ಸೇಡು ತೀರಿಸಿಕೊಳ್ಳುತ್ತಾರೆ ಎಂದ ಬಜರಂಗ್
ನಾನು ನನ್ನ ಮೂತ್ರದ ಮಾದರಿಯನ್ನು ನೀಡಿದ್ದೇನೆ. ಆದರೆ ನಂತರ ಕಿಟ್ ಅನ್ನು ಪರಿಶೀಲಿಸಿದೆ. ಅದರ ಅವಧಿ ಮೀರಿದೆ ಎಂದು ತಿಳಿಯಿತು. 2020, 2021, 2022 ದಿನಾಂಕದ ಅವಧಿ ಮೀರಿದ ಕಿಟ್ಗಳಿದ್ದವು. ನಾನು ಮತ್ತು ನನ್ನ ತಂಡ ಕಿಟ್ನ ವಿಡಿಯೋ ಮಾಡಿ, ಅದನ್ನು ನಾಡಾಗೆ ಮೇಲ್ ಮಾಡಿದ್ದೆ. ತಪ್ಪಿನ ಬಗ್ಗೆ ತಿಳಿಸಲು ನಾಡಾ ಅಧಿಕಾರಿಗಳಿಗೆ ಕರೆ ಮಾಡಿದ್ದೆವು. ಆದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ನಾಡಾದಿಂದ ಸ್ಪಷ್ಟೀಕರಣ ಕೇಳಿದ್ದೆ. ಆದರೆ ಇದುವರೆಗೂ ಮೌನ ವಹಿಸಿದೆ ಎಂದಿದ್ದಾರೆ.