‘ತಂಡದಲ್ಲಿ ಮ್ಯಾಚ್ ವಿನ್ನರ್ಗಳ ದಂಡಿದೆ’
ಒತ್ತಡವನ್ನು ಹೇಗೆ ಎದುರಿಸಬೇಕೆಂದು ಪಾಕಿಸ್ತಾನ ತಂಡಕ್ಕೆ ಗೊತ್ತಿದೆ. 2021ರ ಟಿ20 ವಿಶ್ವಕಪ್‌ನ ಗೆಲುವು ಟೀಮ್ ಇಂಡಿಯಾದ ಪ್ರಾಬಲ್ಯ ಕೊನೆಗೊಳಿಸಿದೆ. ಈಗ ನಮ್ಮವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಪಾಕ್ ತಂಡದ ಎದುರು ನಿಮ್ಮ ಬೇಳೆ ಬೇಯಲ್ಲ. ನಮ್ಮ ತಂಡದಲ್ಲಿ ಮ್ಯಾಚ್ ವಿನ್ನರ್‌ಗಳಿದ್ದಾರೆ. ಬಾಬರ್ ಅಜಮ್, ಶಾಹೀನ್ ಶಾ ಅಫ್ರಿದಿ, ಫಕರ್ ಜಮಾನ್, ಇಮಾಮ್ ವುಲ್ ಹಕ್, ಮೊಹಮ್ಮದ್ ರಿಜ್ವಾನ್ ಸೇರಿದಂತೆ ಹಲವರು ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ತಾಕತ್ತು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.