ನರೇಗಾ ಹಗರಣ; ಮೊಹಮ್ಮದ್ ಶಮಿ ಸಹೋದರಿ, ಅತ್ತೆಯೇ ಮಾಸ್ಟರ್ ಮೈಂಡ್, ಕೆಲಸವೇ ಮಾಡದೆ ಹಣ ಪಡೆದ ಇಡೀ ಕುಟುಂಬ!

ಹಗರಣದಲ್ಲಿ ಯಾರಿದ್ದಾರೆ ನೋಡಿ?

ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ನಿಧಿ ಗುಪ್ತಾ ವತ್ಸ್ ಅವರು ಏಪ್ರಿಲ್ 3ರ ಬುಧವಾರ ಸಂಜೆ ಅಕ್ರಮ ನಡೆದಿರುವ ಕುರಿತು ಅಧಿಕೃತವಾಗಿ ಘೋಷಿಸಿದ್ದಾರೆ. ಕ್ರಿಕೆಟಿಗನ ಸಹೋದರಿ ಮತ್ತು ಅವರ ಸಂಬಂಧಿಕರು ಕಳೆದ 4 ವರ್ಷಗಳಿಂದ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡಿದ್ದು, ಅಕ್ರಮವಾಗಿ ವೇತನ ಪಡೆದಿರುವುದು ಗೊತ್ತಾಗಿದೆ. ಶಮಿ ಅಕ್ಕ ಶಬಿನಾ, ಅವರ ಪತಿ ಘಜ್ನವಿ, ಸಹೋದರಿಯ ಅತ್ತೆ ಗುಲೆ ಆಯೆಷಾ, ಶಬಿನಾ ಅವರ ಸೋದರಳಿಯರಾದ ಅಮೀರ್ ಸುಹೈಲ್, ನಸೀರುದ್ದೀನ್, ಶೇಖು ಮತ್ತು ಅವರ ಪುತ್ರರು, ಪುತ್ರಿಯರು ಇದರಲ್ಲಿ ಭಾಗಿಯಾಗಿದ್ದಾರೆ.

Source link