ನಮ್ಮ ಮೆಟ್ರೋ 2ನೇ ಹಂತಕ್ಕೆ 3045 ಕೋಟಿ ಅನುದಾನಕ್ಕೆ ಒಪ್ಪಿಗೆ | REC Limited Financial Assistance For BMRCL Phase 2 Namma Metro Project

Bengaluru

oi-Gururaj S

|

Google Oneindia Kannada News

ಬೆಂಗಳೂರು, ಜೂನ್ 26: ಬೆಂಗಳೂರು ನಗರದ ಜನರಿಗೆ ಸಿಹಿಸುದ್ದಿ. ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ 3045 ಕೋಟಿ ರೂ. ಅನುದಾನ ಸಿಗಲಿದೆ. ಜೂನ್ 24ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬಿಎಂಆರ್‌ಸಿಎಲ್‌ಗೆ ಯೋಜನೆ ಜಾರಿಗೊಳಿಸಲು ಆರ್ಥಿಕ ನೆರವು ನೀಡಲು ಒಪ್ಪಿಗೆ ಸೂಚಿಸಲಾಗಿದೆ.

ಕೇಂದ್ರದ ಇಂಧನ ಸಚಿವಾಲಯದ ಅಧೀನದಲ್ಲಿನ ಸಾರ್ವಜನಿಕ ವಲಯದ ಗ್ರಾಮೀಣ ವಿದ್ಯಿದೀಕರಣ ನಿಗಮ (ಆರ್‌ಇಸಿ) ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಆರ್ಥಿಕ ನೆರವು ನೀಡಲಿದೆ. ಅನುದಾನಕ್ಕಾಗಿ ಬಿಎಂಆರ್‌ಸಿಎಲ್ ಸಲ್ಲಿಕೆ ಮಾಡಿದ್ದ ಪ್ರಸ್ತಾವನೆಗೆ ಬೆಂಗಳೂರಿನಲ್ಲಿ ನಡೆದ ನಿಗಮದ ಬೋರ್ಡ್ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ.

ಬೆಂಗಳೂರಿನ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ, ಮಗು ಸಾವು: ಘಟನೆಯಲ್ಲಿ 11 ಮಂದಿ ವಿರುದ್ಧ ಚಾರ್ಜ್ ಶೀಟ್ಬೆಂಗಳೂರಿನ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ, ಮಗು ಸಾವು: ಘಟನೆಯಲ್ಲಿ 11 ಮಂದಿ ವಿರುದ್ಧ ಚಾರ್ಜ್ ಶೀಟ್

REC Limited Financial Assistance For BMRCL Phase 2 Namma Metro Project

ಆರ್‌ಇಸಿ ಒಂದು ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದೆ. ವಿದ್ಯುತ್ ಸೇರಿದಂತೆ ವಿವಿಧ ವಲಯಗಳ ಅಭಿವೃದ್ಧಿಗಾಗಿ ದೇಶಾದ್ಯಂತ ವಿವಿಧ ಸಂಸ್ಥೆಗಳಿಗೆ ಇದು ಹಣಕಾಸು ನೆರವು ನೀಡುತ್ತದೆ. ಬೆಂಗಳೂರು ನಗರದ ಸಂಚಾರ ದಟ್ಟಣೆ ತಗ್ಗಿಸಲು ಕೈಗೊಂಡಿರುವ ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೂ ಈಗ ಆರ್‌ಇಸಿ ಅನುದಾನ ನೀಡಲು ಒಪ್ಪಿದೆ.

Namma Metro Updates: ಬೆಂಗಳೂರಿನ 3 ಕಡೆ ಹೊಸ ಮೆಟ್ರೋ ಮಾರ್ಗ ಸ್ಥಾಪನೆಗೆ ಪ್ರಸ್ತಾವನೆ, Namma Metro Updates: ಬೆಂಗಳೂರಿನ 3 ಕಡೆ ಹೊಸ ಮೆಟ್ರೋ ಮಾರ್ಗ ಸ್ಥಾಪನೆಗೆ ಪ್ರಸ್ತಾವನೆ,

ನಮ್ಮ ಮೆಟ್ರೋ 2ನೇ ಹಂತ; ಬಿಎಂಆರ್‌ಸಿಎಲ್ ಸದ್ಯ ಇರುವ ನೇರಳೆ ಮತ್ತು ಹಸಿರು ಮಾರ್ಗದ ವಿಸ್ತರಣೆ ಮತ್ತು 2 ಹೊಸ ಮಾರ್ಗ ನಿರ್ಮಾಣವನ್ನು ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಕೈಗೊಂಡಿದೆ. ಮೆಟ್ರೋ ಯೆಲ್ಲೋ ಮತ್ತು ಪಿಂಕ್ ಮಾರ್ಗಗಳು ಈ ಯೋಜನೆಯ ಅಡಿಯಲ್ಲಿಯೇ ಬರುತ್ತವೆ.

Bengaluru Metro : 38 ಕಾರ್ಮಿಕರ ಸಾವು! ಬೆಂಗಳೂರು ಮೆಟ್ರೋ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಿಲ್ಲ!Bengaluru Metro : 38 ಕಾರ್ಮಿಕರ ಸಾವು! ಬೆಂಗಳೂರು ಮೆಟ್ರೋ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಿಲ್ಲ!

ನಗರದಲ್ಲಿನ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಮಾಡುವ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಆರ್‌ಇಸಿ ಒದಗಿಸುವ ಅನುದಾನವನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆಯೇ? ಅಥವ ಈಗ ಹೊಸದಾಗಿ ಟೆಂಡರ್ ನೀಡಿರುವ ಮೆಟ್ರೋ ಬೋಗಿಗಳ ಖರೀದಿಗೆ ಬಳಕೆ ಮಾಡಲಾಗುತ್ತದೆಯೇ? ಎಂಬ ಬಗ್ಗೆ ಬಿಎಂಆರ್‌ಸಿಎಲ್ ಯಾವುದೇ ಮಾಹಿತಿ ನೀಡಿಲ್ಲ.

ನಮ್ಮ ಮೆಟ್ರೋ ಮೊದಲ ಹಂತದ ಯೋಜನೆಯ ವಿಸ್ತರಣೆ ಭಾಗವಾಗಿಯೇ ನಡೆಯುತ್ತಿರುವ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಈಗಾಗಲೇ ಕರ್ನಾಟಕ ಸರ್ಕಾರ ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿದ್ದು, ಕಾಮಗಾರಿಗಳು ಸಹ ನಡೆಯುತ್ತಿವೆ. 2023ರಲ್ಲಿ ನಮ್ಮ ಮೆಟ್ರೋ ಜಾಲವನ್ನು 94.09 ಕಿ. ಮೀ.ಗಳಿಗೆ ವಿಸ್ತರಣೆ ಮಾಡುವ ಗುರಿಯೊಂದಿಗೆ ಬಿಎಂಆರ್‌ಸಿಎಲ್ ಕಾರ್ಯ ನಿರ್ವಹಣೆ ಮಾಡುತ್ತಿದೆ.

ನಮ್ಮ ಮೆಟ್ರೋ ಯೋಜನೆಯ 2ನೇ ಹಂತ 75 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ. 61 ನಿಲ್ದಾಣವನ್ನು ಹೊಂದಿದೆ. ಹಂತ -1ರ ನೇರಳೆ ಮತ್ತು ಹಸಿರು ಮಾರ್ಗಗಳು 4 ದಿಕ್ಕುಗಳಲ್ಲಿ ಒಟ್ಟು 34.6 ಕಿ. ಮೀ. ಉದ್ದದ ವಿಸ್ತರಣೆ ಮಾರ್ಗವನ್ನು ಹೊಂದಿದೆ. ಗೊಟ್ಟಿಗೆರೆ-ನಾಗವಾರ (21.25 ಕಿ. ಮೀ) ಮತ್ತು ಆರ್. ವಿ. ರಸ್ತೆ-ಬೊಮ್ಮಸಂದ್ರ (19.15 ಕಿ. ಮೀ) ಉದ್ದದ ಎರಡು ಹೊಸ ಮಾರ್ಗವನ್ನು ಒಳಗೊಂಡಿದೆ.

English summary

REC Limited which comes under the ministry of power will extend financial assistance of Rs 3,045 crore to Namma Metro Phase-2 at Bengaluru city.

Source link