಎಂದು ನೆನಪಿಸಿಕೊಂಡರು.

ಅಮೆರಿಕದಲ್ಲಿ ಅನಿವಾಸಿ ಭಾರತೀಯರ ಜೊತೆ ಪ್ರಧಾನಿ ಮೋದಿ ಚರ್ಚೆ: ಭರ್ಜರಿ ತಯಾರಿ ನಡೆಸಿದ ಭಾರತೀಯರು! ಅಮೆರಿಕದಲ್ಲಿ ಅನಿವಾಸಿ ಭಾರತೀಯರ ಜೊತೆ ಪ್ರಧಾನಿ ಮೋದಿ ಚರ್ಚೆ: ಭರ್ಜರಿ ತಯಾರಿ ನಡೆಸಿದ ಭಾರತೀಯರು!

ಪ್ರಧಾನಿ ನರೇಂದ್ರ ಮೋದಿ ನಿಜವಾಗಿಯೂ ಭಾರತಕ್ಕೆ ಉತ್ತಮ ಕೆಲಸ ಮಾಡುವ ಗುರಿ ಹೊಂದಿದ್ದಾರೆ. ಅವರು ಮುಕ್ತವಾಗಿರಲು ಬಯಸುತ್ತಾರೆ, ಹೊಸ ಉದ್ಯಮಗಳಿಗೆ ಬೆಂಬಲ ನೀಡುತ್ತಾರೆ, ಅದರಿಂದ ಭಾರತಕ್ಕೆ ಅನುಕೂಲವಾಗಬೇಕು ಎಂದು ಅವರು ಬಯಸುತ್ತಾರೆ ಎಂದು ಎಲಾನ್ ಮಸ್ಕ್ ಹೇಳಿದರು.

ಮುಂದಿನ ವರ್ಷ ಭಾರತಕ್ಕೆ ಬರುತ್ತೇನೆ

ಪ್ರಧಾನಿ ನರೇಂದ್ರ ಮೋದಿಯವರು ನನ್ನನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದೇನೆ. ಅದಕ್ಕಾಗಿ ನಾನು ಉತ್ಸುಕನಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು. ಅತಿ ಶೀಘ್ರದಲ್ಲೇ ಟೆಸ್ಲಾ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಮಸ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary

Tesla CEO Elon Musk, after meeting with Prime Minister Narendra Modi during his US state visit, expressed his admiration for Modi and revealed his plans to visit India again next year.

Story first published: Wednesday, June 21, 2023, 6:49 [IST]

Source link